For Quick Alerts
  ALLOW NOTIFICATIONS  
  For Daily Alerts

  'ರಾಬರ್ಟ್' ಚಿತ್ರದ ಬಗ್ಗೆ ಬ್ರೇಕಿಂಗ್ ನ್ಯೂಸ್ ನೀಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

  |
  Arjun Janya and V.Harikrishna Team Up For Robert and Odeya film.| Filmibeat Kannada

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ರಾಬರ್ಟ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ವಾರಣಾಸಿಯಲ್ಲಿ ರಾಬರ್ಟ್ ಚಿತ್ರದ ಚಿತ್ರೀಕರಣ ಮುಗಿಸಿ ಬೆಂಗಳೂರಿನ ವಾಪಸ್ ಆಗಿದೆ ಚಿತ್ರತಂಡ. ಈಗಾಗಲೆ ಸಾಕಷ್ಟು ಚಿತ್ರೀಕರಣ ಮುಗಿಸಿರುವ ರಾಬರ್ಟ್ ಚಿತ್ರದಿಂದ ದರ್ಶನ್ ಬ್ರೇಕಿಂಗ್ ಸುದ್ದಿಯೊಂದನ್ನು ನೀಡಿದ್ದಾರೆ.ದರ್ಶನ್ ನೀಡಿದೆ ಸುದ್ದಿಗೆ ಅಭಿಮಾನಿಗಳಲ್ಲಿ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

  ಅಂದ್ಹಾಗೆ ಚಿತ್ರದ ಬಗ್ಗೆ ಡಿ ಬಾಸ್ ಹೇಳಿದ್ದೇನು? ರಾಬರ್ಟ್ ಚಿತ್ರದಲ್ಲಿ ಇಬ್ಬರು ಸಂಗೀತ ನಿರ್ದೇಶಕರು ಕೆಲಸ ಮಾಡುತ್ತಿದ್ದಾರೆ ಎನ್ನುವ ವಿಚಾರವನ್ನು ದರ್ಶನ್ ಬಹಿರಂಗ ಪಡಿಸಿದ್ದಾರೆ. ಇತ್ತೀಚಿಗಷ್ಟೆ ರಾಬರ್ಟ್ ಚಿತ್ರದ ಸಂಗೀತ ನಿರ್ದೇಶಕರ ಹೆಸರನ್ನು ನಿರ್ದೇಶಕ ತರುಣ್ ಸುಧೀರ್ ಬಹಿರಂಗ ಪಡಿಸಿದ್ದರು. ಆದ್ರೀಗ ದರ್ಶನ್, ಚಿತ್ರದಲ್ಲಿ ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ ಮತ್ತು ವಿ. ಹರಿಕೃಷ್ಣ ಇಬ್ಬರು ಕೆಲಸ ಮಾಡುತ್ತಿರುವ ವಿಚಾರವನ್ನು ಬಹಿರಂಗ ಪಡೆಸಿದ್ದಾರೆ.

  ದರ್ಶನ್ ತೂಗುದೀಪ ನಿವಾಸದ ಮುಂದೆ ಆಯುಧ ಪೂಜೆಯ ಸಂಭ್ರಮದರ್ಶನ್ ತೂಗುದೀಪ ನಿವಾಸದ ಮುಂದೆ ಆಯುಧ ಪೂಜೆಯ ಸಂಭ್ರಮ

  ದರ್ಶನ್ ಚಿತ್ರಕ್ಕೆ ಇಬ್ಬರು ಸಂಗೀತ ನಿರ್ದೇಶಕರು

  ದರ್ಶನ್ ಚಿತ್ರಕ್ಕೆ ಇಬ್ಬರು ಸಂಗೀತ ನಿರ್ದೇಶಕರು

  ಇಬ್ಬರು ಸಂಗೀತ ನಿರ್ದೇಶಕರ ಬಗ್ಗೆ ದರ್ಶನ್ ಟ್ವಿಟ್ಟರ್ ನಲ್ಲಿ ಬಹಿರಂಗ ಪಡಿಸಿದ್ದಾರೆ. ರಾಬರ್ಟ್ ಚಿತ್ರಕ್ಕೆ ಅರ್ಜುನ್ ಜನ್ಯಾ ಹೆಸರು ಮಾತ್ರ ಕೇಳಿಬರುತ್ತಿತ್ತು. ಆದ್ರೀಗ ವಿ.ಹರಿಕೃಷ್ಣ ಕೂಡ ಎಂಟ್ರಿಯಾಗಿದ್ದಾರೆ. ರಾಬರ್ಟ್ ಮಾತ್ರವಲ್ಲದೆ ಒಡೆಯ ಚಿತ್ರದಲ್ಲೂ ಈ ಇಬ್ಬರು ಸಂಗೀತ ನಿರ್ದೇಶಕರು ಕೆಲಸ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ರೆ ವಿ.ಹರಿಕೃಷ್ಣ ಚಿತ್ರಕ್ಕೆ ಬ್ಯಾಗ್ರೌಂಡ್ ಸಂಗೀತ ನೀಡುತ್ತಿದ್ದಾರಂತೆ.

  ದರ್ಶನ್ ಅಭಿಮಾನಿಗಳಿಗೆ ಕ್ಷಮೆ ಕೇಳಿದ 'ಒಡೆಯ' ನಿರ್ಮಾಪಕ ಸಂದೇಶ್ದರ್ಶನ್ ಅಭಿಮಾನಿಗಳಿಗೆ ಕ್ಷಮೆ ಕೇಳಿದ 'ಒಡೆಯ' ನಿರ್ಮಾಪಕ ಸಂದೇಶ್

  ದರ್ಶನ್ ಹೇಳಿದ್ದೇನು?

  ದರ್ಶನ್ ಹೇಳಿದ್ದೇನು?

  ಈ ಬಗ್ಗೆ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. "ನನ್ನ ‘ಒಡೆಯ' ಮತ್ತು ‘ರಾಬರ್ಟ್' ಚಿತ್ರಗಳಿಗೆ ಹಾಡುಗಳ ಸಂಗೀತ ನಿರ್ದೇಶನ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ರವರದಾಗಿರುತ್ತದೆ. ಎರಡೂ ಚಿತ್ರಗಳಿಗೂ ಹಿನ್ನಲೆ ಸಂಗೀತವನ್ನು ನಮ್ಮ ರಿರೆಕಾರ್ಡಿಂಗ್ ಕಿಂಗ್ ವಿ.ಹರಿಕೃಷ್ಣ ರವರು ನೀಡಲಿದ್ದಾರೆ. ನಿಮ್ಮ ದಾಸ ದರ್ಶನ್ " ಎಂದು ಹೇಳಿದ್ದಾರೆ.

  ಅಭಿಮಾನಿಗಳು ಫುಲ್ ಖುಷ್

  ಅಭಿಮಾನಿಗಳು ಫುಲ್ ಖುಷ್

  ದರ್ಶನ್ ಈ ವಿಚಾರ ಹೇಳುತ್ತಿದ್ದಂತೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಒಂದೆ ಚಿತ್ರದಲ್ಲಿ ಇಬ್ಬರು ಸಂಗೀತ ನಿರ್ದೇಶಕರು ಅಂದ್ರೆ ಕುತೂಹಲ ಮತ್ತಷ್ಟು ಹೆಚ್ಚಾಗಿದೆ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಅದ್ಭುತವಾದ ಕಾಂಬಿನೇಷನ್ ಒಂದೆ ಸಿನಿಮಾದಲ್ಲಿ ಇದ್ದಾರೆ ಅಂದ್ರೆ ಅಭಿಮಾನಿಗಳಿಗೆ ಹಾಡುಗಳ ರಸದೌತಣ ಪಕ್ಕ.

  ನಿರ್ಮಾಪಕರ ಬೆನ್ನು ತಟ್ಟಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ದಾಸನಿರ್ಮಾಪಕರ ಬೆನ್ನು ತಟ್ಟಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ದಾಸ

  ಬಹುತೇಕ ಚಿತ್ರೀಕರಣ ಮುಗಿಸಿರುವ ಒಡೆಯ

  ಬಹುತೇಕ ಚಿತ್ರೀಕರಣ ಮುಗಿಸಿರುವ ಒಡೆಯ

  ಒಡೆಯ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಈಗಾಗಲೆ ಚಿತ್ರದ ಕೆಲವು ಪೋಸ್ಟರ್ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಪುಟ್ಟ ಕಂದಮ್ಮನನ್ನು ಎತ್ತಿ ಆಡಿಸುತ್ತಿರುವ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಹರಿದುಬಂದಿದೆ.

  English summary
  Kannada famous music director Arjun Janya and V.Harikrishna are working together in Robert and Odeya films. Kannada actor Darshan Starrer Robert and Odeya movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X