For Quick Alerts
  ALLOW NOTIFICATIONS  
  For Daily Alerts

  'ದರ್ಶನ್ ಸರ್ ಬಗ್ಗೆ ಮಾತಾಡೋ ಯೋಗ್ಯತೆ ನನಗಿಲ್ಲ': ಅರುಣಾ ಕುಮಾರಿ ಪ್ರತ್ಯಕ್ಷ

  |

  25 ಕೋಟಿ ವಂಚನೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದ ಮಹಿಳೆ ಅರುಣಾ ಕುಮಾರಿ ಪ್ರತ್ಯಕ್ಷವಾಗಿದ್ದಾರೆ. ಮಂಗಳವಾರ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿ ನಿರ್ಮಾಪಕ ಉಮಾಪತಿ ವಿರುದ್ದ ಗಂಭೀರ ಆರೋಪಗಳನ್ನು ಮಾಡಿದ್ದ ಅರುಣಾ ಕುಮಾರಿ ಬುಧವಾರ ಮಾಧ್ಯಮಗಳ ಮುಂದೆ ಹಾಜರಾದರು.

  ಈ ವೇಳೆ ಮಾತನಾಡಿದ ಅರುಣಾ ಕುಮಾರಿ, ''ನಾನು ಯಾರಿಗೂ ಮೋಸ ಮಾಡಿಲ್ಲ, ವಂಚನೆ ಮಾಡಿರುವ ಬಗ್ಗೆ ದಾಖಲೆಗಳಿದ್ದರೆ ಕೊಡಲಿ, ಪೊಲೀಸರ ಮುಂದೆ ಇಡಲಿ'' ಎಂದು ತಿರುಗೇಟು ಕೊಟ್ಟಿದ್ದಾರೆ. ನಟ ದರ್ಶನ್ ಅವರ ಬಗ್ಗೆ ಪ್ರಶ್ನಿಸಿದಾಗ ''ದರ್ಶನ್ ಸರ್ ಬಗ್ಗ ಮಾತಾಡೋ ಯೋಗ್ಯತೆ ನನಗಿಲ್ಲ'' ಎಂದು ಹೇಳಿದರು. 25 ಕೋಟಿ ವಂಚನೆ ಯತ್ನ ಕೇಸ್‌ ಸಂಬಂಧಿಸಿದಂತೆ ಅರುಣಾ ಕುಮಾರಿ ಏನಂದ್ರು? ಮುಂದೆ ಓದಿ....

  'ನನ್ನ ಜೀವನ ಕೆಟ್ಟರೆ ಯಾರೂ ಬರಲ್ಲ': ದರ್ಶನ್ ಆರೋಪಕ್ಕೆ ಅರುಣಾ ಕುಮಾರಿ ತಿರುಗೇಟು'ನನ್ನ ಜೀವನ ಕೆಟ್ಟರೆ ಯಾರೂ ಬರಲ್ಲ': ದರ್ಶನ್ ಆರೋಪಕ್ಕೆ ಅರುಣಾ ಕುಮಾರಿ ತಿರುಗೇಟು

  ಸಾಕ್ಷಿ ಎಲ್ಲಿದೆ ಕೊಡೋಕೆ ಹೇಳಿ

  ಸಾಕ್ಷಿ ಎಲ್ಲಿದೆ ಕೊಡೋಕೆ ಹೇಳಿ

  ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ ಐ ಆರ್ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅರುಣಾ ಕುಮಾರಿ, ''ವಂಚನೆ ಮಾಡಿರುವ ಬಗ್ಗೆ ಸಾಕ್ಷಿ ಇದ್ಯಾ'' ಎಂದು ಪ್ರಶ್ನಿಸಿದರು. ''ನಾನು ಯಾವುದೇ ವಂಚನೆ ಮಾಡಿಲ್ಲ, ಅದಕ್ಕೆ ಸಾಕ್ಷಿ ಇದ್ದರೆ ಪೊಲೀಸರಿಗೆ ಕೊಡಲಿ, ನಾನೇ ತಪ್ಪು ಮಾಡಿದ್ದೇನೆ ಎನ್ನುವುದಾದರೆ ಕಾನೂನಿದೆ, ನೋಡಿಕೊಳ್ಳುತ್ತೆ ಬಿಡಿ'' ಎಂದಿದ್ದಾರೆ.

  ನಾನು ಇದರಿಂದ ಹೊರಗೆ ಬರಬೇಕಿದೆ

  ನಾನು ಇದರಿಂದ ಹೊರಗೆ ಬರಬೇಕಿದೆ

  ''ನಮ್ಮ ತಂದೆ ಪೇಶೆಂಟ್. ನನ್ನ ತಾಯಿ ಪೇಶೆಂಟ್, ನನಗೆ ಒಂದು ಮಗು ಇದೆ. ನನಗೂ ಆರೋಗ್ಯ ಸರಿಯಿಲ್ಲ. ನಾನೊಬ್ಬಳೆ ಎಲ್ಲರಿಗೂ ಆಧಾರ. ನನಗೆ ಇದು ಬೇಡವಾದ ವಿಚಾರ. ನಾನು ಇದರಿಂದ ಹೊರಗೆ ಬರಬೇಕಿದೆ'' ಎಂದು ಅರುಣಾ ಕುಮಾರಿ ಹೇಳಿಕೊಂಡರು.

  ಅರುಣಾ ಕುಮಾರಿಯ ಅಸಲಿ ರೂಪ ಬಹಿರಂಗಪಡಿಸಿದ ನಟ ದರ್ಶನ್ಅರುಣಾ ಕುಮಾರಿಯ ಅಸಲಿ ರೂಪ ಬಹಿರಂಗಪಡಿಸಿದ ನಟ ದರ್ಶನ್

  ದರ್ಶನ್ ಸರ್ ಬಗ್ಗೆ ನಾನು ಮಾತಾಡಲ್ಲ

  ದರ್ಶನ್ ಸರ್ ಬಗ್ಗೆ ನಾನು ಮಾತಾಡಲ್ಲ

  ''ದರ್ಶನ್ ಸರ್ ಬಗ್ಗೆ ಮಾತಾಡೋ ಯೋಗ್ಯತೆ ನನಗಿಲ್ಲ. ಅಂತಹ ದೊಡ್ಡ ವ್ಯಕ್ತಿ ಮಾತಾಡುವುದಕ್ಕೆ ನನಗೆ ಇಷ್ಟ ಇಲ್ಲ. ಅವರೊಬ್ಬ ದೊಡ್ಡ ವ್ಯಕ್ತಿ. ನಾನು ವಂಚನೆ ಮಾಡಿರುವುದನ್ನು ಸಾಬೀತುಪಡಿಸಿದರೆ ನಾನು ಕಾನೂನಿನ ಅಡಿಯಲ್ಲಿ ಶಿಕ್ಷೆಗೆ ಬದ್ದನಾಗಿದ್ದೇನೆ'' ಎಂದು ಅರುಣಾ ಕುಮಾರಿ ಸ್ಪಷ್ಟನೆ ಕೊಟ್ಟಿದ್ದಾರೆ.

  25 ಕೋಟಿ ವಂಚನೆ ಪ್ರಕರಣದಲ್ಲಿ ಡಿ ಬಾಸ್ ಬೆಂಬಲಕ್ಕೆ ನಿಂತ ನಾಗವರ್ಧನ್ ಯಾರು..? | Filmibeat Kannada
  ನಾಗವರ್ಧನ್ ಯಾರೂ ಅಂತಾನೇ ಗೊತ್ತಿಲ್ಲ

  ನಾಗವರ್ಧನ್ ಯಾರೂ ಅಂತಾನೇ ಗೊತ್ತಿಲ್ಲ

  ಇನ್ನು ಉದ್ಯಮಿ ನಾಗವರ್ಧನ್ ಎನ್ನುವವರು ಅರುಣಾ ಕುಮಾರಿ ವಿರುದ್ಧ ವಂಚನೆ ಆರೋಪ ಮಾಡಿದ್ದರು. ಲಕ್ಷಾಂತರ ರೂಪಾಯಿ ಹಣ ಹಾಗೂ ಚಿನ್ನ ಮೋಸ ತೆಗೆದುಕೊಂಡು ಮೋಸ ಮಾಡಿದ್ದಾರೆ ಎಂದು ಪ್ರೆಸ್‌ಮೀಟ್ ಮಾಡಿ ದೂರಿದ್ದರು. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಅರುಣಾಕುಮಾರಿ, ''ಅವರು ಯಾರು ಎಂದೇ ನನಗೆ ಗೊತ್ತಿಲ್ಲ'' ಎಂದಿದ್ದಾರೆ.

  English summary
  Rs 25 cr fraud case controversy: Aruna Kumari Reacted about Umapathy, Businessman Nagavardhan allegations.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X