»   » ನರಸಿಂಹರಾಜು ಮೊಮ್ಮಕ್ಕಳಿಂದ ಮತ್ತೊಂದು ಚಿತ್ರ

ನರಸಿಂಹರಾಜು ಮೊಮ್ಮಕ್ಕಳಿಂದ ಮತ್ತೊಂದು ಚಿತ್ರ

Posted By:
Subscribe to Filmibeat Kannada
Avinash Diwakar
'ಜುಗಾರಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅರವಿಂದ್ ಹಾಗು ಅವಿನಾಶ್ ಸಹೋದರರು ಈಗ ಮತ್ತೆ ಇನ್ನೊಂದು ಚಿತ್ರದ ಮೂಲಕ ಬರಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಚಿತ್ರ ಅವರ 'ಗೋಲ್ಸ್ ಅಂಡ್ ಡ್ರೀಮ್ಸ್' ಬ್ಯಾನರ್ ಮೂಲಕ ಬರಲಿದೆ. ಈ ಸಹೋದರರು ಹಾಸ್ಯಚಕ್ರವರ್ತಿ ದಿವಂಗತ ನರಸಿಂಹರಾಜು ಮೊಮ್ಮಕ್ಕಳೆಂಬುದು ವಿಶೇಷ.

ಜುಗಾರಿ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಅಷ್ಟೊಂದು ಸದ್ದು ಮಾಡದಿದ್ದರೂ ಈ ಅಣ್ಣ-ತಮ್ಮಂದಿರನ್ನು ಕನ್ನಡ ಪ್ರೇಕ್ಷಕರು ಗುರುತಿಸಿರುವುದಂತೂ ಸತ್ಯ. ನರಸಿಂಹರಾಜು ನಂತರ ಅವರ ಈ ಮೊಮ್ಮಕ್ಕಳು ಸುಮಾರು ನಲವತ್ತು ವರ್ಷಗಳ ಬಳಿಕ ಗಾಂಧಿನಗರಕ್ಕೆ ಕಾಲಿಟ್ಟಿದ್ದಾರೆ. ಅವರಲ್ಲಿ ಒಬ್ಬರು ನಿರ್ದೇಶಕರು, ಇನ್ನೊಬ್ಬರು ನಟರು ಎಂಬುದು ಗಮನಿಸಬೇಕಾದ ಅಂಶ.

ಡಾ ರಾಜ್ ಕುಮಾರ್ ಕಾಲದಲ್ಲಿ ಬಹಳಷ್ಟು ಚಿತ್ರಗಳಲ್ಲಿ ಹಾಸ್ಯನಟರಾಗಿ ಕಾಣಿಸಿಕೊಂಡಿದ್ದ ನರಸಿಂಹರಾಜು, 1972ರಲ್ಲಿ 'ಪ್ರೊಫೆಸರ್ ಹುಚ್ಚುರಾಯ' ಚಿತ್ರವನ್ನು ನಿರ್ಮಿಸಿದ್ದರು. ಈಗ ಅವರ ಮೊಮ್ಮಕ್ಕಳ ಕಾಲ. ಅವರಲ್ಲೊಬ್ಬ ಅರವಿಂದ್, ನಿರ್ಮಾಣದ ಜೊತೆ ನಿರ್ದೇಶನದ ಜವಾಬ್ಧಾರಿಯನ್ನೂ ಹೊತ್ತಿದ್ದಾರೆ, ಭರವಸೆ ಮೂಡಿಸಿದ್ದಾರೆ.

ಜುಲೈ 24 ನರಸಿಂಹರಾಜುರ ಜನ್ಮದಿನ. ಅಂದೇ ಅವರ ಮೊಮ್ಮಕ್ಕಳಾದ ಈ ಸಹೋದರರ ಹೊಸ ಚಿತ್ರ ಸೆಟ್ಟೇರಲಿದೆ. ಬೆಂಗಳೂರಿನ ಟೌನ್ ಹಾಲ್ ನಲ್ಲಿ ನಡೆಯಲಿರುವ ನರಸಿಂಹರಾಜು ಹುಟ್ಟುಹಬ್ಬದ ಸಮಾರಂಭದ ಜೊತೆಯಲ್ಲೇ ಹೊಸ ಚಿತ್ರದ ಮುಹೂರ್ತ ಕೂಡ ನಡೆಯಲಿದೆ. ಈ ಚಿತ್ರಕ್ಕೆ ಹೆಸರಿನ್ನೂ ನಿರ್ಧಾರವಾಗಿಲ್ಲ. ನಾಯಕ ಅವಿನಾಶ್ಮ ನಿರ್ದೇಶಕ ಅರವಿಂದ್.

ಯಶಸ್ಸುಉ ಹುಡುಕಿ ಹೋಗುವ , ಹುಡುಕಾಟದ ಹಂತದಲ್ಲಿ ಮೋಸ ಹೋಗಿ ಫಜೀತಿಗೊಳಗಾಗುವ ಹುಡುಗರ ಸ್ಟೋರಿ ಈ ಚಿತ್ರದ ಕಥೆ. ವಾಸ್ತವ ಅಂಶಗಳ ಸುತ್ತವೇ ಕಥೆ ಸುತ್ತಿದರೂ ಹಾಸ್ಯ, ಸೆಂಟಿಮೆಂಟ್, ಲವ್. ಆಕ್ಷನ್ ಗಳ ಮಿಶ್ರಣ ಈ ಚಿತ್ರದಲ್ಲಿದೆ ಎಂಬುದು ಚಿತ್ರತಂಡದಿಂದ ಬಂದ ಮಾಹಿತಿ.

ಅವಿನಾಶ್ ಅವರೊಂದಿಗೆ ಇನ್ನೂ ಮೂವರು ಯುವನಟರೂ ನಟಿಸಲಿದ್ದಾರೆ. ಅವರಲ್ಲಿ ಆಯ್ಕೆಯಾಗಿರುವ ಇಬ್ಬರೆಂದರೆ ಜಾಕಿ ಪ್ರದೀಪ್ ಹಾಗೂ ದೀಪಕ್ ಶೆಟ್ಟಿ. ಇನ್ನೊಬ್ಬ ಯುವ ನಟನಿಗಾಗಿ ಹುಡುಕಾಟ ನಡೆದಿದೆ. ಜೊತೆಯಲ್ಲಿ ನಾಯಕಿ ಕೂಡ ಆಯ್ಕೆಯಾಗಬೇಕಾಗಿದೆ, ಯುವನಟರಿಗೆ ಬೇಕಾದ ನಾಯಕಿಯರ ಬಗ್ಗೆ ಯಾವುದೇ ಮಾಹಿತಿಯಿಲ್ಲ.

ಅನಂತ್ ನಾಗ್, ಕಾಶೀನಾಥ್, ಸಿಹಿಕಹಿ ಚಂದ್ರು, ಪಯಣ ರವಿಶಂಕರ್, ಆಸಿಫ್ ಕ್ಷತ್ರಿಯ ಮುಂತಾದ ಬಹಳಷ್ಟು ಪ್ರತಿಭಾವಂತ ನಟರು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಂಸಲೇಖರ ಸಂಗೀತ ಹಾಗೂ ಸಾಹಿತ್ಯ ಈ ಚಿತ್ರದ ವಿಶೇಷಗಳಲ್ಲೊಂದು. ಜುಗಾರಿ ಚಿತ್ರಕ್ಕೆ ಛಾಯಾಗ್ರಾಹಕರಾಗಿದ್ದ ಅನಂತ್ ಅರಸ್ ಈ ಚಿತ್ರಕ್ಕೂ ಆಯ್ಕೆಯಾಗಿದ್ದಾರೆ. (ಒನ್ ಇಂಡಿಯಾ ಕನ್ನಡ)

English summary
Aravind and Avinash Diwakar brothers, the Jugari Cross Kannada movie fame, to start new project. This movie will start on 24th July 2012, on the Celebration Day of their Grand Father Late actor Narasimharaju. Avinash is the Hero and Aravindh directs this.
 
Please Wait while comments are loading...