»   » 'ಜಗ್ಗುದಾದಾ'ದಲ್ಲಿ ದರ್ಶನ್ ರ ಗೆಳೆಯನ ಪಾತ್ರ ಮಾಡುತ್ತಿರುವವರು ಇವರೇ

'ಜಗ್ಗುದಾದಾ'ದಲ್ಲಿ ದರ್ಶನ್ ರ ಗೆಳೆಯನ ಪಾತ್ರ ಮಾಡುತ್ತಿರುವವರು ಇವರೇ

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ 'ಜಗ್ಗುದಾದಾ' ಚಿತ್ರದಲ್ಲಿ ದರ್ಶನ್ ಅವರ ಗೆಳೆಯನ ಪಾತ್ರದಲ್ಲಿ 27 ವರ್ಷ ವಯಸ್ಸಿನ ಬೆಂಗಳೂರಿನ ಆಟೋ ಚಾಲಕ ಯುವ ಎಂಬುವವರು ಕಾಣಿಸಿಕೊಂಡಿದ್ದಾರೆ.

ಅಂದಹಾಗೆ ಯುವ ಎನ್ನುವ ಆಟೋ ಚಾಲಕ ಈ ಹಿಂದೆ 'ವರದನಾಯಕ', 'ದೃಶ್ಯ', 'ಶಿವಾಜಿನಗರ', 'ವೀರ' ಮತ್ತು ದರ್ಶನ್ ಅವರ 'Mr ಐರಾವತ' ಚಿತ್ರದಲ್ಲಿ ಹೀಗೆ ಬಂದು ಹಾಗೆ ಹೋಗುವ ಪಾತ್ರದಲ್ಲಿ ಮಿಂಚಿದ್ದು, ಇದೀಗ ದರ್ಶನ್ ಅವರ ಜೊತೆ 'ಜಗ್ಗುದಾದಾ' ಚಿತ್ರದಲ್ಲಿ ಇಡೀ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.[ದರ್ಶನ್ ಅಭಿನಯದ 'ಜಗ್ಗುದಾದಾ' ಆಡಿಯೋ ವಿಮರ್ಶೆ]


Auto driver Yuva plays Actor Darshan's friend role in 'Jaggu Dada' movie

'ಐರಾವತ' ಸಿನಿಮಾ ಸೆಟ್ ನಲ್ಲಿ ಹಲವಾರು ಯುವ ನಟರ ಜೊತೆಗೆ ತಾನೂ ಒಬ್ಬನಾಗಿದ್ದೆ. ದರ್ಶನ್ ಅಣ್ಣ ನನ್ನನ್ನು ಕರೆದು 'ಜಗ್ಗುದಾದಾ' ಸಿನಿಮಾದಲ್ಲಿ ಪಾತ್ರ ನೀಡುತ್ತೇನೆ ನಟಿಸಲು ಆಸಕ್ತಿ ಇದೆಯಾ ಎಂದು ಕೇಳಿದಾಗ ಸಂತಸದಿಂದ ಒಪ್ಪಿಕೊಂಡೆ' ಎನ್ನುತ್ತಾರೆ ಯುವ ಅವರು.[ಒಂದೇ ದಿನದಲ್ಲಿ 3 ಬಿರುದು ದಕ್ಕಿಸಿಕೊಂಡ ಚಾಲೆಂಜಿಂಗ್ ಸ್ಟಾರ್]


Auto driver Yuva plays Actor Darshan's friend role in 'Jaggu Dada' movie

ಕಾರವಾರ ಮೂಲದ ಯುವ ಅವರು ತಮ್ಮ 14ನೇ ವಯಸ್ಸಿನಲ್ಲಿ ಬೆಂಗಳೂರಿಗೆ ವಲಸೆ ಬಂದು ತಮ್ಮ ಕಾಲ ಮೇಲೆ ನಿಲ್ಲಬೇಕೆಂಬ ಹಂಬಲದಿಂದ ಆಟೋ ಚಾಲಕರಾಗಿ ದುಡಿಯಲಾರಂಭಿಸಿದರು. ಯುವ ಅವರ ತಂದೆ ಮನಶಾಸ್ತ್ರದಲ್ಲಿ ಪದವೀಧರರಾಗಿದ್ದು, ಇವರು ಹಾಗೂ ಇವರ ಸಹೋದರ ಓದಲಿಲ್ಲವಂತೆ.['ಜಗ್ಗುದಾದಾ' ಚಿತ್ರಕ್ಕೆ ಹೀರೋ ಯಾರು ದರ್ಶನ್/ಸೃಜನ್ ಲೋಕೇಶ್?]


Auto driver Yuva plays Actor Darshan's friend role in 'Jaggu Dada' movie

ಊರಿನಲ್ಲಿ ತುಂಬಾ ಅನುಕೂಲ ಇದ್ದರೂ ಕೂಡ ಅಪ್ಪನಿಗೆ ಅವಲಂಬಿತರಾಗಲು ಇಷ್ಟಪಡದ ಯುವ ಅವರು ಮೊದಲಿಗೆ ಬೆಂಗಳೂರಿನಲ್ಲಿ ಕ್ಲೀನರ್ ಆಗಿ ಕೆಲಸಕ್ಕೆ ಸೇರಿಕೊಂಡು ನಂತರ ಸೇಲ್ಸ್ ಕೆಲಸಗಾರನಾಗಿ ಕೆಲಸ ಮಾಡಿ ಇದೀಗ ಆಟೋ ಓಡಿಸುತ್ತಿದ್ದಾರೆ.


ಚಿಕ್ಕಂದಿನಿಂದಲೇ ಹೆಚ್ಚಾಗಿ ಹಿಂದಿ ಸಿನಿಮಾಗಳನ್ನು ನೋಡುತ್ತಿದ್ದ ಯುವ ಅವರು ಮೊಟ್ಟ ಮೊದಲ ಬಾರಿಗೆ ದರ್ಶನ್ ಅವರ 'ಮೆಜೆಸ್ಟಿಕ್' ಸಿನಿಮಾ ನೋಡಿದ ನಂತರ ಕನ್ನಡ ಸಿನಿಮಾ ನೋಡಲು ಶುರು ಮಾಡಿದರು.


Auto driver Yuva plays Actor Darshan's friend role in 'Jaggu Dada' movie

ಸದ್ಯಕ್ಕೆ ಬೆಳಗಿನ ಸಮಯ ಆಟೋ ಓಡಿಸುವ ಯುವ ಅವರು ಸಂಜೆಯ ವೇಳೆಯಲ್ಲಿ ನೃತ್ಯ ಕಲಿಯುತ್ತಾರೆ. ಮಾತ್ರವಲ್ಲದೇ ರಾಗಿಣಿ ದ್ವಿವೇದಿ ಅವರ 'ರಣಚಂಡಿ' ಚಿತ್ರದಲ್ಲೂ ಕೂಡ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

English summary
A 27 year old auto rickshaw driver based in the city has managed to bag the role of the Kannada Actor Darshan's friend in the Kannada movie 'Jaggu Dada'. The movie is directed by Raghavendra Hegde.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada