»   » ಅಟ್ಟಹಾಸ ನೋಡಲು ಚೆನ್ನೈಗೆ ಬಂದ ಮುತ್ತುಲಕ್ಷ್ಮೀ

ಅಟ್ಟಹಾಸ ನೋಡಲು ಚೆನ್ನೈಗೆ ಬಂದ ಮುತ್ತುಲಕ್ಷ್ಮೀ

Posted By:
Subscribe to Filmibeat Kannada
Kishore
ನರಹಂತಕ, ಕಾಡುಗಳ್ಳ, ದಂತಚೋರ ವೀರಪ್ಪನ್ ಜೀವನ ಕಥೆಯಾಧಾರಿತ 'ಅಟ್ಟಹಾಸ' ಚಿತ್ರವನ್ನು ವೀರಪ್ಪನ್ ಪತ್ನಿ ಮುತ್ತುಲಕ್ಷ್ಮೀ ಇಂದು ಮದ್ಯಾಹ್ನ ವೀಕ್ಷಿಸಲಿದ್ದಾರೆ. ತಮಿಳುನಾಡು, ಚೆನ್ನೈ ದೇವಿ ಶ್ರೀದೇವಿ ಚಿತ್ರಮಂದಿರದಲ್ಲಿ ಆ ಚಿತ್ರವನ್ನು ಮುತ್ತುಲಕ್ಷ್ಮೀ ನೋಡಲಿದ್ದು ಜೊತೆಗೆ ತಮಿಳುನಾಡು-ಕರ್ನಾಟಕದ 5 ಮಂದಿ ವಕಿಲರೂ ಕೂಡ ಆ ಚಿತ್ರವನ್ನು ವೀಕ್ಷಿಸಲಿದ್ದಾರೆ. ಈ ಬೆಳವಣಿಗೆ ಸಿನಿಪ್ರೇಕ್ಷಕರ ತೀವ್ರ ಕುತೂಲಹ ಕೆರಳಿಸಿದೆ.

ಅಟ್ಟಹಾಸ ಚಿತ್ರವು ಈಗಾಗಲೇ ಸೆನ್ಸಾರ್ ನಲ್ಲಿ ಪಾಸಾಗಿದ್ದು ಪ್ರಾದೇಶಿಕ ಸೆನ್ಸಾರ್ ಮಂಡಳಿ ಈ ಚಿತ್ರಕ್ಕಡೆ 'ಯು/ಎ' ಸರ್ಟಿಫಿಕೇಟ್ ನೀಡಿದೆ. ಸಾಕಷ್ಟು ವಾದ ವಿವಾದ,ಚರ್ಚೆಗೆ ಕಾರಣವಾಗಿರುವ ಈ 'ಅಟ್ಟಹಾಸ' ಚಿತ್ರವು ಇದೇ ತಿಂಗಳು 28 ರಂದು (28 ಸೆಪ್ಟೆಂಬರ್ 2012) ಬಿಡುಗಡೆಯಾಗಲಿದೆ. ಅಟ್ಟಹಾಸ ಚಿತ್ರಕ್ಕೆ ಬಹಳಷ್ಟು ವಿಘ್ನಗಳು ಎದುರಾಗಿದ್ದವು.

ನಮ್ಮ ಅನುಮತಿ ಪಡೆಯದೆ ಚಿತ್ರವನ್ನು ಎ.ಎಂ.ಆರ್ ರಮೇಶ್ ತೆರೆಗೆ ತರುತ್ತಿದ್ದಾರೆ ಎಂದು 'ನಕ್ಕೀರನ್' ಪತ್ರಿಕೆಯ ಸಂಪಾದಕ ಆರ್ ಆರ್ ಗೋಪಾಲ್ ಕೋರ್ಟ್ ಮೆಟ್ಟಿಲೇರಿದ್ದರು. ಅದಾದ ಬಳಿಕ ಅಟ್ಟಹಾಸ ಚಿತ್ರ ಕೃತಿಚೌರ್ಯ ಆರೋಪಕ್ಕೂ ಗುರಿಯಾಯಿತು. ತಮ್ಮ 'ವೀರಪ್ಪನ್: ನರಹಂತಕನ ರುದ್ರ ನರ್ತನ' ಎಂಬ ಕೃತಿಯಿಂದ ಕತೆಕದ್ದು ಚಿತ್ರಕಥೆ ಮಾಡಿದ್ದಾರೆ ಎಂದು ಪತ್ರಕರ್ತ ಟಿ.ಗುರುರಾಜ್ ಗಂಭೀರ ಆರೋಪ ಮಾಡಿದ್ದಾರೆ.

ಬಾಲಿವುಡ್ ನಟ ಸುರೇಶ್ ಒಬೆರಾಯ್ ಅವರು ವರನಟ ಡಾ.ರಾಜ್ ಪಾತ್ರವನ್ನು ಪೋಷಿಸಿದ್ದಾರೆ. ಸುಲಕ್ಷಣಾ ಅವರು ಪಾರ್ವತಮ್ಮ ರಾಜ್ ಕುಮಾರ್ ಆಗಿ ಕಾಣಿಸಿಕೊಂಡಿದ್ದಾರೆ. ನರಹಂತಕ ವೀರಪ್ಪನ್ ಪಾತ್ರದಲ್ಲಿ ನಟ ಕಿಶೋರ್ ಅಭಿನಯಿಸಿದ್ದಾರೆ. ಡಾ ರಾಜ್ ಅವರೊಂದಿಗೆ ಅಪಹರಣಕ್ಕೆ ಒಳಗಾಗಿದ್ದ ನಾಗಪ್ಪ ಮರಡಗಿ ಅವರೂ ಚಿತ್ರದಲ್ಲಿ ಅಭಿನಯಿಸಿರುವುದು ವಿಶೇಷ. ಅರ್ಜುನ್ ಸರ್ಜಾ, ಜಯಚಿತ್ರಾ, ವಿಜಯಲಕ್ಷ್ಮಿ, ರವಿಕಾಳೆ ಮುಂತಾದವರು ಈ ಚಿತ್ರದ ಉಳಿದ ತಾರಾಬಳಗದಲ್ಲಿದ್ದಾರೆ.

ಈ ಚಿತ್ರಕ್ಕೆ ಯುವನ್ ಶಂಕರ್ ರಾಜಾ ಅವರ ಸಂಗೀತ ಹಾಗೂ ವಿಜಯ್ ಮಿಲ್ಟನ್ ಅವರ ಛಾಯಾಗ್ರಹಣವಿದೆ. ಮೂರು ದಶಕಗಳ ಕಾಲ ವೀರಪ್ಪನ್ ನಡೆಸಿದ ಅಡವಿ ಜೀವನ, ವರನಟ ದಿವಂಗತ ಡಾ.ರಾಜ್ ಕುಮಾರ್ ಕಿಡ್ನಾಪ್‌ನ ಯಥಾವತ್ ಘಟನೆಗಳ ಆಧಾರವಾಗಿ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ರಾಜ್ ಕಿಡ್ನಾಪ್ ಕುರಿತ ಚಿತ್ರವನ್ನು ಬೆಳ್ಳಿತೆರೆಗೆ ತರುತ್ತಿರುವುದು ಇದೇ ಮೊದಲು. (ಏಜೆನ್ಸೀಸ್) 

English summary
Veerappan Wife Muttulakshmi to Watch the movie Attahasa today, on 28th September 2012 at Devi Sridev theater in Chennai. AMR Ramesh directed this movie to release on 28 September 2012. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada