»   » ಕೊನೆಗೂ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿವಾದಕ್ಕೆ ತೆರೆ

ಕೊನೆಗೂ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿವಾದಕ್ಕೆ ತೆರೆ

Posted By:
Subscribe to Filmibeat Kannada

ಅಂತೂ ಇಂತೂ ಕೊನೆಗೂ ಕೋಟ್ಯಾಂತರ ವಿಷ್ಣು ಅಭಿಮಾನಿಗಳ ಕನಸು ನೆರವೇರುವ ಕಾಲ ಹತ್ತಿರವಾಗಿದೆ. ಕಳೆದ ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 'ಅಭಿನವ ಭಾರ್ಗವ' ಸಾಹಸಸಿಂಹ ವಿಷ್ಣುವರ್ದನ್ ಅವರ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಹಲವಾರು ಅಡ್ಡಿ ಆತಂಕಗಳು ಉಂಟಾಗುತ್ತಿದ್ದವು.

ಸದ್ಯಕ್ಕೆ ಎಲ್ಲಾ ವಿವಾದಗಳಿಗೆ ತೆರೆ ಎಳೆದು ಸ್ಮಾರಕ ನಿರ್ಮಾಣಕ್ಕೆ ಶುಭ ಗಳಿಗೆ ಮೂಡಿಬಂದಿದ್ದು, ಇದೀಗ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ 2 ಎಕರೆ ಜಾಗ ನೀಡಲು ಒಪ್ಪಿಗೆ ನೀಡಿದ್ದಾರೆ.[ವಿಷ್ಣುವರ್ಧನ್ ಸ್ಮಾರಕದ ಕಥೆ ಹೇಳುವೆ, ನಿನ್ನ ಕಥೆ ಹೇಳುವೆ!]

Vishnuvardhan

ಉತ್ತರಹಳ್ಳಿಯಲ್ಲಿರುವ ಅಭಿಮಾನ್ ಸ್ಟುಡಿಯೋ ಎದುರಿಗಿನ ಜಾಗದಲ್ಲಿ ಡಾ.ವಿಷ್ಣು ಸ್ಮಾರಕ ನಿರ್ಮಾಣ ಮಾಡಲು, ಭಾರತಿ ವಿಷ್ಣುವರ್ಧನ್ ಸಮ್ಮುಖದಲ್ಲಿ ಇಂದು ಅಭಿಮಾನ್ ಸ್ಟುಡಿಯೋ ಮಾಲೀಕರಿಂದ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ಅವರಿಗೆ ಬಹಿರಂಗ ಪತ್ರ ನೀಡಿದ್ದಾರೆ.[ವಿಷ್ಣುವರ್ಧನ್ ಸ್ಮಾರಕದ ಕಥೆ ಹೇಳುವೆ, ನಿನ್ನ ಕಥೆ ಹೇಳುವೆ!]

ಅಭಿಮಾನ್ ಸ್ಟುಡಿಯೋದ ಆಸ್ತಿ ವಿಚಾರಕ್ಕೆ ಸಂಬಂಧ ಪಟ್ಟಂತೆ ಈ ಹಿಂದೆ ಹಾಸ್ಯ ಬ್ರಹ್ಮ ಬಾಲಕೃಷ್ಣ ಪುತ್ರಿ ಗೀತಾಬಾಲಿ ಕೋರ್ಟ್ ನಲ್ಲಿ ದಾವೆ ಹೂಡಿದ್ದರು. ತಮಗೆ ಗೊತ್ತಿಲ್ಲದೇ ಸ್ಟುಡಿಯೋದಲ್ಲಿನ 10 ಎಕರೆ ಜಾಗ ಮಾರಾಟವಾಗಿದ್ದರಿಂದ ಕೋರ್ಟ್ ನಿಂದ ಇನ್ಜಂಕ್ಷನ್ ಆರ್ಡರ್ ತಂದಿದ್ದರು. 10 ಎಕರೆ ಜಾಗ ಪೈಕಿ ಡಾ.ವಿಷ್ಣು ಸ್ಮಾರಕಕ್ಕೆ ಮೀಸಲಾಗಿರುವ 2 ಎಕರೆ ಕೂಡ ಸೇರಿದ್ದರಿಂದ ಸ್ಮಾರಕ ನಿರ್ಮಾಣಕ್ಕೆ ಅಡ್ಡಿಯಾಗಿತ್ತು.[ಸಾಹಸಸಿಂಹ ಡಾ. ವಿಷ್ಣುವರ್ಧನ್ ಸ್ಮಾರಕ ಶಂಕುಸ್ಥಾಪನೆ]

vishnuvardhan

ಆದರೆ ಕುಟುಂಬದಲ್ಲಿ ಆಸ್ತಿ ವಿವಾದ ಇನ್ನೂ ತಣ್ಣಗಾಗದ ಕಾರಣ, ತಮ್ಮ ಕೌಟುಂಬಿಕ ವಿಚಾರದಿಂದ ಡಾ.ವಿಷ್ಣು ಸ್ಮಾರಕಕ್ಕೆ ಅಡ್ಡಿಯಾಗಬಾರದು ಅಂತ ಹೈಕೋರ್ಟ್ ವಕೀಲರ ಸಲಹೆ ಮೇರೆಗೆ 2 ಎಕರೆ ಜಾಗವನ್ನ ಬಿಟ್ಟುಕೊಡಲು ದಿವಂಗತ ಬಾಲಕೃಷ್ಣ ಪುತ್ರಿ ಗೀತಾಬಾಲಿ ನಿರ್ಧರಿಸಿದ್ದರು.

ಅಂತೂ ಕೊನೆಗೂ ಎಲ್ಲಾ ವಿವಾದಗಳಿಗೆ ಫುಲ್ ಸ್ಟಾಪ್ ಇಟ್ಟು, ಡಿಸೆಂಬರ್ 30, 2009ರಲ್ಲಿ ಅಸ್ತಂಗತರಾದ,[ದಕ್ಷಿಣ ದಿಕ್ಕಿನಲ್ಲಿ ವಿಷ್ಣುವರ್ಧನ್ ಪಯಣ] ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆಯಲಿದೆ.

English summary
Hurdles to build Kannada Actor Dr Vishnuvardhan Memorial in Bengaluru cleared as Geeta Bali daughter of Late Balakrishna agrees to spare 2 acres of land.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada