»   » ಚೆನ್ನೈ ಎಕ್ಸ್ ಪ್ರೆಸ್ ಓವರ್ ಟೇಕ್ ಮಾಡಿದ ಅತ್ತಾರಿಂಟಿಕಿ

ಚೆನ್ನೈ ಎಕ್ಸ್ ಪ್ರೆಸ್ ಓವರ್ ಟೇಕ್ ಮಾಡಿದ ಅತ್ತಾರಿಂಟಿಕಿ

By: ಅನಂತರಾಮು, ಹೈದರಾಬಾದ್
Subscribe to Filmibeat Kannada

ಎಲ್ಲಿಯ ಶಾರುಖ್ ಖಾನ್ ಎಲ್ಲಿಯ ಪವನ್ ಕಲ್ಯಾಣ್. ಒಬ್ಬರದ್ದು ಉತ್ತರ ಇನ್ನೊಬ್ಬರದ್ದು ದಕ್ಷಿಣ. ಬಾಕ್ಸ್ ಆಫೀಸಲ್ಲಿ ಶಾರುಖ್ ಖಾನ್ ರನ್ನು ಹಿಂದಿಕ್ಕಲು ಸಾಧ್ಯವೇ? ಅಸಾಧ್ಯವಾದದ್ದನ್ನು ಸಾಧ್ಯ ಮಾಡಿದ್ದಾರೆ ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್.

ತಮ್ಮ ಲೇಟೆಸ್ಟ್ ಚಿತ್ರ 'ಅತ್ತಾರಿಂಟಿಕಿ ದಾರೇದಿ' ಚಿತ್ರದ ಮೂಲಕ ತಾವೇನು ಎಂಬುದನ್ನು ಪವನ್ ತೋರಿಸಿದ್ದಾರೆ. ಅಮೆರಿಕಾದಲ್ಲೂ ಅತ್ತಾರಿಂಟಿಕಿ ದಾರೇದಿ ಚಿತ್ರ ಗ್ರ್ಯಾಂಡ್ ರಿಲೀಸ್ ಆಗಿದೆ. ಇದುವರೆಗೂ ಯಾವ ತೆಲುಗು ಚಿತ್ರಕ್ಕೂ ಸಿಗದ ಓಪನಿಂಗ್ ಅತ್ತಾರಿಂಟಿಕಿ ಚಿತ್ರಕ್ಕೆ ಸಿಕ್ಕಿದೆ.

Pawan, Shahrukh Khan

ಅತ್ತಾರಿಂಟಿಕಿ ಪ್ರೀಮಿಯರ್ ಶೋ $424359 ವಸೂಲಿ ಮಾಡಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಶಾರುಖ್ ಚೆನ್ನೈ ಎಕ್ಸ್ ಪ್ರೆಸ್ ಚಿತ್ರ ಕೇವಲ $260000 ಗಳಿಸಿತ್ತು. ಅಮೆರಿಕಾದಲ್ಲಿ ಶಾರುಖ್ ಗಿಂತಲೂ ಪವನ್ ಚಿತ್ರಗಳಿಗೇ ಹೆಚ್ಚಿನ ಬೇಡಿಕೆ ಇದೆ ಎಂಬುದು ಸಾಬೀತಾಗಿದೆ.

ಚಿತ್ರ ಬಿಡುಗಡೆಯಾದ ಎರಡು ದಿನಗಳಲ್ಲಿ 4ರಿಂದ 5 ಲಕ್ಷ ಡಾಲರ್ ಗಳಿಸಿದೆ ಪವನ್ ಚಿತ್ರ. ಇನ್ನು ವೀಕೆಂಡ್ ಮುಗಿಯುವಷ್ಟರಲ್ಲಿ 2 ಮಿಲಿಯನ್ ಡಾಲರ್ ಗಳಿಸುವ ಎಲ್ಲಾ ಸೂಚನೆಗಳನ್ನೂ ಚಿತ್ರ ನೀಡಿದೆ.

ಇನ್ನು ಚಿತ್ರ ಭಾರತದಲ್ಲೂ ಹೊಸ ದಾಖಲೆ ಸೃಷ್ಟಿಸಿದೆ. ಮೊದಲ ದಿನದ ಗಳಿಕೆ ರು.10.6 ಕೋಟಿ. ಈ ಹಿಂದೆ ಮೆಗಾ ಪವರ್ ಸ್ಟಾರ್ ಅಭಿನಯದ ನಾಯಕ್ ಚಿತ್ರ ಹೆಚ್ಚು ಕಡಿಮೆ ಇದೇ ಮೊತ್ತವನ್ನು ಗಳಿಸಿತ್ತು. ನಾಯಕ್ ಮೊದಲ ದಿನದ ಗಳಿಕೆ ರು. 9.95 ಇತ್ತು.

ಬಿಡುಗಡೆಗೂ ಮುನ್ನವೇ 'ಅತ್ತಾರಿಂಟಿಕಿ ದಾರೇದಿ' ಚಿತ್ರ ಲೀಕ್ ಆಗಿತ್ತು. ಇನ್ನು ಚಿತ್ರಕ್ಕೆ 'ಏಡುಕೊಂಡಲವಾಡನ ಸಿಂಬಲ್ಲೇ' ಗತಿ ಎಂದುಕೊಂಡಿದ್ದರು. ಆದರೆ ಎಲ್ಲಾ ಊಹಾಪೋಹಗಳನ್ನು ಚಿತ್ರ ಅಳಿಸಿಹಾಕಿದೆ. ಚಿತ್ರಕ್ಕೆ ವಿಮರ್ಶಕರ ಕಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೌಟುಂಬಿಕ ಕಥಾಹಂದರದ ಚಿತ್ರದಲ್ಲಿ ಪವನ್ ಮತ್ತೆ ಗರ್ಜಿಸಿದ್ದಾರೆ.

English summary
The US premiere show collections of Attarintiki Daredi are $424k where as Shah Rukh’s Chennai Express grossed $260K only and this Power star’s stamina at box office. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada