»   » ದರ್ಶನ್ ಮುಂದಿನ ಚಿತ್ರಕ್ಕೆ ನಿರ್ದೇಶಕ, ನಾಯಕಿ ಫಿಕ್ಸ್

ದರ್ಶನ್ ಮುಂದಿನ ಚಿತ್ರಕ್ಕೆ ನಿರ್ದೇಶಕ, ನಾಯಕಿ ಫಿಕ್ಸ್

Posted By:
Subscribe to Filmibeat Kannada

ಅದ್ದೂರಿ, ಅಂಬಾರಿ ಮುಂತಾದ ಸೂಪರ್ ಹಿಟ್ ಚಿತ್ರ ನೀಡಿದ ಎ ಪಿ ಅರ್ಜುನ್ ಅವರಿಗೆ ದೊಡ್ಡ ಸ್ಟಾರುಗಳ ಚಿತ್ರವನ್ನು ನಿರ್ದೇಶಿಸಲು ಎಲ್ಲಿಂದ ಸಾಧ್ಯ ಎಂದು ಗಾಂಧಿನಗರದಲ್ಲಿ ತಮಾಷೆ ಮಾಡುತ್ತಿದ್ದರಂತೆ.

ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ತನ್ನ ಮುಂದಿನ ಚಿತ್ರಕ್ಕೆ ಪ್ರತಿಭಾನ್ವಿತ ನಿರ್ದೇಶಕ ಎ ಪಿ ಅರ್ಜುನ್ ಅವರಿಗೆ ಚಾನ್ಸ್ ನೀಡಿದ್ದಾರೆ. ದರ್ಶನ್ ಅವರ ಮುಂದಿನ ಚಿತ್ರ 'ಐರಾವತ' ಚಿತ್ರವನ್ನು ಅರ್ಜುನ್ ನಿರ್ದೇಶಿಸಲಿದ್ದಾರೆ.

ಅದ್ದೂರಿ ಮತ್ತು ಅಂಬಾರಿ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರ ನೀಡಿದ ನಂತರ ಅರ್ಜುನ್, ಪುನೀತ್ ರಾಜಕುಮಾರಿಗಾಗಿ ಚಿತ್ರ ನಿರ್ದೇಶಿಸ ಬೇಕಾಗಿತ್ತಂತೆ. ಆದರೆ ಕಾರಣಾಂತರದಿಂದ ಆ ಚಿತ್ರ ಸೆಟ್ಟೇರಲೇ ಇಲ್ಲ.

A P Arjun to direct Darshan's next movie Airavatha

ದರ್ಶನ್ ಸಹೋದರ ದಿನಕರ್ ತೂಗುದೀಪ್ ಕೂಡಾ ಹಿಟ್ ಚಿತ್ರ ನೀಡಿದ ನಿರ್ದೇಶಕ. ವಯಸ್ಸಿನಲ್ಲಿ ದಿನಕರ್ ಗಿಂತ ಅರ್ಜುನ್ ಚಿಕ್ಕವನಾಗಿದ್ದರೂ, ಪ್ರತಿಭೆಯಲ್ಲಿ ಅವನು ಯಾರಿಗೂ ಕಮ್ಮಿಯಿಲ್ಲ.

ಕಥೆ ಚೆನ್ನಾಗಿದೆ, ಚಿತ್ರಕ್ಕಾಗಿ ಚೆನ್ನಾಗಿ ಹೋಂವರ್ಕ ಮಾಡಿದ್ದಾನೆ. ಅವನು ಯಾವ ಸ್ಟಾರ್ ನಿರ್ದೇಶಕರಿಗಿಂತಲೂ ಕಮ್ಮಿಯಿಲ್ಲ. ಹಾಗಾಗಿ ಅರ್ಜುನ್ ಕಥೆಯನ್ನು ಒಪ್ಪಿಕೊಂಡೆ ಎನ್ನುತ್ತಾರೆ ಕನ್ನಡ ಬಾಕ್ಸಾಫೀಸ್ ಕಿಂಗ್ ದರ್ಶನ್.

ಸಂದೇಶ್ ಕಂಬೈನ್ಸ್ ಬ್ಯಾನರಡಿಯಲಿ ಮೂಡಿ ಬರಲಿರುವ ಚಿತ್ರಕ್ಕೆ ನಾಯಕಿಯಾಗಿ 'ನಿನ್ನಿಂದಲೇ' ಚಿತ್ರದ ನಾಯಕಿ ಎರಿಕಾ ಫೆರ್ನಾಂಡಿಸ್ ಆಯ್ಕೆಯಾಗಿದ್ದಾರೆ.

English summary
A P Arjun to direct Darshan's next movie Airavatha. Sandesh Combines banner producing this movie and Erica Fernandes heroine of this movie. 
Please Wait while comments are loading...