»   » ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಅನುಷ್ಕಾ ಶೆಟ್ಟಿ ನಾಯಕಿ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಅನುಷ್ಕಾ ಶೆಟ್ಟಿ ನಾಯಕಿ?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊನೆಗೂ ಪರಭಾಷಾ ನಟೀಮಣಿ ಹಿಂದೆ ಬಿದ್ದಿದ್ದಾರೆ. ಇಲ್ಲಿಯವರೆಗೂ ಕನ್ನಡದ ನಾಯಕಿಯರಿಗೆ ಮಾತ್ರ ಮಣೆ ಹಾಕ್ತಿದ್ದ ದರ್ಶನ್, ತಮ್ಮ ಮುಂದಿನ ಚಿತ್ರಕ್ಕೆ ಟಾಲಿವುಡ್ ಮತ್ತು ಕಾಲಿವುಡ್ ನ ಬಹುಬೇಡಿಕೆಯ ನಟಿ ಅನುಷ್ಕಾರನ್ನ ಕರೆ ತರುವುದಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.

ಎಲ್ಲವೂ ಸುದ್ದಿಯಾಗಿದ್ದ ಪ್ರಕಾರವೇ ನಡೆದಿದ್ದರೆ ಇಷ್ಟೊತ್ತಿಗಾಗಲೇ ಅನುಷ್ಕಾ ಶೆಟ್ಟಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ವರ್ಷ ಕಳೆದಿರಬೇಕಾಗಿತ್ತು. ಆದ್ರೆ, ಅದೆಲ್ಲಾ ಕೇವಲ ಅಂತೆ ಕಂತೆಗಳ ಪುರಾಣವೋ..ಇಲ್ಲಾ, ಅನುಷ್ಕಾ ಒಪ್ಪಿಕೊಳ್ಳಲಿಲ್ಲವೋ..ಒಟ್ನಲ್ಲಿ ಅನುಷ್ಕಾ ಅಂತೂ ಗಾಂಧಿನಗರಕ್ಕೆ ಬರ್ಲಿಲ್ಲ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಹೀಗಿದ್ದರೂ ದರ್ಶನ್ ಅಭಿನಯದ ಹೊಸ ಚಿತ್ರ 'ಜಗ್ಗು ದಾದಾ'ನಿಗೆ ಅನುಷ್ಕಾ ಜೋಡಿಯಾಗ್ತಾರೆ ಅಂತ ಸ್ಯಾಂಡಲ್ ವುಡ್ ಅಂಗಳದಲ್ಲಿ ತಾಜಾ ಸುದ್ದಿ ಹರಿದಾಡುತ್ತಿದೆ. ಬರುವ ದರ್ಶನ್ ಹುಟ್ಟುಹಬ್ಬದಂದು (ಫೆಬ್ರವರಿ 16) 'ಜಗ್ಗು ದಾದಾ' ಚಿತ್ರದ ಮುಹೂರ್ತ ಅದ್ದೂರಿಯಾಗಿ ನೆರವೇರಲಿದೆ.

Anushka Shetty to make sandalwood debute with Darshan in Jaggu Dada

ಕಿಂಗ್ ಖಾನ್ ಶಾರೂಖ್ ಅಭಿನಯದ 'ಚೆನ್ನೈ ಎಕ್ಸ್ ಪ್ರೆಸ್' ಚಿತ್ರಕ್ಕೆ ಸ್ಕ್ರಿಪ್ ಬರೆದಿದ್ದ ಯೂನುಸ್ ಸೆಜ್ ವಾಲ್, 'ಜಗ್ಗು ದಾದಾ' ನಿಗೂ ಚಿತ್ರಕಥೆ ಬರೆಯುತ್ತಿದ್ದಾರೆ. ನವ ಪ್ರತಿಭೆ ರಾಘವೇಂದ್ರ ಹೆಗಡೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. [ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ ಹೊಸ ಚಿತ್ರ ಜಗ್ಗು ದಾದಾ]

'ಅಂಡರ್ ವರ್ಲ್ಡ್ ಡಾನ್' ಪಾತ್ರದಲ್ಲಿ ದರ್ಶನ್ 'ಜಗ್ಗು ದಾದಾ' ಆಗಲಿದ್ದಾರೆ ಅನ್ನುವ ಮಾಹಿತಿಯೂ ಹೊರಬಿದ್ದಿದೆ. ಮುಂಬೈ ಮೂಲದ 'ಆರ್.ಎಚ್.ಎಂಟರ್ಟೇನ್ಮೆಂಟ್' ಸಂಸ್ಥೆ ಚಿತ್ರಕ್ಕೆ ಬಂಡವಾಳ ಹಾಕುತ್ತಿದೆ.

ಸಖತ್ ರಿಚ್ಚಾಗಿ 'ಜಗ್ಗು ದಾದಾ' ಸಿನಿಮಾ ನಿರ್ಮಾಣ ಮಾಡುವುದರೊಂದಿಗೆ, ದರ್ಶನ್ ಗೆ ಸರಿಯಾದ ಜೋಡಿ ಅಗತ್ಯ ಅಂತ 'ಆರ್.ಎಚ್.ಎಂಟರ್ಟೇನ್ಮೆಂಟ್' ಸಂಸ್ಥೆ ಅನುಷ್ಕಾ ಜೊತೆ ಮಾತುಕತೆ ನಡೆಸಿದೆ. ಕಥೆ ಕೇಳಿ, ಅನುಷ್ಕಾ ಸ್ಯಾಂಡಲ್ ವುಡ್ ಗೆ ಬಂದರೆ, ದರ್ಶನ್ ಗೆ ಹೊಸ ಜೋಡಿ ಸಿಕ್ಕ ಹಾಗೆ.

English summary
Tollywood leading lady Anushka Shetty to make her Sandalwood debute with Darshan in Jaggu Dada. Mumbai based popular Production House RH Entertainment is producing this movie and they have opined that Anushka Shetty will make her Sandalwood Debute.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada