Don't Miss!
- News
ಮೋದಿ, ಅಮಿತ್ ಶಾ ಗೆ ಟೀಕೆ ಮಾಡಿದರೆ ದೊಡ್ಡವರಾಗ್ತೀವಿ ಅನ್ನೋ ಭ್ರಮೆಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ: ಈಶ್ವರಪ್ಪ
- Automobiles
ಭಾರತದಲ್ಲಿ ಹೊಸ ಅಧ್ಯಾಯ ಬರೆಯಲು ಸಿದ್ಧವಾಗಿವೆ ಮಾರುತಿ ಸುಜುಕಿ ಕಾರುಗಳು
- Sports
ಮತ್ತೊಮ್ಮೆ ನಮಗೆ ಆತನೇ ಬಲು ದೊಡ್ಡ ಕಂಟಕ: ಭಾರತೀಯ ಆಟಗಾರನ ಬಗ್ಗೆ ಆಸಿಸ್ ಕ್ರಿಕೆಟಿಗನ ಆತಂಕ!
- Finance
ಅದಾನಿ ಗ್ರೂಪ್ ವಿರುದ್ಧ ಆರೋಪ: 'ನಾವು ಜಾಗರೂಕರಾಗಿದ್ದೇವೆ' ಎಂದ ಭಾರತದ ಉನ್ನತ ಬ್ಯಾಂಕ್ಗಳು
- Technology
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಾಧಿಕಾ ಕುಮಾರಸ್ವಾಮಿ, ಅರ್ಜುನ್ ಸರ್ಜಾ ನಡುವೆ 'ಒಪ್ಪಂದ' : ಈ ವಾರವೇ ತೆರೆಗೆ
ಅಂದಕೊಂಡಂತೆ ಆಗಿದ್ದರೆ ಈ ಸಿನಿಮಾ ಯಾವಾಗಲೋ ರಿಲೀಸ್ ಆಗಬೇಕಿತ್ತು. ರಾಧಿಕಾ ಕುಮಾರಸ್ವಾಮಿ ಹಾಗೂ ಅರ್ಜುನ್ ಸರ್ಜಾ ನಟನೆಯ ಈ ಸಿನಿಮಾ ಬಹಳ ಹಿಂದೆನೇ ಸೆಟ್ಟೇರಿತ್ತು. ಆದರೆ, ಕಾರಣಾಂತರಗಳಿಂದ ಈ ಸಿನಿಮಾ ಬಿಡುಗಡೆ ತಡವಾಗಿತ್ತು. ಕೊನೆಗೂ ಸಿನಿಮಾ ಟೈಟಲ್ ಬದಲಾಯಿಸಿಕೊಂಡು ಪ್ರೇಕ್ಷಕರ ಮುಂದೆ ಬರಲು ತುದಿಗಾಲಲ್ಲಿ ನಿಂತಿದೆ.
ಬಹುಭಾಷಾ ನಟ ಅರ್ಜುನ್ ಸರ್ಜಾ ಹಾಗೂ ರಾಧಿಕಾ ಕುಮಾರಸ್ವಾಮಿ ಜೊತೆ ಖ್ಯಾತ ನಟ ಜೆ.ಡಿ. ಚಕ್ರವರ್ತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡಲಾಗಿತ್ತು. ಅದೇ ವೇಳೆ ಟ್ರೈಲರ್ ಕೂಡ ರಿಲೀಸ್ ಆಗಿತ್ತು. ಈಗ ಸಿನಿಮಾವನ್ನುಬಿಡುಗಡೆ ಮಾಡಲು ಸಕಲ ಸಿದ್ಧತೆಗಳನ್ನೂ ಚಿತ್ರತಂಡ ಮಾಡಿಕೊಂಡಿದೆ. ಈ ವಾರವೇ 'ಒಪ್ಪಂದ' ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ.
ಕಾಂಟ್ರಾಕ್ಟ್ ಟೈಟಲ್ ಬದಲಿಸಿದ ಬಳಿಕ 'ಒಪ್ಪಂದ'
ಅರ್ಜುನ್ ಸರ್ಜಾ ಹಾಗೂ ರಾಧಿಕಾ ಕುಮಾರಸ್ವಾಮಿ ಸಿನಿಮಾ ಸೆಟ್ಟೇರಿದಾಗ, ಶೀರ್ಷಿಕೆ ಕಾಂಟ್ರಾಕ್ಟ್ ಎಂದು ಇಡಲಾಗಿತ್ತು. ಬಳಿಕ ಈ ಸಿನಿಮಾ ಕೆಲವ ದಿನ ಶೂಟಿಂಗ್ ನಿಂತು ಹೋಗಿತ್ತು. ಮತ್ತೆ ಚಿತ್ರೀಕರಣ ಆರಂಭ ಆದರೂ, ಕೆಲವು ದಿನ ಚಿತ್ರೀಕರಣ ನಡೆಯಿತಷ್ಟೇ. ಕೊನೆಗೂ ಸಿನಿಮಾ ಮುಗಿಸಿ, ಬಿಡುಗಡೆ ಸಜ್ಜಾಗುತ್ತಿದ್ದಂತೆ ಸಿನಿಮಾದ ಟೈಟಲ್ ಅನ್ನು 'ಒಪ್ಪಂದ'ವೆಂದು ಬದಲಾಯಿಸಿ ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆ.

ಹೆಸರೇ ಹೇಳುವಂತೆ ಇದೊಂದು ಸಸ್ಪೆನ್ಸ್ ಸಿನಿಮಾ ಅನ್ನುವುದು ಗೊತ್ತಾಗುತ್ತೆ. ಸಿನಿಮಾ ಟೈಟಲ್‌ಗಿಂತಲೂ ಹೆಚ್ಚು ಗಮನ ಸೆಳೆಯುವುದು ತಾರಾಬಳಗ. ಅರ್ಜುನ್ ಸರ್ಜಾ, ಜೆ.ಡಿ. ಚಕ್ರವರ್ತಿ ಹಾಗೂ ರಾಧಿಕಾ ಕುಮಾರಸ್ವಾಮಿ ಈ ಸಿನಿಮಾದ ಹೈಲೈಟ್. ಇವರೊಂದಿಗೆ ನಟಿ ಸೋನಿ ಚರಿಶ್ಟಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಶಶಿಧರ್ ಸಹ ನಿರ್ಮಾಪಕರಾಗಿದ್ದರೆ, ಸಮೀರ್ ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ಅಮೀರ್ ಖಾನ್ ಸಹೋದರ ಫೈಸಲ್ ಖಾನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಈ ವಾರ ಬಿಡುಗಡೆ ಒಪ್ಪಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬಾಹರ್ ಫಿಲಂಸ್ ಮೂಲಕ ವಿತರಕ ಭಾಷಾ ಈ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ. ಬಹಳ ದಿನಗಳ ಬಳಿಕ ರಾಧಿಕಾ ಕುಮಾರಸ್ವಾಮಿ ಮತ್ತೆ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕೂಡ ಬೆಳ್ಳಿತೆರೆ ಮತ್ತೆ ಎಂಟ್ರಿಕೊಡುತ್ತಿದ್ದಾರೆ. ಇದೇ ಫೆಬ್ರವರಿ 11 ರಂದು ಥಿಯೇಟರ್‌ಗೆ ಲಗ್ಗೆ ಇಡಲಿದೆ.