For Quick Alerts
  ALLOW NOTIFICATIONS  
  For Daily Alerts

  ಪತ್ನಿ ಅಶ್ವಿನಿ ಮತ್ತು ಮಕ್ಕಳು ಅಪ್ಪು ಜೊತೆ ಶಾಪಿಂಗ್ ಹೋಗಲು ಇಷ್ಟ ಪಡುತ್ತಿರಲಿಲ್ಲ ಯಾಕೆ?

  |

  ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿಕೆ ಒಂದು ತಿಂಗಳು ಕಳೆದಿದೆ. ಅಪ್ಪು ಕುಟುಂಬ ಹಾಗೂ ಅಭಿಮಾನಿಗಳು ಇನ್ನೂ ದುರಂತವನ್ನು ನಂಬುವ ಮನಸ್ಥಿತಿಯಲ್ಲಿ ಇಲ್ಲ. ಪುನೀತ್ ಫ್ಯಾನ್ಸ್ ಅಂತೂ ಈ ಒಂದು ತಿಂಗಳು ತಮ್ಮ ನೆಚ್ಚಿನ ನಟ ಧ್ಯಾನವನ್ನೇ ಮಾಡುತ್ತಿದ್ದಾರೆ. ಅಪ್ಪು ಮಾಡಿದ ಸಮಾಜಮುಖಿ ಕೆಲಸಗಳನ್ನು ನೆನೆದು ಬೇರೆಯವರಿಗೆ ಸ್ಪೂರ್ತಿಯಾಗುತ್ತಿದ್ದಾರೆ. ಇಂದು ಪುನೀತ್ ಇದ್ದಿದ್ದರೆ ಪತ್ನಿಯೊಂದಿಗೆ 22ನೇ ವಿವಾಹ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಿದ್ದರು.

  ಸಾಮಾನ್ಯವಾಗಿ ವಿವಾಹ ವಾರ್ಷಿಕೋತ್ಸವಕ್ಕೆ ಪುನೀತ್ ರಾಜ್‌ಕುಮಾರ್ ಹಾಗೂ ಪತ್ನಿ ಅಶ್ವಿನಿ ತಮ್ಮ ಮಕ್ಕಳೊಂದಿಗೆ ವಿದೇಶ ಪ್ರವಾಸ ಮಾಡುತ್ತಿದ್ದರು. ಇಲ್ಲವೇ ಪತ್ನಿಯೊಂದಿಗೆ ಮನೆಯಲ್ಲಿ ಕೇಕ್ ಕಟ್ ಮಾಡಿ ಸಂಭ್ರಮಿಸುತ್ತಿದ್ದರು. ಆದರೆ, 22ನೇ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಿಲು ಆ ವಿದಿ ಬಿಡಲಿಲ್ಲ. ಅಶ್ವಿನಿಯವರನ್ನು ಕೈ ಹಿಡಿದ ದಿನದಿಂದಲೂ ಪುನೀತ್ ಕುಟುಂಬಕ್ಕೆ ಸಿನಿಮಾದಷ್ಟೇ ಪ್ರಾಮುಖ್ಯತೆ ನೀಡಿದ್ದಾರೆ. ಆದರೆ, ಸಂದರ್ಶನವೊಂದರಲ್ಲಿ ಅಶ್ವಿನಿ, ಅಪ್ಪು ಜೊತೆ ಶಾಪಿಂಗ್ ಹೋಗಲು ಇಷ್ಟವಿಲ್ಲ ಅಂತ ಹೇಳಿದ್ದರು. ಅದ್ಯಾಕೆ ಅನ್ನುವ ಮಾತಿಗೆ ಮುಂದೆ ಓದಿ.

  ಅಪ್ಪು ಜೊತೆ ಮಾಲ್‌ಗಳಿಗೆ ಹೋಗುತ್ತಿರಲಿಲ್ಲ ಪತ್ನಿ ಅಶ್ವಿನಿ

  ಅಪ್ಪು ಜೊತೆ ಮಾಲ್‌ಗಳಿಗೆ ಹೋಗುತ್ತಿರಲಿಲ್ಲ ಪತ್ನಿ ಅಶ್ವಿನಿ

  ಸೂಪರ್‌ಸ್ಟಾರ್ ಅಂದರೆ, ಇದೊಂದು ಸಮಸ್ಯೆ ಎದುರಾಗುತ್ತೆ. ಅವರು ಎಲ್ಲಿಗೆ ಹೋದರೂ ಅವರನ್ನು ಗುರುತಿಸಿ ಸುತ್ತುವರೆದು ಬಿಡುತ್ತಾರೆ. ಹೀಗಾಗಿ ಸಾರ್ವಜನಿಕ ಸ್ಥಳಗಳಿಗೆ ಸ್ಟಾರ್‌ಗಳು ಹೆಚ್ಚಾಗಿ ಭೇಟಿ ಕೊಡುವುದಿಲ್ಲ. ಅದರಲ್ಲೂ ಅಪ್ಪಿ ತಪ್ಪಿಯೂ ತಮ್ಮ ಕುಟುಂಬವನ್ನು ಕರೆದುಕೊಂಡು ಹೋಗುವುದಿಲ್ಲ. ಆದರೆ, ತಮ್ಮ ಕುಟುಂಬದ ಜೊತೆ ಶಾಪಿಂಗ್ ಮಾಡುತ್ತಾರೆ. ಸಿನಿಮಾ ನೋಡುತ್ತಾರೆ. ವೈಯಕ್ತಿಕ ಜೀವನದ ಕಡೆ ಹೆಚ್ಚು ಗಮನ ಹರಿಸುತ್ತಾರೆ. ಅಪ್ಪು ಕೂಡ ಕುಟುಂಬಕ್ಕೆ ಹೆಚ್ಚು ಸಮಯ ನೀಡಿದ್ದರು. ಆದರೆ, ಅಪ್ಪು ಜೊತೆ ಪತ್ನಿ ಅಶ್ವಿನಿ ಹಾಗೂ ಅವರ ಇಬ್ಬರು ಹೆಣ್ಣು ಮಕ್ಕಳು ವಂದಿತಾ ಹಾಗೂ ಧೃತಿ ಪುನೀತ್ ರಾಜ್‌ಕುಮಾರ್ ಶಾಪಿಂಗ್‌ಗೆ ಮಾತ್ರ ಹೋಗುತ್ತಿರಲಿಲ್ಲವಂತೆ.

  ನಾನು ಪುನೀತ್ ಜೊತೆ ಮಾಲ್‌ಗಳಿಗೆ ಹೋಗಲ್ಲ

  ನಾನು ಪುನೀತ್ ಜೊತೆ ಮಾಲ್‌ಗಳಿಗೆ ಹೋಗಲ್ಲ

  ಮೂರು ವರ್ಷಗಳ ಹಿಂದೆ ಅಶ್ವಿನಿ ಹಾಗೂ ಪುನೀತ್ ರಾಜ್‌ಕುಮಾರ್ ಇಬ್ಬರೂ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಪುನೀತ್ ಶಾಪಿಂಗ್ ಮಾಡಲು ಹೋಗುವುದಿಲ್ಲವೆಂದು ಹೇಳಿದ್ದರು. "ನಾನು ಪುನೀತ್ ಜೊತೆ ಶಾಪಿಂಗ್‌ಗೆ ಅಂತ ಮಾಲ್‌ಗಳಲ್ಲಿ ಹೋಗಲ್ಲ. ಅಲ್ಲಿಗೆ ಅವರೊಂದಿಗೆ ಹೋದರೆ ನಮ್ಮನ್ನೂ ಗುರುತು ಹಿಡಿಯುತ್ತಾರೆ. ನಮಗೂ ಅವರೊಂದಿಗೆ ಮಾಲ್‌ಗಳಲ್ಲಿ ಕಾಣಿಸಿಕೊಳ್ಳಲು ಇಷ್ಟವಿಲ್ಲ. ಮಕ್ಕಳಂತೂ ತುಂಬಾನೇ ಮಜುಗರ ಪಟ್ಟುಕೊಳ್ಳುತ್ತಾರೆ. ಅವರಿಗೂ ನಾವು ಎಂತಹ ಕುಟುಂಬದೊಂದಿಗೆ ಬಂದಿದ್ದೇವೆ ಎಂದು ಗೊತ್ತಿದೆ. ಆದರೆ ಅದೆಲ್ಲವೂ ನಮಗೆ ತೊಂದರೆ ಅಂತ ಅನಿಸಿಲ್ಲ." ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಂದರ್ಶನದಲ್ಲಿ ಹೇಳಿದ್ದರು.

  ಸಿನಿಮಾ, ಕಾಫಿ ಕುಡಿಯಲು ಹೋಗುತ್ತೇವೆ

  ಸಿನಿಮಾ, ಕಾಫಿ ಕುಡಿಯಲು ಹೋಗುತ್ತೇವೆ

  "ಮಾಲ್‌ಗಳಿಗೆ ಹೋಗಿಲ್ಲ ಅಂದ್ರೆ ಏನಂತೆ, ಆಗಾಗ ನಮ್ಮನ್ನು ಸಿನಿಮಾಗಳಿಗೆ ಕರೆದುಕೊಂಡು ಹೋಗುತ್ತಾರೆ. ಕೆಲವೊಮ್ಮೆ ಕಾಫಿ ಕುಡಿಯಲು ಹೊರಗಡೆ ಹೋಗುತ್ತೇವೆ. ಆಗೆಲ್ಲಾ ನಾವು ಅವರೊಂದಿಗೆ ಕಾಲ ಕಳೆದು ಎಂಜಾಯ್ ಮಾಡಿದ್ದೇವೆ. ಆದರೆ, ಇದೆಲ್ಲಾ ನಮಗೆ ಅಭ್ಯಾಸ ಆಗಿ ಹೋಗಿದೆ. ಹಾಗಾಗಿ ಇದು ಅಂತಹ ದೊಡ್ಡ ವಿಷಯವೆಂದು ಅನಿಸುವುದಿಲ್ಲ." ಎಂದು ಮೂರು ವರ್ಷದ ಹಿಂದೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಂದರ್ಶನದಲ್ಲಿ ಮಾತಾಡಿದ್ದರು.

  ಕ್ಯಾಮರಾ, ಫೋಟೊ ಅಂದರೆ ಮಕ್ಕಳಿಗೆ ಇಷ್ಟವಿಲ್ಲ

  ಕ್ಯಾಮರಾ, ಫೋಟೊ ಅಂದರೆ ಮಕ್ಕಳಿಗೆ ಇಷ್ಟವಿಲ್ಲ

  ಪುನೀತ್ ರಾಜ್‌ಕುಮಾರ್ ಮಕ್ಕಳಿಗೆ ಕ್ಯಾಮರಾ ಮುಂದೆ ನಿಲ್ಲುವುದು, ಫೋಟೊಗೆ ಪೋಸ್ ಕೊಡುವುದು ಇಷ್ಟವಿಲ್ಲ. ಹೀಗಾಗಿ ಅವರು ಮನೆಯಲ್ಲಿ ಹೆಚ್ಚಾಗಿ ತಂದೆಯೊಂದಿಗೆ ಕಾಲ ಕಳೆಯುತ್ತಿದ್ದರು. ಅಪ್ಪು ಹಿರಿಯ ಪುತ್ರಿ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಇತ್ತ ಕಿರಿಯ ಪುತ್ರಿ 10ನೇ ತರಗತಿ ಪರೀಕ್ಷೆ ಬರೆದಿದ್ದಾರೆ. ಇಬ್ಬರೂ ಸಿನಿಮಾದಿಂದ ಕೊಂಚ ದೂರವೇ ಉಳಿದಿದ್ದಾರೆ.

  English summary
  Ashwini and two daughters don't like to shop with Puneeth Rajkumar. Because of his stardom people always surrounded him. Daughter and wife doesn't like with photographs.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X