»   » ಅಜಿತ್ ಜತೆ ನಟಿಸಿದ್ದು ನನ್ನ ಭಾಗ್ಯ : ಅಕ್ಷರ ಗೌಡ

ಅಜಿತ್ ಜತೆ ನಟಿಸಿದ್ದು ನನ್ನ ಭಾಗ್ಯ : ಅಕ್ಷರ ಗೌಡ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಆತ ತಮಿಳು ಚಿತ್ರರಂಗದ ದೊಡ್ಡ ನಟ ಆತನ ಜತೆ ನಟಿಸುವ ಅವಕಾಶ ಸಿಕ್ಕರೆ ಸಾಕು ಎಂದು ಯುವನಟಿಯರು ಕಾದಿರುವಾಗ ಆತನಿಗೆ ಅವಾಜ್ ಹಾಕುವ ದೃಶ್ಯಗಳು ಸಿಕ್ಕರೆ....ಮಾತೇ ಹೊರಡುವುದಿಲ್ಲ. ಇಂಥದ್ದೇ ಅನುಭವ ಪಡೆದುಕೊಂಡಿದ್ದಾರೆ ಬೆಂಗಳೂರು ಮೂಲದ ನಟಿ ಅಕ್ಷರಾ ಗೌಡ. ಆರಂಭಂ ಚಿತ್ರದಲ್ಲಿ ಅಜಿತ್ ಕುಮಾರ್ ಅವರ ಜತೆ ಕೆಲ ಸೀನ್ ನಲ್ಲಿ ಕಾಣಿಸಿಕೊಂಡಿರುವ ಅಕ್ಷರಾ ಸ್ಟೈಲ್, ಡೈಲಾಗ್ ಪ್ರೇಕ್ಷಕರಿಗೆ ಇಷ್ಟವಾಗಿದೆ.

ಅಕ್ಷರಾಗೆ ಸಿಕ್ಕಿರುವುದು ನೆಗಟಿವ್ ಶೇಡ್ ಪಾತ್ರವಾದರೂ ಚಿತ್ರದ ಕ್ಲೈಮ್ಯಾಕ್ಸ್ ಹಂತದಲ್ಲಿ ಅಕ್ಷರ ಪಾತ್ರದ ಸುತ್ತಾ ಕಥೆ ಸುತ್ತುತ್ತದೆ. ಅಜಿತ್ ಅವರಿಗೆ ಇರುವ ಅಭಿಮಾನಿಗಳ ದಂಡು ಕಂಡು ಕೊಂಚ ಭಯವಾಗಿತ್ತು. ಒಂದು ಸೀನ್ ನಲ್ಲಿ ನನ್ನ ಮುಂದೆ ಕುಳಿತ ಅಜಿತ್ ಗೆ ಗಾಗಲ್ಸ್ ತೆಗೆದಿಡು ಎಂದು ಆರ್ಡರ್ ಮಾಡುತ್ತೇನೆ. ಈ ದೃಶ್ಯ ಮಾಡುವಾಗ ಹೆದರಿದ್ದೆ. ಅದರೆ, ಅಜಿತ್ ಧೈರ್ಯ ತುಂಬಿದ ಮೇಲೆ ದೃಶ್ಯ ಸುಂದರವಾಗಿ ಬಂತು.

ನಾನು ಅಜಿತ್ ಅವರ ಅಪ್ಪಟ ಅಭಿಮಾನಿ. ಅವರೊಟ್ಟಿಗೆ ಚಿತ್ರದಲ್ಲಿ ನಟಿಸಿದ್ದು ನನ್ನ ಭಾಗ್ಯ. ನಾನು ಕಂಡಿರುವ ಅತ್ಯಂತ ಸರಳ ವ್ಯಕ್ತಿ. ಆರಂಭಂ ಚಿತ್ರದಲ್ಲಿ ನನ್ನದು ಸಣ್ಣ ಪಾತ್ರವಾದರೂ ಅಜಿತ್ ಜತೆ ನಟಿಸಿದ್ದೇ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದು ಅಕ್ಷರಾ ಹೇಳಿದ್ದಾರೆ.

ನಾನು ಶಾಸ್ತ್ರೀಯ ನೃತ್ಯಗಾರ್ತಿ. ಡ್ಯಾನ್ಸ್ ನನಗೆ ತುಂಬಾ ಇಷ್ಟ. ಚಿಕ್ಕ ವಯಸ್ಸಿನಲ್ಲೆ ನೃತ್ಯ, ಮಾಡೆಲಿಂಗ್ ಬಗ್ಗೆ ಆಕರ್ಷಣೆ ಬೆಳೆಯಿತು. ಬೆಂಗಳೂರಿನಿಂದ ಮುಂಬೈ ಜಗತ್ತಿಗೆ ಮಾಡೆಲಿಂಗ್ ಕರೆದುಕೊಂಡು ಬಂದಿತು. ಈಗ ನಟನೆಯಲ್ಲಿ ವೃತ್ತಿಯನ್ನು ಕಂಡು ಕೊಳ್ಳುತ್ತಿದ್ದೇನೆ ಎಂದು ಅಕ್ಷರಾ ತಮ್ಮ ಬಗ್ಗೆ ಹೇಳಿಕೊಂಡಿದ್ದಾರೆ. ಅಕ್ಷರಾ ಅವರ ಅಭಿಮಾನಿಗಳು ಏನು ಹೇಳಿದ್ದಾರೆ ಮುಂದೆ ಓದಿ..

ಇಷ್ಟವಾದ ನಟ, ನಟಿಯರು

ಹಾಲಿವುಡ್ ನಲ್ಲಿ ಬ್ರಾಡ್ಲಿ ಕೂಪರ್, ಬಾಲಿವುಡ್ ನಲ್ಲಿ ಕರೀನಾ ಕಪೂರ್ ಇಷ್ಟ ಎಂದ ಅಕ್ಷರಾ, ಅಜಿತ್ ಹೆಸರು ಸೇರಿಸುವುದನ್ನು ಮರೆಯಲಿಲ್ಲ

ಆರಂಭಂ ನಿಂದ ಆರಂಭ

ಅಜಿತ್ ಜತೆ ನಟನೆ, ಇಡೀ ಚಿತ್ರ ತಂಡ ಹೊಸಬರನ್ನು ನಡೆಸಿಕೊಳ್ಳುವ ರೀತಿಗೆ ಚಿರಋಣಿ

ಫಿಟ್ನೆಸ್ ಬಗ್ಗೆ

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಅಕ್ಷರಾ ಗೌಡ. ನೃತ್ಯ, ಮಾಡೆಲಿಂಗ್ ಜತೆಗೆ ಕ್ರೀಡಾಪಟು ಕೂಡಾ. ರಾಷ್ಟ್ರಮಟ್ಟದ ಥ್ರೋ ಬಾಲ್ ಆಟಗಾರ್ತಿಯಾಗಿರುವ ಅಕ್ಷರಾ, ಫಿಟ್ನೆಸ್ ಮಹತ್ವದ ಬಗ್ಗೆ ಚೆನ್ನಾಗಿ ಅರಿವಿದೆ. ಅದೇ ನಮ್ಮ ಶಕ್ತಿ, ಸ್ಪೂರ್ತಿ

ಚಿತ್ರಗಳ ಬಗ್ಗೆ

ಬಾಲಿವುಡ್ ನಲ್ಲಿ ತಮಿಳಿನ ನಾಡೋಡಿಗಳ್, ಕನ್ನಡದ ಹುಡುಗರು ಚಿತ್ರದ ರಿಮೇಕ್ ಆದ ರಂಗ್ರೇಜ್ ಚಿತ್ರದಲ್ಲಿ ಅಕ್ಷರ ನಟಿಸಿದ್ದರು. ಇದಾದ ನಂತರ ಆರಂಭಂ ಚಿತ್ರದಿಂದ ಉತ್ತಮ ಬ್ರೇಕ್ ಸಿಕ್ಕಿದೆ. ಈಗ ತಮಿಳು ಚಿತ್ರರಂಗದಲ್ಲಿ ಉತ್ತಮ ಪಾತ್ರಕ್ಕಾಗಿ ಕಾದಿದ್ದಾರೆ. ಅವಕಾಶ ಸಿಕ್ಕರೆ ಕನ್ನಡದಲ್ಲೂ ನಟಿಸಲು ಸದಾ ಸಿದ್ದ ಎಂದಿದ್ದಾರೆ.

ಅಕ್ಷರಾ ಕ್ರೇಜ್

ಅಕ್ಷರಾ ಬಗ್ಗೆ ತಮಿಳು ಸಿನಿರಸಿಕರು ಈಗಾಗಲೆ ಕ್ರೇಜ್ ಬೆಳೆಸಿಕೊಂಡಿದ್ದಾರೆ. ಅಭಿಮಾನಿಯೊಬ್ಬರ ಟ್ವೀಟ್ ನೋಡಿ

ಇದೇ ನನ್ನ ಅಕೌಂಟ್

ಇದೇ ನನ್ನ ಟ್ವಿಟರ್ ಖಾತೆ(@official_AG89) ಬೇರೆಯದ್ದಕ್ಕೆ ಫಾಲೋ ಆಗ್ಬೇಡಿ ಎಂದು ಅಕ್ಷರಾ ಟ್ವೀಟ್ ಮಾಡಿದ್ದಾರೆ

ಅಜಿತ್ ಜತೆ ಶೂಟಿಂಗ್

ಅಜಿತ್ ಜತೆ ಬೋಟ್ ಚೇಸಿಂಗ್ ಸೀನ್ ನಲ್ಲಿ ಅಕ್ಷರಾ

ಆರಂಭಂ ಚಿತ್ರತಂಡ

ಅಜಿತ್ ಜತೆ ಬೋಟ್ ಚೇಸಿಂಗ್ ಸೀನ್ ನಲ್ಲಿ ಅಕ್ಷರಾ ಹಾಗೂ ಆರಂಭಂ ಚಿತ್ರತಂಡ

English summary
How does it feel to be somebody who asks Ajith Kumar to remove his glasses and subsequently invite the wrath of his fans across the world? The dusky Bangalore beauty Akshara Gowda has revealed how she felt when they shot the scene in recently-released movie Arrambam.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada