»   » 'ತಾರಕ್' ಚಿತ್ರದ ಯಶಸ್ಸನ್ನ ಅರ್ಜುನ್ ಜನ್ಯ ಅರ್ಪಿಸಿದ್ದು ಯಾರಿಗೆ?

'ತಾರಕ್' ಚಿತ್ರದ ಯಶಸ್ಸನ್ನ ಅರ್ಜುನ್ ಜನ್ಯ ಅರ್ಪಿಸಿದ್ದು ಯಾರಿಗೆ?

Posted By:
Subscribe to Filmibeat Kannada
Arjun Janya Talk About Tarak Movie Success | Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ತಾರಕ್' ಸಿನಿಮಾ ರಾಜ್ಯಾದ್ಯಂತ ಅದ್ಧೂರಿ ಪ್ರದರ್ಶನ ಕಾಣುತ್ತಿದ್ದು, ಎಲ್ಲರ ಮೆಚ್ಚುಗೆ ಗಳಿಸಿದೆ. ಅಷ್ಟೇ ಅಲ್ಲದೇ ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಲೆಕ್ಷನ್ ಮಾಡುತ್ತಿರುವ 'ತಾರಕ್' ಹೊಸ ದಾಖಲೆಯತ್ತ ಮುನ್ನಗ್ಗುತ್ತಿದೆ.

ಇತ್ತೀಚೆಗಷ್ಟೇ ನಟಿ ಶಾನ್ವಿ ಶ್ರೀವಾಸ್ತವ್ 'ತಾರಕ್' ಚಿತ್ರದ ಯಶಸ್ಸ ಕಂಡು ಸಂತಸ ಹಂಚಿಕೊಂಡಿದ್ದರು. ತಮ್ಮ ಅಭಿಮಾನಿಗಳಿಗೆ ಮತ್ತು ಸಿನಿಮಾ ಗೆಲ್ಲಿಸಿದ ಎಲ್ಲರಿಗೂ ಥ್ಯಾಂಕ್ಸ್ ಹೇಳಿದ್ದರು. ಇದೀಗ, 'ತಾರಕ್' ಚಿತ್ರದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕೂಡ ಫುಲ್ ಖುಷಿಯಾಗಿದ್ದಾರೆ.

'ತಾರಕ್' ಚಿತ್ರವನ್ನ ಗೆಲ್ಲಿಸಿದ್ದಕ್ಕೆ 'ಮೀರಾ' ಫುಲ್ ಹ್ಯಾಪಿ

Arjun Janya Happy About Tarak success

'ತಾರಕ್' ಸಿನಿಮಾಗೆ ದೊಡ್ಡ ಯಶಸ್ಸು ತಂದು ಕೊಟ್ಟ ಎಲ್ಲರಿಗೂ ಥ್ಯಾಂಕ್ಸ್. ಹಾಗೆ, 'ತಾರಕ್' ಚಿತ್ರದ ಆಡಿಯೋಗೆ ದೊಡ್ಡ ರೆಸ್ ಪಾನ್ಸ್ ಸಿಕ್ಕಿದೆ. ಒಂದೊಂದು ಹಾಡುಗಳನ್ನ ಒಂದೊಂದು ರೀತಿಯ ಆಡಿಯೆನ್ಸ್ ಇಷ್ಟಪಟ್ಟಿದ್ದಾರೆ. ತುಂಬ ಖುಷಿ ಆಗ್ತಿದೆ.

''ನಾನು ಏನೇ ಮಾಡಿದರು, ಇದರ ಹಿಂದೆ ಸಾಹಿತ್ಯಗಾರರು, ಗಾಯಕರು, ತಂತ್ರಜ್ಞರ ಶ್ರಮ ಇದೆ. ಈ 'ತಾರಕ್' ಚಿತ್ರದ ಯಶಸ್ಸು ಅವರಿಗೆ ಅರ್ಪಿಸುತ್ತೇನೆ'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಕಾಶ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ದುಷ್ಯಂತ್ ನಿರ್ಮಾಣ ಮಾಡಿದ್ದಾರೆ. ದೇವರಾಜ್, ದರ್ಶನ್, ಶ್ರುತಿ ಹರಿಹರನ್, ಶಾನ್ವಿ ಶ್ರೀವಾಸ್ತವ್, ಕುರಿ ಪ್ರತಾಪ್, ಅವಿನಾಶ್, ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಸೆಪ್ಟೆಂಬರ್ 29 ರಂದು ಸುಮಾರು 300 ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಸಿನಿಮಾ ತೆರೆಕಂಡಿತ್ತು.

English summary
Kannada Music Director Arjun Janya Has Taken his Facebook Account to Express their Happy About 'Tarak' success.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada