»   » ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಅರ್ಜುನ್ ಜನ್ಯ ಸಂಗೀತ ಯಾತ್ರೆ ಶುರು

ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಅರ್ಜುನ್ ಜನ್ಯ ಸಂಗೀತ ಯಾತ್ರೆ ಶುರು

Posted By:
Subscribe to Filmibeat Kannada

ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ತಮ್ಮ ಸಂಗೀತದ ಮೂಲಕ ದೊಡ್ಡ ಮಟ್ಟದ ಜನಮನ್ನಣೆಯನ್ನು ಗಳಿಸಿದ್ದಾರೆ. ಕನ್ನಡದಲ್ಲಿ ಸಾಕಷ್ಟು ಸೂಪರ್ ಹಿಟ್ ಹಾಡುಗಳನ್ನು ನೀಡುತ್ತಿರುವ ಇವರು ಈಗ ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿಯೂ ತಮ್ಮ ಸಂಗೀತ ಯಾತ್ರೆಯನ್ನು ಶುರು ಮಾಡಲಿದ್ದಾರೆ.

ಅರ್ಜುನ್ ಜನ್ಯ ಟ್ಯಾಟೂ ಹಾಕಿಸಿಕೊಂಡ ಅಪ್ಪಟ್ಟ ಅಭಿಮಾನಿ ಇವರು!

ರವಿಚಂದ್ರನ್ ಅವರ ಎರಡನೇ ಪುತ್ರ ವಿಕ್ರಮ್ ಅವರಿಗೆ ನಾಗಶೇಖರ್ 'ನಾನು ಅವಳು' ಎಂಬ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ. ನಾಲ್ಕು ಭಾಷೆಯಲ್ಲಿ ಬರುವ ಈ ಚಿತ್ರದ ಮೂಲಕ ಅರ್ಜುನ್ ಜನ್ಯ ತಮಿಳು ಮತ್ತು ತೆಲುಗು ಚಿತ್ರರಂಗಕ್ಕೆ ಕಾಲಿಡಲಿದ್ದಾರೆ.

Arjun Janya debut to tollywood and kollywood

2006ರಲ್ಲಿ 'ಆಟೋಗ್ರಾಫ್ ಪ್ಲೀಸ್' ಎನ್ನುವ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದ ಅರ್ಜುನ್ ಜನ್ಯಗೆ 'ಕೆಂಪೇಗೌಡ' ಚಿತ್ರದಿಂದ ಬ್ರೇಕ್ ಸಿಕ್ಕಿತ್ತು. ಆ ಸಿನಿಮಾದ ಬಳಿಕ ಇಂದಿಗೂ ಅವರು ಕನ್ನಡ ಟಾಪ್ ಮ್ಯೂಸಿಕ್ ಡೈರೆಕ್ಟರ್ ಗಳಲ್ಲಿ ಒಬ್ಬರಾಗಿದ್ದಾರೆ.

English summary
Kannada Music Director Arjun Janya to make Kollywood and Tollywood debut.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada