For Quick Alerts
  ALLOW NOTIFICATIONS  
  For Daily Alerts

  ಫಸ್ಟ್ ಲುಕ್: 'ರಾಬರ್ಟ್' ನಾಯಕಿ ಆಶಾ ಭಟ್ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ರಾಬರ್ಟ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಆಶಾ ಭಟ್ ಗೆ ಇಂದು (ಸೆಪ್ಟಂಬರ್ 5) ಹುಟ್ಟುಹಬ್ಬದ ಸಂಭ್ರಮ. ಮೊದಲ ಸಿನಿಮಾ ರಿಲೀಸ್ ಗೂ ಮೊದಲೇ ಕ್ರೇಜ್ ಹುಟ್ಟುಹಾಕಿರುವ ನಾಯಕಿ ಆಶಾ ಭಟ್ ಗೆ ಸಿನಿಮಾತಂಡದಿಂದ ಭರ್ಜರಿ ಉಡುಗೊರೆ ಸಿಕ್ಕಿದೆ.

  ಇಡೀ ರಾತ್ರಿ ಪೊಲೀಸ್ ವಶದಲ್ಲಿದ್ದ Raginiಗೆ ಇಂದು ಎರಡನೇ ದಿನದ ವಿಚಾರಣೆ | Filmibeat Kannada

  ಹೌದು, ಇಂದು ರಾಬರ್ಟ್ ತಂಡ ಆಶಾ ಭಟ್ ಜನ್ಮದಿನದ ಪ್ರಯುಕ್ತ ಫಸ್ಟ್ ಲುಕ್ ರಿಲೀಸ್ ಮಾಡಿದೆ. ಇದುವರೆಗೂ ದರ್ಶನ್ ಪೋಸ್ಟರ್ ಮತ್ತು ಟೀಸರ್ ಅನ್ನು ರಿವೀಲ್ ಮಾಡಿದ್ದ ಸಿನಿಮಾತಂಡ ಮೊದಲ ಬಾರಿಗೆ ನಾಯಕಿಯ ಪಾತ್ರವನ್ನು ಪರಿಚಯಿಸಿದೆ. ಚಿತ್ರದಲ್ಲಿ ಆಶಾ ಭಟ್ ಡ್ಯಾನ್ಸ್ ಮಾಡುತ್ತಿರುವ ಲುಕ್ ಅನ್ನು ಸಿನಿಮಾತಂಡ ರಿಲೀಸ್ ಮಾಡಿ, ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ.

  ಡಿ ಬಾಸ್ ಎಂದರೆ ಹೇಗೆ? 'ರಾಬರ್ಟ್' ನಾಯಕಿ ಆಶಾ ಭಟ್ ಹೇಳಿದ ಮಾತುಗಳಿವು...

  ರಾಬರ್ಟ್ ತಂಡ, ಸಿನಿಮಾ ಬಗ್ಗೆ ಆಗಲಿ ಅಥವಾ ಪಾತ್ರದ ಬಗ್ಗೆ ಹೆಚ್ಚೇನು ಬಿಟ್ಟುಕೊಟ್ಟಿಲ್ಲ. ಹಾಗಾಗಿ ಚಿತ್ರದಲ್ಲಿ ಆಶಾ ಪಾತ್ರ ಹೇಗಿರಲಿದೆ ಎನ್ನುವುದು ಅಭಿಮಾನಿಗಳ ಕುತೂಹಲ. ಅದೇನೇ ಇರಲಿ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಆಶಾ ಭಟ್ ಗೆ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಶುಭಕೋರುತ್ತಿದ್ದಾರೆ.

  ರಾಬರ್ಟ್ ತಂಡದ ಭರ್ಜರಿ ಗಿಫ್ಟ್ ಗೆ ಆಶಾ ಭಟ್ ಫುಲ್ ಖುಷ್ ಆಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಆಶಾ, "ರಾಬರ್ಟ್ ತಂಡ, ನೀವು ನನಗೆ ಕುಟುಂಬದಂತೆ ಇದ್ದೀರಿ. ನನ್ನ ಹುಟ್ಟುಹಬ್ಬವನ್ನು ಅದ್ಭುತವಾಗಿಸುವುದು ಹೇಗೆ ಎಂದು ನಿಮಗೆ ಚೆನ್ನಾಗಿ ತಿಳಿದಿದೆ. ಕೊನೆಯ ಜನ್ಮದಿನದಿಂದ ನಾವು ಒಟ್ಟಿಗೆ ಪ್ರಯಾಣ ಪ್ರಾರಂಭಿಸಿದ್ದೇವೆ. ಈ ಜನ್ಮದಿನವನ್ನು ನಾವು ನಮ್ಮ ಪ್ರಯತ್ನವನ್ನು ಆಚರಿಸುತ್ತಿದ್ದೇವೆ. ಧನ್ಯವಾದಗಳು" ಎಂದು ಟ್ವೀಟ್ ಮಾಡಿದ್ದಾರೆ.

  English summary
  Actress Asha Bhat's first look in Robert released on occasion of her birthday. This movie is directed by Tarun Sudhir.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X