»   » 'ನಟ ಸಾರ್ವಭೌಮ' ಶೀರ್ಷಿಕೆಯನ್ನ ಅಭಿಮಾನಿಗಳು ಒಪ್ಪಿಕೊಂಡ್ರಾ, ಇಲ್ವಾ.!

'ನಟ ಸಾರ್ವಭೌಮ' ಶೀರ್ಷಿಕೆಯನ್ನ ಅಭಿಮಾನಿಗಳು ಒಪ್ಪಿಕೊಂಡ್ರಾ, ಇಲ್ವಾ.!

Posted By:
Subscribe to Filmibeat Kannada
'ನಟ ಸಾರ್ವಭೌಮ' ಶೀರ್ಷಿಕೆಯನ್ನ ಅಭಿಮಾನಿಗಳು ಒಪ್ಪಿಕೊಂಡ್ರಾ ? | Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸಲಿರುವ ಹೊಸ ಸಿನಿಮಾದ ಹೆಸರು 'ನಟಸಾರ್ವಭೌಮ'. ಈ ಟೈಟಲ್ ಕೇಳುತ್ತಿದ್ದಂತೆ ಡಾ ರಾಜ್ ಕುಮಾರ್ ಪರಮ ಭಕ್ತರು ಫುಲ್ ಖುಷಿಯಾಗಿದ್ದಾರೆ. ರಾಜ್ ಕುಮಾರ್ ಅವರು ಮಗ ಈ ಸಿನಿಮಾ ಮಾಡ್ತಿರೋದಕ್ಕೆ ಸಂತಸಗೊಂಡಿದ್ದಾರೆ.

ಆದ್ರೆ, ಕೆಲವೊಬ್ಬರು ಈ ಟೈಟಲ್ ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಯಾಕಂದ್ರೆ, ಈ ಟೈಟಲ್ ಕೇವಲ ಡಾ ರಾಜ್ ಕುಮಾರ್ ಅವರಿಗೆ ಮಾತ್ರ ಸೂಕ್ತವಾದದು. ಈ ಟೈಟಲ್ ನ ಮತ್ತೆ ಬಳಸುವುದು ಅಷ್ಟೊಂದು ಸಮಂಜಸವಾಗಿಲ್ಲ ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ.

ನಟ ಸಾರ್ವಭೌಮನಾದ ರಾಜರತ್ನ

ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ನಟಸಾರ್ವಭೌಮ ಚಿತ್ರದ ಟೈಟಲ್ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಶೇಕಡಾ 90 ರಷ್ಟು ಜನ ಟೈಟಲ್ ಗೆ ಅಸ್ತು ಎಂದಿದ್ದರು ಇನ್ನುಳಿದವರು ಬೇಕಾಗಿರಲಿಲ್ಲ ಎನ್ನುತ್ತಿದ್ದಾರೆ. ಹಾಗಿದ್ರೆ, ನಟ ಸಾರ್ವಭೌಮನ ಟೈಟಲ್ ಬಗ್ಗೆ ಬಂದಿರುವ ಕಾಮೆಂಟ್ ಗಳನ್ನ ನೋಡೋಣ ಬನ್ನಿ. ಮುಂದೆ ಓದಿ....

ಇಂತಹ ಟೈಟಲ್ ಸಿಗೋಕೆ ಯೋಗ್ಯತೆ ಇರಬೇಕು

''ನಟ ಸಾರ್ವಭೌಮ ಎಂಬ ಟೈಟಲ್ ಸಿಗೋಕೆ ಯೋಗ್ಯತೆ ಇರಬೇಕು'' ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ''ಅಪ್ಪು ಅವರಿಂದ ಮಾತ್ರವಲ್ಲದೇ ಬೇರೆ ಯಾರಿಂದಲೂ ಸಾಧ್ಯವಿಲ್ಲ'' ಎಂದು ಚಿತ್ರಕ್ಕೆ ವಿಶ್ ಮಾಡಿದ್ದಾರೆ. ಸದ್ಯ, ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಪುನೀತ್ ಗೆ ಅಪ್ಪು ಫ್ಯಾನ್ಸ್ ಶುಭಾಶಯ ಕೋರುತ್ತಿದ್ದಾರೆ.

ಪುನೀತ್ ಮೇಲೆ ಜವಾಬ್ದಾರಿ ಹೆಚ್ಚಿದೆ

''ನಟ ಸಾರ್ವಭೌಮ ಎಂಬ ಟೈಟಲ್ ಇಟ್ಟಮೇಲೆ ಅದರ ಮೌಲ್ಯ ದೊಡ್ಡದಿದೆ. ಇದರಿಂದ ಪುನೀತ್ ರಾಜ್ ಕುಮಾರ್ ಅವರ ಮೇಲೆ ಜವಾಬ್ದಾರಿ ಕೂಡ ಹೆಚ್ಚಿದೆ'' ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ''ಮುಂದಿನ ಪೋಸ್ಟರ್ ಗಳಲ್ಲಿ ಚಿತ್ರದ ಟೈಟಲ್ ಮೇಲೆ ಇರಲಿ. ಕಾಲು ಕೆಳಗೆ ಇರುವುದು ಬೇಡ. ಯಾಕಂದ್ರೆ, ಡಾ ರಾಜ್ ಕುಮಾರ್ ನಮ್ಮ ಯಜಮಾನ್ರು'' ಎಂದು ಕಾಮೆಂಟ್ ಮಾಡಿದ್ದಾರೆ.

'ಪಿ ಆರ್ ಕೆ' ಪ್ರೊಡಕ್ಷನ್ಸ್ ನಲ್ಲಿ ಹೊಸಬರ ಸಿನಿಮಾಗಳು

ತುಂಬಾ ಜಾಗೃತರಾಗಿ ಕೆಲಸ ಮಾಡಿ

''ಟೈಟಲ್ ಹೇಳ್ತಿದೆ ನಟ ಸಾರ್ವಭೌಮ ಅಂತ. ಇಷ್ಟೊಂದು ದೊಡ್ಡ ಟೈಟಲ್ ಇಟ್ಟಮೇಲೆ ತುಂಬಾ ಜಾಗೃತರಾಗಿ ಕೆಲಸ ಮಾಡಬೇಕಾಗಿದೆ. ಸ್ಕ್ರಿಪ್ಟ್ ಬಗ್ಗೆ ಗಮನ ಹರಿಸಿ. ಮತ್ತೊಂದು ಇಂಡಸ್ಟ್ರಿ ಹಿಟ್ ಸಿನಿಮಾ ಇದಾಗಲಿ'' ಎಂದು ರಾಜ್ ವಂಶದ ಅಭಿಮಾನಿ ಶುಭಕೋರಿದ್ದಾರೆ.

ಅಪ್ಪು 'ಹೇರ್ ಸ್ಟೈಲ್' ವಿರೋಧಿಸಿದವರಿಗೆ ತಿರುಗೇಟು ನೀಡಿದ ಫ್ಯಾನ್ಸ್

ಈ ಟೈಟಲ್ ಮಿಸ್ ಮಾಡ್ಕೋಬೇಡಿ

''ಅಪ್ಪು ಸರ್ ಈ ಟೈಟಲ್ ಮಿಸ್ ಮಾಡ್ಕೋಬೇಡಿ. ಯಾಕಂದ್ರೆ, ಇಂತಹ ಅಪರೂಪದ ಟೈಟಲ್ ಸಿಗೋದು ಕಮ್ಮಿ. ಟೈಟಲ್ ಸೂಪರ್ ಆಗಿದೆ. ಪೋಸ್ಟರ್ ಕೂಡ ಅದ್ಭುತವಾಗಿದೆ. ಈ ಟೈಟಲ್ ಹಾಗೂ ಪೋಸ್ಟರ್ ಬಗ್ಗೆ ಹೇಳಲು ಮಾತುಗಳು ಬರುತ್ತಿಲ್ಲ. ಅಷ್ಟು ಖುಷಿಯಾಗಿದೆ'' ಎಂದು ಅಭಿಮಾನಿಯೊಬ್ಬರು ಸಂತೋಷ ವ್ಯಕ್ತಪಡಿಸಿದ್ದಾರೆ.

ಪವನ್ ಒಡೆಯರ್ ಅವರಿಗೆ ವಿನಂತಿ

ಈ ಚಿತ್ರದ ಟೈಟಲ್ ಘೋಷಣೆ ಆದ್ಮೇಲೆ ಕೇವಲ ಪುನೀತ್ ರಾಜ್ ಕುಮಾರ್ ಅವರ ಮೇಲೆ ಮಾತ್ರವಲ್ಲ, ನಿರ್ದೇಶಕರ ಮೇಲೆ ಜವಾಬ್ದಾರಿ ಹೆಚ್ಚಿದೆ. ನಿರ್ದೇಶಕರಲ್ಲಿ ನನ್ನೊಂದು ಮನವಿ. ದಯವಿಟ್ಟು ಇಂತಹ ಟೈಟಲ್ ಇಟ್ಟಿದ್ದೀರಿ. ಚಿತ್ರಕತೆ ಅತ್ಯುತ್ತಮವಾಗಿರಬೇಕು. ಚಿತ್ರ ಚೆನ್ನಾಗಿ ಮೂಡಿಬರಬೇಕು. ಎಲ್ಲಿಯೂ ಬೋರ್ ಹೊಡಿಯಬಾರದು. ಯಾಕಂದ್ರೆ, ಚಿತ್ರದ ಹೆಸರಿನಲ್ಲಿ ಗಟ್ಟಿತನ ಇದೆ. ಹಾಗಾಗಿ, ಚಿತ್ರದಲ್ಲೂ ಯಾವುದು ಕಮ್ಮಿಯಾಗಬಾರದು'' ಎಂದು ಕೋರಿ ಕೊಂಡಿದ್ದಾರೆ.

ಈ ಟೈಟಲ್ ಬೇಡ

ಸರ್ ದಯವಿಟ್ಟು ಈ ಟೈಟಲ್ ಬೇಡ. ಯಾಕಂದ್ರೆ, ನಟಸಾರ್ವಭೌಮ ಅಂದ್ರೆ ಒನ್ ಅಂಡ್ ಒನ್ಲಿ ಡಾ ರಾಜ್ ಕುಮಾರ್ ಮಾತ್ರ. ನಾವು ಅಪ್ಪು ಅಭಿಮಾನಿ. ಆದ್ರೆ, ಅಣ್ಣಾವ್ರ ಅಭಿನಯಕ್ಕೆ ಅವರನ್ನ ಹಾಗೆ ಕರೆಯುವುದು. ಪುನೀತ್ ಅವರು ಆ ಮಟ್ಟಕ್ಕೆ ಇನ್ನು ಬಂದಿಲ್ಲ. ಈ ಟೈಟಲ್ ಬೇಡ'' ಎಂದು ವಿರೋಧಿಸುವವರು ಕೂಡ ಇದ್ದಾರೆ.

English summary
Audience reaction on power star puneeth rajkumar's upcoming movie Nata sarvabhouma first poster. the movie directed by pawan wadeyar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X