ನಟಿ ಅಂಜಲಿ ವಿರುದ್ಧ ಅರೆಸ್ಟ್ ವಾರಂಟ್ ಜಾರಿ

By ಅನಂತರಾಮು, ಹೈದರಾಬಾದ್

ದಕ್ಷಿಣ ಭಾರತದ ನಟಿ ಅಂಜಲಿ ಮತ್ತೆ ಸುದ್ದಿ ಮಾಡಿದ್ದಾರೆ. ಈ ಬಾರಿ ಅವರ ವಿರುದ್ಧ ಚೆನ್ನೈನ ಸೈದಾ ಪೇಟ್ ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ಅಂಜಲಿ ವಿರುದ್ಧ ತಮಿಳು ನಿರ್ದೇಶಕ ಕಳಂಜಿಯಂ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಈ ಸಂಬಂಧ ಅಂಜಲಿಗೆ ಕೋರ್ಟ್ ಗೆ ಹಾಜರಾಗುವಂತೆ ಹಲವಾರು ಬಾರಿ ಸೂಚಿಸಲಾಗಿತ್ತು. ಆದರೆ ಅಂಜಲಿ ಅವರು ಒಮ್ಮೆಯೂ ಕೋರ್ಟ್ ಗೆ ಹಾಜರಾಗಲಿಲ್ಲ. ಈ ಬಗ್ಗೆ ಗರಂ ಆದ ಕೋರ್ಟ್ ಅಂಜಲಿ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.

ಅಂಜಲಿ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ ಮಾಡಬೇಕು ಎಂದು ನಿರ್ದೇಶಕ ಕಳಂಜಿಯ ಸಹ ಕೋರಿದ್ದರು. ಈ ಹಿಂದೆ ಅಂಜಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಬಳಿಕ ಅವರು ಅಜ್ಞಾತದಿಂದ ಹೊರಬಂದು ತಮ್ಮ ಚಿಕ್ಕಮ್ಮ ಹಾಗೂ ಕಳಂಜಿಯಂ ವಿರುದ್ಧ ಆರೋಪಗಳನ್ನು ಮಾಡಿದ್ದರು.

ತನ್ನ ಚಿಕ್ಕಮ್ಮ ತನ್ನನ್ನು ಎಟಿಎಂ ಮೆಷಿನ್ ನಂತೆ ಬಳಸುತ್ತಿದ್ದಾರೆ. ತನ್ನ ಆಸ್ತಿಯನ್ನು ಕಬಳಿಸಲು ಪ್ಲಾನ್ ಮಾಡುತ್ತಿದ್ದಾರೆ. ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ನಿರ್ದೇಶಕ ಕಳಂಜಿಯಂ ವಿರುದ್ಧವೂ ಹಲವು ಆರೋಪಗಳನ್ನು ಮಾಡಿದ್ದರು.

ತಮ್ಮ ಚಿತ್ರಕ್ಕೆ ಡೇಟ್ಸ್ ಕೊಟ್ಟು ಚಿತ್ರೀಕರಣಕ್ಕೆ ಹಾಜರಾಗುತ್ತಿಲ್ಲ. ಇದರಿಂದ ತಮಗೆ ಲಕ್ಷಾಂತರ ರುಪಾಯಿ ನಷ್ಟವಾಗಿದೆ ಎಂದು ಕಳಂಜಿಯಂ ಆರೋಪಿಸಿದ್ದಾರೆ. ಸದ್ಯಕ್ಕೆ ಅಂಜಲಿ ತೆಲುಗಿನ 'ಮಸಾಲಾ' ಚಿತ್ರದಲ್ಲಿ ವೆಂಕಟೇಶ್ ಜೊತೆ ಅಭಿನಯಿಸುತ್ತಿದ್ದಾರೆ. ಆಕೆ ಅಭಿನಯದ 'ಮದಗಜರಾಜ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

More from Filmibeat

English summary
Actress Anjali was to appear before the Saidapet court in connection with the defamation case filed by Tamil director Kalanjiyam. Even after the court's repeated summons, Anjali failed to pay heed to the court's instructions. The court obviously isn't amused one bit with her attitude. The actress received a major jolt from the court for her absence. Expressing its anger over her non-appearance, the court has issued an arrest warrant for her.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X