For Quick Alerts
  ALLOW NOTIFICATIONS  
  For Daily Alerts

  ಡಾ.ರಾಜ್ ನೆನಪಿಸಿಕೊಂಡ ನಟಿ ಅನುಷ್ಕಾ ಶೆಟ್ಟಿ

  |
  ಹುಟ್ಟುಹಬ್ಬದ ದಿನ ಡಾ ರಾಜ್ ಕುಮಾರ್ ರನ್ನ ನೆನಪಿಸಿಕೊಂಡ ನಟಿ ಅನುಷ್ಕಾ ಶೆಟ್ಟಿ | FILMIBEAT KANNADA

  ಕನ್ನಡ ಚಿತ್ರರಂಗದ ಮಾಣಿಕ್ಯ, ಮೇರು ನಟ ಡಾ ರಾಜ್ ಕುಮಾರ್ ಅವರ 91 ಹುಟ್ಟುಹಬ್ಬವನ್ನು ನಾಡಿನಾದ್ಯಂತ ಅದ್ಧೂರಿಯಾಗಿ ಆಚರಿಸಲಾಗಿದೆ. ಏಪ್ರಿಲ್ 24 ಬಂತೆಂದರೆ ರಾಜ್ ಅಭಿಮಾನಿಗಳಿಗೆ ದೊಡ್ಡ ಹಬ್ಬ. ಅಣ್ಣಾವ್ರ ಭಾವಚಿತ್ರಕ್ಕೆ ಹೂವಿನ ಅಲಂಕಾರ ಮಾಡಿ, ಪೂಜೆ ಸಲ್ಲಿಸಿ ವರನಟನ್ನು ನೆನೆದು ಧನ್ಯರಾಗುತ್ತಾರೆ.

  ಅಣ್ಣಾವ್ರ ಅಭಿಮಾನದ ಜಾತ್ರೆ ಕೇವಲ ಕನ್ನಡಿಗರಲ್ಲಿ ಮಾತ್ರ ಅಲ್ಲ, ದೇಶದೆಲ್ಲಡೆ ಅಭಿಮಾನಿಗಳು ರಾಜ್ ಉತ್ಸವ ಮಾಡುತ್ತಾರೆ. ಈ ಸಮಯದಲ್ಲಿ ಕನ್ನಡ ಚಿತ್ರರಂಗದ ಬಂಗಾರದ ಮನುಷ್ಯನನ್ನು ಸೌತ್ ಸ್ಟಾರ್ ಅನುಷ್ಕಾ ಶೆಟ್ಟಿ ಕೂಡ ನೆನಪಿಸಿಕೊಂಡಿದ್ದಾರೆ. ಡಾ.ರಾಜ್ ಕುಮಾರ್ 91ನೇ ಹುಟ್ಟುಹಬ್ಬಕ್ಕೆ ಸ್ವೀಟಿ ಅನುಷ್ಕಾ ಸಹ ಶುಭಾಶಯ ತಿಳಿಸಿದ್ದಾರೆ.

  ರಾಜ್ ಹುಟ್ಟುಹಬ್ಬದ ಖುಷಿ ಹೆಚ್ಚಿಸಿದ ಚಿನ್ನಸ್ವಾಮಿ ಕ್ರೀಡಾಂಗಣ

  ಸಾಮಾಜಿಕ ಜಾಲತಾಣದಲ್ಲಿ ಅನುಷ್ಕಾ "91ನೇ ಹುಟ್ಟುಹಬ್ಬದ ಸಮಯದಲ್ಲಿ ಲೆಜೆಂಡ್ ರಾಜ್ ಕುಮಾರ್ ಸರ್ ಅವರ ನೆನಪು" ಎಂದು ಬರೆದುಕೊಂಡಿದ್ದಾರೆ. ಅನುಷ್ಕಾ ಅವರಿಗೆ ರಾಜ್ ಮೇಲಿನ ಅಭಿಮಾನ ಕಂಡು ಅಣ್ಣಾವ್ರ ಅಭಿಮಾನಿಗಳು ಸಂತಸಗೊಂಡಿದ್ದಾರೆ.

  ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಖ್ಯಾತಿಗಳಿಸಿರುವ ಅನುಷ್ಕಾ ಕರ್ನಾಟಕದ ಕರಾವಳಿ ಬೆಡಗಿ. ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿ ಇರುವ ಸ್ವೀಟಿ, ಮೇರು ನಟನ ಹುಟ್ಟುಹಬ್ಬವನ್ನು ನೆನಪಸಿಕೊಂಡು ಶುಭಕೋರಿರುವುದು ಕನ್ನಡಿಗರಿಗೆ ಅನುಷ್ಕಾ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಾಗಿದೆ. ಅನುಷ್ಕಾ ಸದ್ಯ 'ಸೈಲೆನ್ಸ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

  English summary
  South Film Industry's star actress Anushka Shetty remembering Dr Rajkumar on his 91th Birthday. Anushka shetty is busy with her next project a title 'Silence'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X