For Quick Alerts
  ALLOW NOTIFICATIONS  
  For Daily Alerts

  ನಟ ಆರ್ಯ ವಿರುದ್ದ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದ ಕೋರ್ಟ್ !

  By Pavithra
  |

  ತಮಿಳು ಸ್ಟಾರ್ ನಟ ಆರ್ಯ ವಿರುದ್ದ ತಿರುನೆಲೆವೇಲಿ ಅಂಬಸಮುದ್ರಂ ನ್ಯಾಯಾಪೀಠ ಅರೆಸ್ಟ್ ವಾರೆಂಟ್ ನೋಟಿಸ್ ಜಾರಿಗೊಳಿಸಿದೆ. 2011ರಲ್ಲಿ "ಅವನ್ ಇವನ್" ಎನ್ನುವ ತಮಿಳು ಚಿತ್ರ ತೆರೆ ಕಂಡು ಸಾಕಷ್ಟು ವಿವಾದವನ್ನು ಸೃಷ್ಟಿ ಮಾಡಿತ್ತು.

  'ಅವನ್ ಇವನ್' ಚಿತ್ರದಲ್ಲಿ ಕಾಲಿವುಡ್ ಸ್ಟಾರ್ ನಟರಾದ ಆರ್ಯ ಹಾಗು ವಿಶಾಲ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಬಾಲ ನಿರ್ದೇಶನದಲ್ಲಿ ಮೂಡಿ ಬಂದ 'ಅವನ್ ಇವನ್' ಸಿನಿಮಾದಲ್ಲಿ ಸಿಂಗಮತ್ತಿ ಜಮೀನ್ ಬಗ್ಗೆ ತಪ್ಪಾಗಿ ಚಿತ್ರೀಕರಿಸಿಲಾಗಿದೆ ಎಂದು ಸಾರ್ವಜನಿಕ ನ್ಯಾಯಾಲಯದಲ್ಲಿ ನಟ ಆರ್ಯ ಹಾಗೂ ನಿರ್ದೇಶಕ ಬಾಲಾ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲಾಗಿತ್ತು.

  ಅಪ್ಪು ಎದುರು ವಿಲನ್ ಆಗ್ತಾರಂತೆ ಕಾಲಿವುಡ್ ಸ್ಟಾರ್ ಆರ್ಯ ಅಪ್ಪು ಎದುರು ವಿಲನ್ ಆಗ್ತಾರಂತೆ ಕಾಲಿವುಡ್ ಸ್ಟಾರ್ ಆರ್ಯ

  ಈಗ ತಿರುನೆಲ್ವೇಲಿ ಅಂಬಸಮುದ್ರಂ ನ್ಯಾಯಾಪೀಠ ಈ ಬಗ್ಗೆ ತೀರ್ಪನ್ನು ಹೊರಹಾಕಿದೆ. ಈ ಮೊಕದ್ದಮೆಗೆ ಸಂಭಂದಿಸಿದಂತೆ ಸಾಕ್ಷ್ಯಾಧಾರಗಳನ್ನು ಪರಿಶೀಲನೆ ಮಾಡಿ ನಂತರ ನಟ ಆರ್ಯ ಹಾಗು ನಿರ್ದೇಶಕ ಬಾಲಾ ಅವರು ತಪ್ಪು ಮಾಡಿದ್ದಾರೆಂದು ನಿರ್ಧರಿಸಿ ಅರೆಸ್ಟ್ ವಾರೆಂಟ್ ನೋಟಿಸ್ ಜಾರಿಗೊಳಿಸಿದೆ.

  'ಅವನ್ ಇವನ್' ಚಿತ್ರ 2011 ರಲ್ಲಿ ತೆರೆ ಕಂಡಿತ್ತು. ಸದ್ಯ ಅರೆಸ್ಟ್ ವಾರೆಂಟ್ ನೋಟಿಸ್ ಜಾರಿಗೊಳಿಸಿದ್ದು ಜುಲೈ 13 ರಂದು ಮತ್ತೆ ಈ ಬಗ್ಗೆ ವಿಚಾರಣೆ ನಡೆಯಲಾಗುತ್ತದೆ.

  English summary
  A district court in the Tirunelveli district of Tamil Nadu has issued arrest warrants against director Bala and actor Arya, after the two failed to appear for a hearing in a case filed by Shankar Aathmajan Ambai, the son of zamindar Theerthapathi Raja.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X