For Quick Alerts
  ALLOW NOTIFICATIONS  
  For Daily Alerts

  ಸೆಂಚುರಿ ಹೊಡೆದ ಅರ್ಜುನ್ ಜನ್ಯ : ಯಾವುದು 100ನೇ ಸಿನಿಮಾ?

  |

  ಹೊಸ ಹೊಸ ಕನ್ನಡ ಸಿನಿಮಾಗಳ ಹಾಡನ್ನು ಕೇಳಿ, ಅದರಲ್ಲಿ ಬಹುಪಾಲು ಸಿನಿಮಾಗಳ ಮ್ಯೂಸಿಕ್ ಅರ್ಜುನ್ ಜನ್ಯ ಅವರದ್ದೆ ಇರುತ್ತದೆ. ಕಡಿಮೆ ಅಂದರೂ ತಿಂಗಳಿಗೆ ಜನ್ಯ ಸಂಗೀತದ ಮೂರ್ನಾಲ್ಕು ಸಿನಿಮಾಗಳು ರಿಲೀಸ್ ಆಗುತ್ತದೆ.

  ಕನ್ನಡದ ಸ್ಟಾರ್ ಕಂಪೋಸರ್ ಆಗಿರುವ ಅರ್ಜುನ್ ಜನ್ಯ ಇದೀಗ ನೂರು ಸಿನಿಮಾಗಳ ಸಂಭ್ರಮದಲ್ಲಿದ್ದಾರೆ. ಒಂದು ಹೊಸ ಸಿನಿಮಾಗೆ ಸಂಗೀತ ನೀಡುವ ಮೂಲಕ ಅವರು ಸೆಂಚುರಿ ಬಾರಿಸಲು ಸಜ್ಜಾಗಿದ್ದಾರೆ.

  ಮೊದಲ ಬಾರಿಗೆ ಮೇಷ್ಟ್ರು ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ

  ಜನ್ಯ ಸಕ್ಸಸ್ ರೇಟ್ ನೋಡಿದರೆ ಅವರ ಹಾಡುಗಳು ಸೋತಿದ್ದು, ತೀರ ಕಡಿಮೆ. ಪ್ರಾರಂಭದಲ್ಲಿ ಸೈಕಲ್ ಹೊಡೆದರೂ 'ಕೆಂಪೇಗೌಡ' ಸಿನಿಮಾದಿಂದ ಅವರು ಹಿಂದೆ ತಿರುಗಿ ನೋಡಲೆ ಇಲ್ಲ.

  ಇದೀಗ ಜನ್ಯ ಚಿತ್ರರಂಗಕ್ಕೆ ಬಂದು 12 ವರ್ಷ ಕಳೆದಿದ್ದು, 100 ಸಿನಿಮಾಗಳಿಗೆ ಸಂಗೀತ ನೀಡಿದ ಖ್ಯಾತಿ ಪಡೆದಿದ್ದಾರೆ. ಮುಂದೆ ಓದಿ...

  '99' ಸಿನಿಮಾ 100ನೇ ಸಿನಿಮಾ

  '99' ಸಿನಿಮಾ 100ನೇ ಸಿನಿಮಾ

  ತಮಿಳಿನ '96' ಸಿನಿಮಾ '99' ಹೆಸರಿನಲ್ಲಿ ಕನ್ನಡಕ್ಕೆ ಬರುತ್ತಿದೆ. ಗಣೇಶ್ ಅಭಿನಯದ ಈ ಸಿನಿಮಾದ ಮುಹೂರ್ತ ಇತ್ತೀಚಿಗಷ್ಟೆ ನೆರವೇರಿತ್ತು. '99' ಚಿತ್ರಕ್ಕೆ ಅರ್ಜುನ್ ಜನ್ಯ ಮ್ಯೂಸಿಕ್ ನೀಡುತ್ತಿದ್ದು, ವಿಶೇಷ ಅಂದರೆ, ಈ ಸಿನಿಮಾ ಜನ್ಯ ಅವರ ನೂರನೇ ಸಿನಿಮಾವಾಗಿದೆ.

  14ನೇ ಸಿನಿಮಾಗೆ ಬ್ರೇಕ್

  14ನೇ ಸಿನಿಮಾಗೆ ಬ್ರೇಕ್

  ಅರ್ಜುನ್ ಜನ್ಯಗೆ ಬ್ರೇಕ್ ನೀಡಿದ ಸಿನಿಮಾ ಅಂದರೆ, 'ಕೆಂಪೇಗೌಡ'. ಅದು ಅವರ 14ನೇ ಸಿನಿಮಾವಾಗಿತ್ತು. ಅದಕ್ಕು ಮುಂಚೆ ಅರ್ಜುನ್ ಜನ್ಯ ಎಂದರೆ ಯಾರಿಗೂ ತಿಳಿದಿರಲಿಲ್ಲ. ಹಾಡುಗಳು ಒಂದು ಮಟ್ಟಕ್ಕೆ ಹಿಟ್ ಆದರೂ ಸಿನಿಮಾ ಫ್ಲಾಪ್ ಆಗುತ್ತಿತ್ತು. ತಾಳ್ಮೆಯಿಂದ ಕಾದ ಜನ್ಯ ಬದುಕಿನಲ್ಲಿ 'ಕೆಂಪೇಗೌಡ' ಬಿರುಗಾಳಿಯಂತೆ ಬಂತು.

  ಅಂಬಿ ಮಗನನ್ನು ಕುಣಿಸಲು ಬಂದರು ಅರ್ಜುನ್ ಜನ್ಯ

  ಬ್ಯಾಕ್ ಟು ಬ್ಯಾಕ್ ಹಿಟ್

  ಬ್ಯಾಕ್ ಟು ಬ್ಯಾಕ್ ಹಿಟ್

  'ಕೆಂಪೇಗೌಡ' ಬಳಿಕ ಒಂದರ ನಂತರ ಒಂದರಂತೆ ಅರ್ಜುನ್ ಜನ್ಯ ಹಿಟ್ ನೀಡಿದರು. ಹಸಿದು ಕೂತ ಜನ್ಯಗೆ ಅವಕಾಶಗಳ ಬುತ್ತಿ ಬಂದವು. ಆಗ ಮ್ಯೂಸಿಕ್ ನೀಡಿದ್ದ 'ಅಲೆಮಾರಿ', 'ರಾಜಧಾನಿ' 'ರೋಮಿಯೋ' 'ಆಟೋರಾಜ', 'ರಾಂಬೋ' 'ವಿಕ್ಟರಿ' ಎಲ್ಲ ಸಿನಿಮಾಗಳ ಹಾಡು ಸೂಪರ್ ಹಿಟ್ ಆದವು. ಆಗ ಜನ್ಯ ಕೀ ಬೋರ್ಡ್ ಗೆ ಮತ್ತಷ್ಟು ಕೆಲಸ ಜಾಸ್ತಿಯಾಯ್ತು.

  ಸೂಪರ್ ಡೂಪರ್ ಹಿಟ್

  ಸೂಪರ್ ಡೂಪರ್ ಹಿಟ್

  'ವಿಕ್ಟರಿ', 'ಅಧ್ಯಕ್ಷ', 'ಮಾಣಿಕ್ಯ', 'ಭಜರಂಗಿ', 'ವಜ್ರಕಾಯ' 'ರಿಕ್ಕಿ', ರನ್ನ', 'ಮುಂಗಾರು ಮಳೆ 2', 'ರಾಗ', 'ಮುಕುಂದ ಮುರಾರಿ', 'ಕಾಲೇಜ್ ಕುಮಾರ್', 'ಚೌಕ', 'ಚಕ್ರವರ್ತಿ' 'ಹೆಬ್ಬುಲಿ', 'ತಾರಕ್' 'ರಾಂಬೋ 2' ಅರ್ಜುನ್ ಜನ್ಯ ಅಕೌಂಟ್ ನಲ್ಲಿ ಇರುವ ಸೂಪರ್ ಡೂಪರ್ ಹಿಟ್ ಸಿನಿಮಾಗಳು.

  ಜನ ಮೆಚ್ಚಿದ ಅರ್ಜುನ ಜನ್ಯ 2017ರ ಅತ್ಯುತ್ತಮ ಸಂಗೀತ ನಿರ್ದೇಶಕ

  ಜನ್ಯ ಈಗ ನಂ 1

  ಜನ್ಯ ಈಗ ನಂ 1

  ಅರ್ಜುನ್ ಜನ್ಯ ಈಗ ಕನ್ನಡದ ನಂ 1 ಸಂಗೀತ ನಿರ್ದೇಶಕ. ಈಗ ಜನ್ಯ ಸಿಕ್ಕಾಪಟ್ಟೆ ಬ್ಯುಸಿ ಇದ್ದಾರೆ. 'ದಿ ವಿಲನ್', 'ಅಂಬಿ ನಿಂಗೆ ವಯಸ್ಸಾಯ್ತೋ', 'ಅಯೋಗ್ಯ' 'ವಿಕ್ಟರಿ 2' ಹಾಡುಗಳ ಸಕ್ಸಸ್ ನಂತರ 'ಕೋಟಿಗೊಬ್ಬ 3', 'ಅಮರ್' ಹಾಗೂ '99' ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ.

  English summary
  Kannada music director Arjun Janya will be completing his 100 movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X