For Quick Alerts
  ALLOW NOTIFICATIONS  
  For Daily Alerts

  ಮತ್ತೆ ಶರಣ್ ಜೊತೆ ಚುಟು ಚುಟು ಅಂತಾರೆ ಆಶಿಕಾ

  |

  ಕಳೆದ ವರ್ಷ ಚುಟು ಚುಟು ಅಂತ ಪಡ್ಡೆ ಹೈಕ್ಳ ಹೃದಯದಲ್ಲಿ ಕಲ್ಲು ಹೊಡೆದಿದ್ದ ಆಶಿಕಾ ರಂಗನಾಥ್ ಮತ್ತು ಶರಣ್ ಜೋಡಿ ಈಗ ಮತ್ತೊಮ್ಮೆ ಒಟ್ಟಿಗೆ ಬರ್ತಿದೆ.

  ಶರಣ್ ಅಭಿನಯಿಸುತ್ತಿರುವ ಹೊಸ ಸಿನಿಮಾದಲ್ಲಿ ಆಶಿಕಾ ರಂಗನಾಥ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಚಿತ್ರವನ್ನ ಪುಷ್ಕರ್ ಮಲ್ಲಿಕಾರ್ಜುನ ಅವರು ನಿರ್ಮಿಸುತ್ತಿದ್ದು, ಖುದ್ದು ಅವರೇ ನಾಯಕಿಯ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

  ಹುಟ್ಟುಹಬ್ಬದ ದಿನ 'ಅವತಾರ್ ಪುರುಷ'ನಾದ ಶರಣ್

  ಇತ್ತೀಚಿಗಷ್ಟೆ ಶರಣ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಬರ್ತಡೇಯ ವಿಶೇಷವಾಗಿ 'ಅವತಾರ್ ಪುರುಷ' ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿತ್ತು. ಇನ್ನು ಈ ಸಿನಿಮಾ ನಿರ್ದೇಶನ ಮಾಡುತ್ತಿರುವುದು ಸಿಂಪಲ್ ಸುನಿ. ಈಗಷ್ಟೇ ಬಜಾರ್ ಬೇಟೆ ಮುಗಿಸಿರುವ ಸುನಿ ಈಗ ಮತ್ತೊಂದು ಥ್ರಿಲ್ಲಿಂಗ್ ಸಬ್ಜೆಕ್ಟ್ ಮೂಲಕ ಕಂಬ್ಯಾಕ್ ಆಗಿದ್ದಾರೆ.

  ಹುಟ್ಟುಹಬ್ಬದ ದಿನ 'ಅವತಾರ್ ಪುರುಷ'ನಾದ ಶರಣ್

  ಇನ್ನುಳಿದಂತೆ 'ಟಗರು' ಖ್ಯಾತಿಯ ಚರಣ್ ರಾಜ್ ಸಂಗೀತ ನೀಡಲಿದ್ದು, ಅರ್ಜುನ್ ಎ ಆರ್ ಸಂಭಾಷಣೆ ಹಾಗೂ ಚಿತ್ರಕಥೆಯಲ್ಲಿ ಕೈ ಜೋಡಿಸಿದ್ದಾರೆ.

  ವಿಶೇಷ ಅಂದ್ರೆ ಸುಮಾರು 30 ವರ್ಷದ ಹಿಂದೆ ಅವತಾರ ಪುರುಷ ಎಂಬ ಹೆಸರಿನಲ್ಲಿ ಅಂಬರೀಶ್ ಸಿನಿಮಾ ಮಾಡಿದ್ದರು. ಆ ಚಿತ್ರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಹಾಗಿದ್ದರೂ ಹೊಸ ಕಥೆಗೆ ಈ ಟೈಟಲ್ ಸೂಕ್ತ ಎಂದು ಆಯ್ಕೆಮಾಡಿಕೊಂಡಿದ್ದಾರಂತೆ.

  English summary
  Ashika Ranganath, who rose to fame with Chutu Chutu in Raambo 2, will once again be associating with the film’s hero, Sharan, for his next Avatar Purusha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X