For Quick Alerts
  ALLOW NOTIFICATIONS  
  For Daily Alerts

  'ಪ್ರೇಮ ಬರಹ'ಕ್ಕೆ ದರ್ಶನ್, ಅಂಬಿ ಬರಮಾಡಿಕೊಳ್ಳುವ ಆ ಸೆಲೆಬ್ರಿಟಿ ಯಾರು.?

  |
  ಅರ್ಜುನ್ ಸರ್ಜಾರ ಪ್ರೇಮ ಬರಹಕ್ಕೆ ನವೆಂಬರ್ 7ರಂದು ಬರ್ತಿರೋ ಸೆಲೆಬ್ರಿಟಿ ಯಾರು | Filmibeat Kannada

  ಸ್ಯಾಂಡಲ್ ವುಡ್‌ ನ 'ಚಾಲೆಂಜಿಂಗ್ ಸ್ಟಾರ್' ಕನ್ನಡ ಸಿನಿಮಾ ಅಭಿಮಾನಿಗಳಿಗಾಗಿ ಅತಿಥಿಯೊಬ್ಬರನ್ನ ಕರೆ ತರ್ತಿದ್ದಾರೆ. ಇದೇ ತಿಂಗಳ 7ನೇ ತಾರೀಖಿನಂದು ದರ್ಶನ್ ಈ ಸರ್ಪೈಸ್ ಅನ್ನ ರಿವೀಲ್ ಮಾಡ್ತಾರಂತೆ. ಅಷ್ಟೇ ಅಲ್ಲ ಆ ಗೆಸ್ಟ್ ಅನ್ನ ರೆಬೆಲ್ ಸ್ಟಾರ್ ಅಂಬಿ ಕೂಡ ಬರಮಾಡಿಕೊಳ್ತಿದ್ದಾರೆ. ಅದಕ್ಕೆ ಈ ಇಬ್ಬರು ಸ್ಟಾರ್ ಗಳು ತಮ್ಮ ಅಭಿಮಾನಿಗಳಿಗೆ ನವೆಂಬರ್ 7ರ ವರೆಗೂ ಕಾಯಿರಿ ಅನ್ನೋ ಸಂದೇಶವನ್ನ ಸಾರಿದ್ದಾರೆ.

  ಅಷ್ಟಕ್ಕೂ ಈ ಬಿಗ್ ಸ್ಟಾರ್ ಗಳು ಇದೆಲ್ಲಾ ಮಾಡ್ತಿರೋದು ಅರ್ಜುನ್ ಸರ್ಜಾ ರಿಗಾಗಿ... ಸರ್ಜಾ ಫ್ಯಾಮಿಲಿಯಿಂದ ನಾಯಕಿ ಐಶ್ವರ್ಯ ಸರ್ಜಾ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಿದ್ದಾರೆ. ಐಶ್ವರ್ಯ ಆಕ್ಟ್ ಮಾಡಿರುವ ಅರ್ಜುನ್ ಸರ್ಜಾ ನಿರ್ದೇಶನ ಮಾಡಿ ನಿರ್ಮಾಣ ಮಾಡುತ್ತಿರುವ 'ಪ್ರೇಮ ಬರಹ' ಸಿನಿಮಾದ ಬಗ್ಗೆ ನವೆಂಬರ್ 7 ರಂದು ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಡ್ತೀನಿ ಎಂದಿದ್ದಾರೆ. ದರ್ಶನ್, ಅಂಬರೀಶ್ ಮಾತ್ರವಲ್ಲದೆ ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ ಕೂಡ ಸ್ಪೆಷಲ್ ಗೆಸ್ಟ್ ಗಾಗಿ ಕಾದಿರಿ ಅಂತಿದ್ದಾರೆ. ಈ ಎಲ್ಲಾ ಸ್ಟಾರ್ ಗಳು ತಮ್ಮದೆ ಆದ ಸ್ಟೈಲ್ ನಲ್ಲಿ ವಿಡಿಯೋ ಮಾಡಿ ನವೆಂಬರ್ 7 ರ ವರೆಗೂ ಕಾಯಿರಿ ಎಂದಿದ್ದಾರೆ.

  ಇನ್ನೂ ಮೊನ್ನೆ ಮೊನ್ನೆಯಷ್ಟೇ 'ಟ್ಯೂನ್ ಸ್ಮ್ಯಾಷ್' ನಡೆಸಿ ಜನರಿಂದ ಟ್ಯೂನ್ ಗೆ ಹಾಡನ್ನ ಬರೆಸಲಾಗಿತ್ತು. ಆದ್ರೆ ಈಗ ಸಿನಿಮಾ ಪ್ರೇಕ್ಷಕರಿಗೆ 'ಪ್ರೇಮ ಬರಹ' ಚಿತ್ರದ ಬಗ್ಗೆ ಕುತೂಹಲ ಮೂಡಿಸಲು ತಾರೆಯರಿಂದ ಇಂಥದೊಂದು ವಿಡಿಯೋ ಮಾಡಿಸಿದ್ದಾರೆ ನಿರ್ದೇಶಕ ಅರ್ಜುನ್ ಸರ್ಜಾ.

  ಅಷ್ಟಕ್ಕೂ ನವೆಂಬರ್ 7 ರಂದು ಏನಾಗುತ್ತೆ. ಸರ್ಜಾ ಸಿನಿಮಾದ ಪ್ರಮೋಷನ್ ಗಾಗಿ ಯಾರನ್ನ ಕರೆ ತರ್ತಾರೆ. ಇವೆಲ್ಲಾ ಪ್ರಶ್ನೆಗಳು ಅಭಿಮಾನಿಗಳಲ್ಲಿ ಹುಟ್ಟುಕೊಂಡಿದೆ. ಫ್ಯಾನ್ಸ್ ಅಷ್ಟೇ ಅಲ್ಲದೆ ಚಿತ್ರರಂಗದವ್ರಿಗೂ ಇಂಥದೊಂದು ಪ್ರಶ್ನೆ ತಲೆಯಲ್ಲಿ ಹುಟ್ಟಿಕೊಂಡು ಯಾರದು ಅಂತ ಸಾಕಷ್ಟು ಹುಡುಕಾಟ ನಡೆಸಿದ್ದಾರೆ. ಆದ್ರೆ ಆ ಗುಟ್ಟು ಮಾತ್ರ ರಟ್ಟಾಗುತ್ತಿಲ್ಲ.

  ನಿಜ ಹೇಳ್ಬೇಕಂದ್ರೆ, ವಿಡಿಯೋ ಮಾಡ್ತಿರೋ ಸ್ಟಾರ್ಸ್ ಗಳಿಗೆ ಬರ್ತಿರೋ ಆ ಗೆಸ್ಟ್ ಯಾರು ಅನ್ನೋದು ಕೂಡ ಗೊತ್ತಿಲ್ವಂತೆ. ಆದ್ರೆ ಈ ಸಪ್ರೈಸ್ ಕ್ರಿಯೇಟ್ ಮಾಡಿರೋ ಹವಾ ಮಾತ್ರ ಸಖತ್ತಾಗಿದ್ದು ಅದೆಷ್ಟೋ ಜನರ ತಲೆಗೆ ಹುಳ ಬಿಟ್ಟಂತಾಗಿದೆ.

  English summary
  Arjun Sarja's Different promotional strategy for 'Prema Baraha'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X