»   » ಅರುಣ್ ಸಾಗರ್ ಈಗ 'ರಿಂಗ್ ಮಾಸ್ಟರ್'

ಅರುಣ್ ಸಾಗರ್ ಈಗ 'ರಿಂಗ್ ಮಾಸ್ಟರ್'

Posted By:
Subscribe to Filmibeat Kannada

ಸಕಲ ಕಲಾ ವಲ್ಲಭ ಎಂಬ ಕಿರೀಟ ತೊಡಲು ಅರ್ಹ ಎನಿಸಿರುವ ಕಲಾವಿದ ಅರುಣ್ ಸಾಗರ್ ಅವರ ಹೊಚ್ಚ ಹೊಸ ಸಿನಿಮಾ ಸೆಟ್ಟೇರಿದೆ. ಬಿಗ್ ಬಾಸ್ ಸೀಸನ್ 1 ರಲ್ಲಿ ಜನಮನಗೆದ್ದರೂ ರನ್ನರ್ ಅಪ್ ಆದ ಅರುಣ್ ಅವರು ಈಗ ಬಿಗ್ ಬಾಸ್ ನ ಸಹ ಸ್ಪರ್ಧಿ ಒಂದು ಕಾಲದ ನಿರೂಪಕಿ ಅನುಶ್ರೀ ಜೋಡಿಯಾಗಿ ನಟಿಸುತ್ತಿದ್ದಾರೆ.

ಅರುಣ್ ಅವರ ಕನಸಿನ ಪ್ರಾಜೆಕ್ಟ್ 'ಜೋಕರ್' ಯಾಕೋ ಕುಂಟುತ್ತಾ ಸಾಗಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಅರುಣ್ ಕೈಲಿರುವುದು ರಿಂಗ್ ಮಾಸ್ಟರ್ ಕೋಲು ಮಾತ್ರ ಎನ್ನಬಹುದು. ಬೆಂಗಳೂರಿನ ಗಾಲಿ ಆಂಜನೇಯ ಸ್ವಾಮಿ ದೇಗುಲದಲ್ಲಿ ಇತ್ತೀಚೆಗೆ ಪೂಜೆ ಮಾಡಿಸಿಕೊಂಡು ಚಿತ್ರದ ಯಶಸ್ಸಿಗೆ ಚಿತ್ರತಂಡ ಪ್ರಾರ್ಥನೆ ಸಲ್ಲಿಸಿದೆ.

ಹೆಸರು ರಿಂಗ್ ಮಾಸ್ಟರ್ ಆದರೂ ಇದೇನು wwf ಫೈಟ್ ರಿಂಗ್ ಅಲ್ಲ ಅಥವಾ ಕರಾಟೆ, ಕುಂಗ್ ಫೂ ಫೈಟ್ ಇರುವುದಿಲ್ಲ. ಇದು ಅಪ್ಪಟ ಮನರಂಜನೆ ನೀಡಬಲ್ಲ ಕಾಮಿಡಿ ಟಾನಿಕ್ ಎಂದು ನಿರ್ದೇಶಕ ವಿಶ್ರುತ್ ನಾಯಕ್ ಹೇಳಿದ್ದಾರೆ. ಚಿತ್ರ ಉಪ್ಪಿ ಎಂಟರ್ ಪ್ರೈಸಸ್ ಬ್ಯಾನರ್ ನಡಿಯಲ್ಲಿ ತಯಾರಾಗುತ್ತಿದ್ದು, ಚೇತನ್ ಎಂ ಅಧಿಕೃತ ನಿರ್ಮಾಪಕರಾಗಿದ್ದಾರೆ.

Arun Sagar Ring Master Movie launched

ಉಪ್ಪಿ ಎಂಟರ್ ಪ್ರೈಸಸ್ ಅಂದ್ರೆ ರಿಯಲ್ ಸ್ಟಾರ್ ಉಪೇಂದ್ರ ಅವರ ಪ್ರೊಡಕ್ಷನ್ ಹೌಸಾ? ಅಲ್ಲ ಬಿಡಿ, ಇದು 'ಎ' ಚಿತ್ರ ನಿರ್ಮಿಸಿ ನಂತರ ವಿತರಕರಿಗೆ ಮಾರಿದ ಚಿತ್ರ ಯಶಸ್ಸು ಕಂಡ ಮೇಲೆ ಮೂಗಿನ ಮೇಲೆ ಬೆರಳಿಟ್ಟುಕೊಂಡ ನಿರ್ಮಾಪಕ ಬಿ.ಜಿ ಮಂಜುನಾಥ್ ಅವರದ್ದು.

ಅರುಣ್ ಸಾಗರ್ ಗೆ ಅನುಶ್ರೀ ಜೋಡಿಯಾದರೆ, ಶೃಂಗ, ಶ್ವೇತಾ ಇಬ್ಬರು ಪ್ರಮುಖ ಪಾತ್ರಧಾರಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಉಗ್ರಂ ಖ್ಯಾತಿಯ ರವಿ ಬರ್ಸೂರು ಸಂಗೀತ ಸಂಯೋಜನೆ ನೀಡಲಿದ್ದು, ಸಿನಿಟೆಕ್ ಸೂರಿ ಅವರು ಛಾಯಾಗ್ರಾಹಕರಾಗಿದ್ದಾರೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ಚಿತ್ರೀಕರಣ ಇನ್ನೇನು ಆರಂಭಗೊಳ್ಳಲಿದೆ. ಅರುಣ್ ಅವರ ಪ್ರತಿಭೆ ಅನಾವರಣಕ್ಕೆ ಈ ಚಿತ್ರ ವೇದಿಕೆಯಾಗಲಿದೆ ಎಂಬುದು ನಮ್ಮ ಹಾರೈಕೆ.

English summary
'Big Boss' runner up Arun Sagar is all set to turn hero with a new film called 'Ring Master'. The film was launched at the Gaali Anjaneya Swamy Temple in Bangalore. Anushree is playing a heroine opposite him. Shrunga and Shwetha are also playing prominent roles in the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada