For Quick Alerts
  ALLOW NOTIFICATIONS  
  For Daily Alerts

  ಅರ್ಜುನ್ ಸರ್ಜಾ ಮಾವ ಆಸ್ಪತ್ರೆಗೆ ದಾಖಲು: ಹಿರಿಯ ನಟ ರಾಜೇಶ್ ಸ್ಥಿತಿ ಗಂಭೀರ!

  |

  ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್ ಅವರು ಅನಾರೋಗ್ಯಕ್ಕೆ ಈಡಾಗಿದ್ದಾರೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರಾಜೇಶ್‌ ಅವರನ್ನು ದಾಖಲಿಸಲಾಗಿದೆ. ಹಿರಿಯ ನಟ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರಂತೆ. ಹಾಗಾಗಿ ಅವರಿಗೆ ವೆಂಟಿಲೇಟರ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿ ಬಂದಿದೆ.

  ಕಿಡ್ನಿ ವೈಫಲ್ಯ ಮತ್ತು ವಯೋಸಹಜ ಕಾಯಿಲೆಗಳಿಂದ ರಾಜೇಶ್​ ಅವರು ಬಳಲುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಕಸ್ತೂರಬಾ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ವೆಂಟಿಲೇಟರ್​ ಮೂಲಕ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಇದೆ. ಅವರು ಗುಣಮುಖರಾಗಲಿ ಎಂದು ಆಪ್ತರು ಮತ್ತು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ವೈದ್ಯರು ಮಾಹಿತಿ ನೀಡಲಿದ್ದಾರೆ.

  ಇಂಥ ಯಶಸ್ಸು ಸಿಕ್ಕಿರಲಿಲ್ಲ, ಇನ್ನೂ 30 ವರ್ಷ ಸಿನಿಮಾ ಮಾಡ್ತೀನಿ: ಜಗ್ಗೇಶ್
  ರಾಜೇಶ್​ ಅವರಿಗೆ 82 ವರ್ಷ ವಯಸ್ಸಾಗಿದೆ. ಹಲವು ದಶಕಗಳಿಂದ ಚಿತ್ರರಂಗದಲ್ಲಿ ಅವರು ಸಕ್ರಿಯವಾಗಿದ್ದಾರೆ. ಇತ್ತೀಚೆಗೆ ಕೆಲವು ವರ್ಷಗಳಲ್ಲಿ ನಟನೆಯಿಂದ ರಾಜೇಶ್ ಅವರು ದೂರ ಉಳಿದಿದ್ದರು. ಇವರು ಕನ್ನಡ ಮತ್ತು ತಮಿಳಿನಲ್ಲಿ ಸ್ಟಾರ್ ಆಗಿ ಗುರುತಿಸಿಕೊಂಡಿರುವ ನಟ ಅರ್ಜುನ್ ಸರ್ಜಾ ಅವರ ಮಾವ. ಅಂದರೆ ಪತ್ನಿ ನಿವೇದಿತಾ ಅವರ ತಂದೆ.

  ರಾಜೇಶ್​ ಜನಿಸಿದ್ದು ಬೆಂಗಳೂರಿನಲ್ಲಿ. ಅವರ ಮೂಲ ಹೆಸರು ಮುನಿ ಚೌಡಪ್ಪ. ಬಳಿಕ ಅವರು ನಾಟಕಗಳಲ್ಲಿ ಅಭಿನಯಿಸುವಾಗ ವಿದ್ಯಾಸಾಗರ್​ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದರು. ಬಳಿಕ ಚಿತ್ರರಂಗದಲ್ಲಿ ಅವರು 'ಕಲಾತಪಸ್ವಿ' ರಾಜೇಶ್​ ಎಂದೇ ಹೆಸರುವಾಸಿಯಾಗಿದ್ದಾರೆ. 1960ರ ದಶಕದಲ್ಲಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ನೂರಾರು ಸಿನಿಮಾಗಳಲ್ಲಿ ನಟಿಸಿ ಜನಮನ ಗೆದ್ದರು.
  English summary
  Arjun Sarja Father In Law, Senior Actor Rajesh Is Hospitalized, Know More Details
  Monday, February 14, 2022, 11:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X