»   » 'ಶಿವಲಿಂಗ' ಪ್ರೇಕ್ಷಕರಿಗೆ ಸಖತ್ ಥ್ರಿಲ್ ಕೊಡೋ ಸಿನಿಮಾವಂತೆ

'ಶಿವಲಿಂಗ' ಪ್ರೇಕ್ಷಕರಿಗೆ ಸಖತ್ ಥ್ರಿಲ್ ಕೊಡೋ ಸಿನಿಮಾವಂತೆ

Posted By:
Subscribe to Filmibeat Kannada

'ಆಪ್ತಮಿತ್ರ', 'ಆಪ್ತರಕ್ಷಕ' ಸಿನಿಮಾ ಖ್ಯಾತಿಯ ನಿರ್ದೇಶಕ ಪಿ.ವಾಸು ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜುಗಲ್ ಬಂದಿಯಲ್ಲಿ ಮೂಡಿಬರುತ್ತಿರುವ 'ಶಿವಲಿಂಗ' ಪ್ರೇಕ್ಷಕರಿಗೆ ಸಖತ್ ಥ್ರಿಲ್ಲ್ ಕೋಡೋ ಸಿನಿಮಾವಂತೆ.

ಇದೇ ಶುಕ್ರವಾರ (ಫೆಬ್ರವರಿ 12) ಬಿಡುಗಡೆ ಆಗುತ್ತಿರುವ ಪಕ್ಕಾ ಫ್ಯಾಮಿಲಿ ಎಂರ್ಟಟೈನರ್ 'ಶಿವಲಿಂಗ' ಸಿನಿಮಾದಲ್ಲಿ ನಟಿ ವೇದಿಕಾ ಮತ್ತು ಶಿವರಾಜ್ ಕುಮಾರ್ ಅವರು ಮುಖ್ಯ ಭೂಮಿಕೆಯಲ್ಲಿ ಮಿಂಚುತ್ತಿದ್ದಾರೆ. ಕರ್ನಾಟಕದಾದ್ಯಂತ ಸುಮಾರು 250 ಚಿತ್ರಮಂದಿರಗಳಲ್ಲಿ ಈ ಸಿನಿಮಾ ಭರ್ಜರಿಯಾಗಿ ತೆರೆ ಕಾಣಲಿದೆ.[ರಿಲೀಸ್ ಗೂ ಮುನ್ನವೇ ಶಿವಣ್ಣ ಚಿತ್ರದ ಡಬ್ಬಿಂಗ್ ರೈಟ್ಸ್ ಸೇಲ್]


Audiences To Get Thrilled After Watching 'Shivalinga'

'ಶಿವಲಿಂಗ' ಸಿನಿಮಾದಲ್ಲಿ ಶಿವಣ್ಣ ಅವರು ಸಿ.ಬಿ.ಐ ಪಾತ್ರದಲ್ಲಿ ಮಿಂಚುತ್ತಿದ್ದು, ಮನು ಎಂಬ ಹೆಸರಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಲೂ 25ರ ಹರೆಯದ ಯುವಕರ ಸ್ಪಿರೀಟ್ ನಲ್ಲಿ ನಟಿಸಿರುವ ಶಿವಣ್ಣ ಅವರು 'ಶಿವಲಿಂಗ' ಸಿನಿಮಾದಲ್ಲಿ ತುಂಬಾ ಎನರ್ಜಿಟಿಕ್ ಆಗಿ ಕಾಣಿಸಿಕೊಂಡಿದ್ದಾರೆ ಎಂದು ನಿರ್ದೇಶಕ ವಾಸು ಅವರು ತಿಳಿಸಿದ್ದಾರೆ.


ಶಿವರಾಜ್ ಕುಮಾರ್ ಅವರ ಮೊದಲನೇ ಸಿನಿಮಾ 'ಆನಂದ್' ನಲ್ಲಿದ್ದ ಅದೇ ಎನರ್ಜಿ, ಅದೇ ಸ್ಪಿರಿಟ್ 'ಶಿವಲಿಂಗ' ಸಿನಿಮಾದಲ್ಲೂ ವ್ಯಕ್ತವಾಗಿದೆ. ಶಿವಣ್ಣ ಅವರ ಜೊತೆ ಕೆಲಸ ಮಾಡಬೇಕೆಂದಿದ್ದ ನನ್ನ 30 ವರ್ಷಗಳ ಕನಸು ಇದೀಗ ನನಸಾಗಿದೆ. ಎಂದು ನಿರ್ದೇಶಕರು ತಿಳಿಸಿದ್ದಾರೆ.['ಮಾಸ್ಟರ್ ಪೀಸ್' 50 ದಿನ ಆದ ಕೂಡಲೇ 'ಶಿವಲಿಂಗ' ಪ್ರತಿಷ್ಠಾಪನೆ]


Audiences To Get Thrilled After Watching 'Shivalinga'

ವರ್ಮಾ ಅವರ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ನಂತರ ಪಿ.ವಾಸು ಅವರ ಹಾರರ್ ಕಮ್ ಫ್ಯಾಮಿಲಿ ಎಂರ್ಟಟೈನರ್ ಮಿಶ್ರವಾಗಿರುವ 'ಶಿವಲಿಂಗ' ಸಿನಿಮಾ ಶಿವಣ್ಣ ಅವರಿಗೆ ಮತ್ತೊಂದು ಬ್ರೇಕ್ ಕೊಡುವಲ್ಲಿ ಯಶಸ್ವಿಯಾಗಬಹುದೇ ಅನ್ನೋದನ್ನ ಕಾದು ನೋಡಬೇಕಿದೆ.

English summary
Director P Vasu has shared few eye-raising facts about the movie. 'Shivalinga' is a complete family entertainer and audiences will be thrilled after watching the movie". Kannada Actor Shiva Rajkumar, Actress Vedika in the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada