»   » 'ಕುರುಕ್ಷೇತ್ರ' ಅಖಾಡಕ್ಕೆ ಕಾಲಿಟ್ಟ 'ಅರ್ಜುನ' ಯಾರು?

'ಕುರುಕ್ಷೇತ್ರ' ಅಖಾಡಕ್ಕೆ ಕಾಲಿಟ್ಟ 'ಅರ್ಜುನ' ಯಾರು?

Posted By:
Subscribe to Filmibeat Kannada

ದರ್ಶನ್ ಅವರ 50ನೇ ಚಿತ್ರ 'ಕುರುಕ್ಷೇತ್ರ'ಕ್ಕಾಗಿ ಒಂದೊಂದೆ ಪಾತ್ರಗಳು ಅಂತಿಮವಾಗುತ್ತಿದೆ. ಈಗಾಗಲೇ ಕೌರವ ಕಡೆಯ ಪಾತ್ರಗಳು ಬಹುತೇಕ ಅಂತಿಮವಾಗಿದ್ದು, ಪಾಂಡವರು ಆಯ್ಕೆ ಆಗಬೇಕಿದೆ.

ಮೂಲಗಳ ಪ್ರಕಾರ ಶಶಿಕುಮಾರ್ ಧರ್ಮರಾಯನ ಪಾತ್ರ ನಿರ್ವಹಿಸುತ್ತಿದ್ದಾರೆ. ಬಾಲಿವುಡ್ ಕಿರುತೆರೆ ಕಲಾವಿದ ಡ್ಯಾನಿಶ್ ಅಖ್ತರ್ ಸೈಫಿ ಭೀಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನುಳಿದ ಪಾತ್ರಗಳು ಅರ್ಜುನ, ನಕಲ, ಸಹದೇವ. ಈಗ ಮಧ್ಯಮ ಪಾಂಡವ ಅರ್ಜುನನ ಪಾತ್ರ ಕೂಡ ಅಂತಿಮವಾಗಿದೆ ಅಂತೆ.

ಈ ಮೂಲಕ 'ಕುರುಕ್ಷೇತ್ರ' ಕಾಳಗದಲ್ಲಿ ಕಾದಾಡಲಿರುವ ಪ್ರಮುಖ ಪಾತ್ರಗಳ ಆಯ್ಕೆ ಆಗಿದೆ. ಹಾಗಿದ್ರೆ ಅರ್ಜುನ ಪಾತ್ರಧಾರಿ ಯಾರು? ಮುಂದೆ ಓದಿ....

'ಅರ್ಜುನ'ನಾದ ಅರ್ಜುನ್ ಸರ್ಜಾ

ಈ ಹಿಂದೆ ಹೇಳಿದಂತೆ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ 'ಕುರುಕ್ಷೇತ್ರ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಈಗ ಅರ್ಜುನ್ ಸರ್ಜಾ ಅವರ ಪಾತ್ರವೂ ಬಹಿರಂಗವಾಗಿದ್ದು, ಮಧ್ಯಮ ಪಾಂಡವ ಅರ್ಜುನನ ಪಾತ್ರದಲ್ಲಿ ಸರ್ಜಾ ಬಣ್ಣ ಹಚ್ಚಲಿದ್ದಾರಂತೆ.

'ಕುರುಕ್ಷೇತ್ರ'ಕ್ಕಾಗಿ ಶಿವಣ್ಣನಿಗೆ ಆಹ್ವಾನ ಬಂದಿದ್ದು ನಿಜ! ಯಾವ ಪಾತ್ರಕ್ಕೆ?

ಪ್ರಾಜೆಕ್ಟ್ ಗೆ ಸಹಿ ಮಾಡಲಾಗಿದೆ

ಅರ್ಜುನ್ ಸರ್ಜಾ ಈಗಾಗಲೇ 'ಕುರುಕ್ಷೇತ್ರ' ಚಿತ್ರಕ್ಕೆ ಸಹಿ ಕೂಡ ಮಾಡಿದ್ದಾರೆ ಎನ್ನಲಾಗಿದೆ. ಈ ಮೂಲಕ ಪಾಂಡವರ ಸೈನ್ಯಕ್ಕೆ ಮತ್ತೊಬ್ಬ ಸೂಪರ್ ಸ್ಟಾರ್ ನಟ ಸೇರಿಕೊಂಡಿದ್ದಾರೆ.

'ಭೀಮ'ನನ್ನ ಆಯ್ಕೆ ಮಾಡಿದ್ದು ದರ್ಶನ್! ದಚ್ಚು ಬಗ್ಗೆ 'ಡ್ಯಾನಿಶ್' ಹೇಳಿದ್ದೇನು?

ದುರ್ಯೋಧನ ವರ್ಸಸ್ ಅರ್ಜುನ

'ಕುರುಕ್ಷೇತ್ರ' ಚಿತ್ರದ ಪ್ರಧಾನ ಪಾತ್ರಗಳಲ್ಲಿ ಅರ್ಜುನ ಕೂಡ ಒಂದು. ಪಾಂಡವರ ಪೈಕಿ ಅರ್ಜುನ ಮಹಾನ್ ವೀರ, ಶೂರ. ಕರ್ಣನ ಎದುರಾಳಿ ಆಗಿದ್ದ ಅರ್ಜುನ, ದುರ್ಯೋಧನಿಗೂ ವೈರಿ. ಹೀಗಾಗಿ, ದರ್ಶನ್ ಮತ್ತು ಅರ್ಜುನ್ ಸರ್ಜಾ ಅವರ ಕಾಂಬಿನೇಷನ್ ನೋಡಲು ಕಿಕ್ ಕೊಡಲಿದೆ.

ಯಾರೂ ನಿರೀಕ್ಷೆ ಮಾಡದ ನಟ ಈಗ ದರ್ಶನ್ 'ಕುರುಕ್ಷೇತ್ರ'ದಲ್ಲಿ ಭೀಮ.!

ಆಗಸ್ಟ್ 6 ಕ್ಕೆ ಅಧಿಕೃತ

ಈ ಬಗ್ಗೆ ಎಲ್ಲಿಯೂ ಮಾಹಿತಿ ಬಿಟ್ಟುಕೊಡದ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರು ಆಗಸ್ಟ್ 6 ರಂದು ಸಿನಿಮಾಗೆ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಹುಶಃ ಕಲಾವಿದರ ಪಟ್ಟಿ ರಿಲೀಸ್ ಮಾಡುವ ಸಾಧ್ಯತೆ ಇದೆ. ಹೀಗಾಗಿ, ಆಗಸ್ಟ್ 6 ಎಲ್ಲ ಗೊಂದಲಗಳಿಗೆ ತೆರೆ ಬೀಳಲಿದೆ.

ಬಿಗ್ ಬ್ರೇಕಿಂಗ್: 'ಕುರುಕ್ಷೇತ್ರ'ಕ್ಕೆ ದ್ರೌಪದಿ ಸಿಕ್ಕಿದ್ರಂತೆ.!

English summary
A reliable source confirmed, Arjun Sarja has already signed the dotted lines to play one of the Pandavas (Arjuna) in Darshan's Kurukshetra Movie

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada