For Quick Alerts
  ALLOW NOTIFICATIONS  
  For Daily Alerts

  ಚಿರು ಅಗಲಿಕೆಯ ಬಗ್ಗೆ ಅರ್ಜುನ್ ಸರ್ಜಾ ಮೊದಲ ನೋವಿನ ನುಡಿ

  |

  ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ಚಿತ್ರರಂಗ ನೋವಿನ ಮಡುವಲ್ಲಿದೆ. ಸರ್ಜಾ ಕುಟುಂಬಕ್ಕೆ ಆಗಿರುವ ಆಘಾತವನ್ನು ಊಹಿಸಲೂ ಸಾಧ್ಯವಾಗುತ್ತಿಲ್ಲ. ತಮ್ಮ ಪ್ರೀತಿಯ ಅಳಿಯನ ಸಾವಿನ ಆಘಾತದಲ್ಲಿಯೇ ಚೆನ್ನೈನಿಂದ ಹೊರಟು ಬಂದಿದ್ದ ಅರ್ಜುನ್ ಸರ್ಜಾ, ಚಿರಂಜೀವಿ ಅಗಲುವಿಕೆಯ ಬಗ್ಗೆ ತಮ್ಮ ಮೊದಲ ನೋವಿನ ಮಾತುಗಳನ್ನು ಆಡಿದ್ದಾರೆ.

  Actress Shruthi Hariharan mourns for chiranjeevi Sarja life | Filmibeat Kannada

  ಸಹೋದರಿಯ ಮಕ್ಕಳಾದ ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ಅವರಿಗೆ ಚಿತ್ರರಂಗದಲ್ಲಿ ನೆಲೆ ಸಿಗಬೇಕೆಂಬುದನ್ನು ಅರ್ಜುನ್ ಸರ್ಜಾ ಬಯಕೆಯಾಗಿತ್ತು. ಅದರಂತೆಯೇ ಚಿರಂಜೀವಿ ಮತ್ತು ಧ್ರುವ ಇಬ್ಬರೂ ಸಿನಿಮಾಗಳನ್ನು ಮಾಡುತ್ತಾ ತಮ್ಮದೇ ವಲಯ ಸೃಷ್ಟಿಸಿಕೊಂಡಿದ್ದಾರೆ ಎನ್ನುವುದು ಅವರ ಸಂತೋಷಕ್ಕೂ ಕಾರಣವಾಗಿತ್ತು. ಇಬ್ಬರಲ್ಲಿಯೂ ಶಿಸ್ತು, ಸರಳತೆ ಮತ್ತು ಬದ್ಧತೆ ಮೂಡಿಸುವಲ್ಲಿ ಅರ್ಜುನ್ ಸರ್ಜಾ ಪ್ರಯತ್ನ ದೊಡ್ಡದು. ಅರ್ಜುನ್ ಸರ್ಜಾ ಅವರ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ಈ ಇಬ್ಬರೊಂದಿಗಿನ ಫೋಟೊಗಳೇ ಹೆಚ್ಚಾಗಿದ್ದವು ಎನ್ನುವುದು ಆ ಪ್ರೀತಿಯನ್ನು ವಿವರಿಸುತ್ತದೆ. ಮುಂದೆ ಓದಿ...

  ನೋವು ಹಂಚಿಕೊಂಡ ಅರ್ಜುನ್ ಸರ್ಜಾ

  ನೋವು ಹಂಚಿಕೊಂಡ ಅರ್ಜುನ್ ಸರ್ಜಾ

  ಚಿರಂಜೀವಿ ಸರ್ಜಾ ನಿಧನದ ಆಘಾತದಲ್ಲಿದ್ದ ಅರ್ಜುನ್ ಸರ್ಜಾ, ಸಾಮಾಜಿಕ ಜಾಲತಾಣದಲ್ಲಿ ಒಂದೇ ಸಾಲಿನಲ್ಲಿ ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ. ಚಿರಂಜೀವಿ ಸರ್ಜಾ ಜತೆಗಿನ ಸಂತಸದ ಕ್ಷಣದ ಸಂದರ್ಭದ ಫೋಟೊವನ್ನು ಅವರು ಪೋಸ್ಟ್ ಮಾಡಿದ್ದಾರೆ.

  ಮೆಚ್ಚಿನ ಹುಡುಗ ಚಿರು ಸರ್ಜಾ ಗೆ ದುಃಖದ ಶ್ರದ್ಧಾಂಜಲಿ ಸಲ್ಲಿಸಿದ ಅರ್ಜುನ್ ಸರ್ಜಾ

  ವಿಧಿ ಬಹಳ ಕ್ರೂರ

  ವಿಧಿ ಬಹಳ ಕ್ರೂರ

  'ಐ ಮಿಸ್ ಯೂ ಮೈ ಬಾಯ್' ಎಂದು ಅರ್ಜುನ್ ಸರ್ಜಾ, ಚಿರು ಕುರಿತು ಬರೆದಿದ್ದಾರೆ. ವಿಧಿ ಎನ್ನುವುದು ಬಹಳ ಕ್ರೂರವಾಗಿದೆ ಎಂದು ಅರ್ಜುನ್ ಸರ್ಜಾ ಭಾವುಕರಾಗಿ ಬರೆದುಕೊಂಡಿದ್ದಾರೆ.

  ಪ್ರೊಫೈಲ್ ಫೋಟೊ ಬದಲು

  ಪ್ರೊಫೈಲ್ ಫೋಟೊ ಬದಲು

  ಚಿರಂಜೀವಿ ಸರ್ಜಾ ಮೃತಪಟ್ಟ ಭಾನುವಾರ ಸಂಜೆ ಅವರು ತಮ್ಮ ಫೇಸ್ ಬುಕ್ ಪುಟದ ಪ್ರೊಫೈಲ್ ಚಿತ್ರವನ್ನು ಕಪ್ಪು ಬಣ್ಣಕ್ಕೆ ಬದಲಿಸುವ ಮೂಲಕ ದುಃಖವನ್ನು ಹಂಚಿಕೊಂಡಿದ್ದರು. ಈ ನೋವಿನಿಂದ ಹೊರಬರಲು ಅವರು ಪ್ರಯತ್ನಿಸುವ ಸೂಚನೆಯನ್ನು ನೀಡಿದ್ದಾರೆ. ತಮ್ಮ ಫೇಸ್‌ಬುಕ್ ಪ್ರೊಫೈಲ್ ಫೋಟೊವನ್ನು ಮತ್ತೆ ಬದಲಿಸಿದ್ದಾರೆ.

  ಫಿಟ್ನೆಸ್ ಬಗ್ಗೆ ಗಮನ ಕೊಡು ಎಂದು ಚಿರುಗೆ ಬಯ್ಯುತ್ತಿದ್ದರು ಅರ್ಜುನ್ ಸರ್ಜಾ

  ಹೋರಾಟದ ಸುಳಿವು

  ಹೋರಾಟದ ಸುಳಿವು

  ಫೇಸ್‌ಬುಕ್‌ನಲ್ಲಿ ತಮ್ಮ ಹಳೆಯ ಫೋಟೊವನ್ನು ಪ್ರೊಫೈಲ್ ಫೋಟೊವಾಗಿ ಅರ್ಜುನ್ ಸರ್ಜಾ ಬದಲಿಸಿದ್ದಾರೆ. ಫೈಟಿಂಗ್ ದೃಶ್ಯದ ಚಿತ್ರದ ಮೂಲಕ ಅವರು ಈ ನೋವಿನ ನಡುವೆಯೂ ಮತ್ತೆ ಹೋರಾಡುತ್ತೇವೆ ಎಂಬ ಸೂಚನೆ ನೀಡಿದ್ದಾರೆ.

  ಚಿರಂಜೀವಿ & ಅರ್ಜುನ್ ಫ್ಯಾಮಿಲಿಯ ಚಿತ್ರರಂಗದ ನಂಟು

  English summary
  Actor Arjun Sarja has shared an emotional post on Chiranjeevi Sarja's death in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X