For Quick Alerts
  ALLOW NOTIFICATIONS  
  For Daily Alerts

  ಕಾಸ್ಟಿಂಗ್ ಕೌಚ್ ಬಗ್ಗೆ 'ರೆಬೆಲ್' ಆಗಿ ಮಾತನಾಡಿದ ಅರ್ಜುನ್ ಸರ್ಜಾ

  By Bharath Kumar
  |

  ಸಿನಿಮಾ ಇಂಡಸ್ಟ್ರಿಯಲ್ಲಿ ಬೆಂಬಿಡದ ಭೂತದಂತೆ ಕಾಡುತ್ತಿರುವುದು ಕಾಸ್ಟಿಂಗ್ ಕೌಚ್. ತೆಲುಗು ನಟಿ ಶ್ರೀರೆಡ್ಡಿ ಮಾಡಿದ ಪ್ರತಿಭಟನೆಯಿಂದ ಈ ಕಾಸ್ಟಿಂಗ್ ಕೌಚ್ ಎಂಬ ವಿಷ್ಯ ದೊಡ್ಡ ಸಂಚಲನ ಹುಟ್ಟುಹಾಕಿದೆ.

  ದೊಡ್ಡ ದೊಡ್ಡ ನಟರು, ನಿರ್ಮಾಪಕರು, ನಿರ್ದೇಶಕರ ಮೇಲೆ ಆರೋಪಗಳು ಕೇಳಿ ಬರ್ತಿದೆ. ಸ್ಟಾರ್ ನಟ-ನಟಿಯರು ಈ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನ ಹೊರಹಾಕಿದ್ದು, ಬಹುತೇಕ ನಟಿಯರು ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಇರೋದು ನಿಜ. ಆದ್ರೆ, ನಾನು ಆ ರೀತಿ ಸಮಸ್ಯೆ ಎದುರಿಸಿಲ್ಲ ಎಂದಿದ್ದಾರೆ.

  ಇದೀಗ, ದಕ್ಷಿಣ ಭಾರತದ ಖ್ಯಾತ ನಟ, ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ನಿರಂತರವಾಗಿ ಅಭಿನಯಿಸಿರುವ ನಟ ಅರ್ಜುನ್ ಸರ್ಜಾ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಮುಂದೆ ಓದಿ....

  ನಾನು ಏಕೆ ಭಯ ಪಡಲಿ

  ನಾನು ಏಕೆ ಭಯ ಪಡಲಿ

  ''ಸುಮಾರು 39 ವರ್ಷದಿಂದ ನಾನು ಚಿತ್ರರಂಗದಲ್ಲಿ ಇದ್ದೇನೆ. ಈ ಬಗ್ಗೆ ನಾನೇಕೆ ಭಯ ಪಡಲಿ. ಒಂದು ವೇಳೆ ನಾನೇ ಭಯ ಪಟ್ರೆ, ಬೇರೆಯವರು ಅವರ ಹೆಣ್ಣು ಮಕ್ಕಳನ್ನ ಹೇಗೆ ಸಿನಿಮಾ ಇಂಡಸ್ಟ್ರಿಗೆ ಕಳುಹಿಸ್ತಾರೆ.?'' ಎಂದು ಪ್ರಶ್ನಿಸಿದ್ದಾರೆ.

  ಒಳ್ಳೆಯವರು - ಕೆಟ್ಟವರು ಎಲ್ಲಾ ಕಡೆ ಇದ್ದಾರೆ

  ಒಳ್ಳೆಯವರು - ಕೆಟ್ಟವರು ಎಲ್ಲಾ ಕಡೆ ಇದ್ದಾರೆ

  ''ಬಹಳಷ್ಟು ಜನಕ್ಕೆ ಸಿನಿಮಾ ಇಂಡಸ್ಟ್ರಿ ಅಂದ್ರೆ ಒಂದು ಭಾವನೆ ಇದೆ. ಏನೋ ಆಗುತ್ತೆ ಎಂಬ ಆತಂಕ ಇದೆ. ಆದ್ರೆ, ಕೆಟ್ಟದ್ದು ಒಳ್ಳೆಯದ್ದು ಪ್ರತಿಯೊಂದು ಜಾಗದಲ್ಲೂ ಇದೆ. ಸಿನಿಮಾ ಜಗತ್ತಿನಲ್ಲಿ ಮಾತ್ರವಲ್ಲ, ಎಲ್ಲ ಕಡೆಯೂ ಒಳ್ಳೆಯವರು ಮತ್ತು ಕೆಟ್ಟವರು ಇಬ್ಬರು ಇದ್ದೇ ಇರ್ತಾರೆ''.

  ನಿಮ್ಮ ಆಯ್ಕೆ ಉತ್ತಮವಾಗಿರಬೇಕು

  ನಿಮ್ಮ ಆಯ್ಕೆ ಉತ್ತಮವಾಗಿರಬೇಕು

  ''ಅವರಿಗೆ ಯಾವುದು ಬೇಕೋ ಅದು ಆಯ್ಕೆ ಮಾಡಿಕೊಳ್ತಾರೆ. ನಾವು ಈ ದಾರಿಯಲ್ಲಿ ಹೋಗ್ಬೇಕು ಅಂದುಕೊಂಡ್ರೆ ಅದೇ ಮಾರ್ಗದಲ್ಲಿ ಸಾಗ್ತಾರೆ. ಇಲ್ಲಾ ನಾನು ಹೀಗೆ ಬದುಕಬೇಕು, ನಾನು ಹೀಗೆ ಇರ್ಬೇಕು ಎಂದು ನಿರ್ಧರಿಸಿದ್ರೆ ಅವರು ಎಲ್ಲೇ ಇದ್ರು ಹಾಗೆ ಇರ್ತಾರೆ. ಇದನ್ನ ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು''.

  ನನ್ನ ಇಂಡಸ್ಟ್ರಿ ಇದು

  ನನ್ನ ಇಂಡಸ್ಟ್ರಿ ಇದು

  ''ಇದು ನನ್ನ ಇಂಡಸ್ಟ್ರಿ, ಅವರು ನನಗೆ ಊಟ ಹಾಕ್ತಿದ್ದಾರೆ, ನನ್ನನ್ನು ಪೋಷಿಸುತ್ತಿದ್ದಾರೆ ಮತ್ತು ಪ್ರೀತಿಸುತ್ತಿದ್ದಾರೆ. ನಾನು ತುಂಬಾ ವರ್ಷದಿಂದ ಉದ್ಯಮ ನೋಡುತ್ತಿದ್ದೇನೆ. ನನಗೆ ಯಾವುದೇ ಭಯ, ಆತಂಕ ಇಲ್ಲ'' ಎಂದು ನಟ ಅರ್ಜುನ್ ಸರ್ಜಾ ತೆಲುಗು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

  English summary
  Kannada actor, Action king Arjun sarja spoke about casting couch and his daughter aishwarya sarja in interview.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X