For Quick Alerts
  ALLOW NOTIFICATIONS  
  For Daily Alerts

  ಗೋಲ್ಡನ್ ಸ್ಟಾರ್ ಗಣೇಶನ ಆಟೋರಾಜ ಕದ್ದ ಮಾಲಂತೆ

  |

  ಇತ್ತೀಚೆಗೆ ಬಿಡುಗಡೆಯಾದ ಗೋಲ್ಡನ್ ಸ್ಟಾರ್ ಗಣೇಶ್ ಮುಖ್ಯ ಭೂಮಿಕೆಯಲ್ಲಿರುವ 'ಆಟೋರಾಜ' ಚಿತ್ರದ ಕಥೆ ಕದ್ದಮಾಲು ಎನ್ನುವ ದೂರು ಫಿಲಂ ಚೇಂಬರಿನಲ್ಲಿ ದಾಖಲಾಗಿದೆ.

  ಆಟೋ ಚಾಲಕ ಮತ್ತು ಪಾರ್ಟ್ ಟೈಂ ರೇಡಿಯೋ ಜಾಕಿಯಾಗಿರುವ ಶಿವಕುಮಾರ್ ಎನ್ನುವವರು ಚಲನಚಿತ್ರ ಮಂಡಳಿಯಲ್ಲಿ ಈ ಸಂಬಂಧ ಲಿಖಿತ ದೂರು ನೀಡಿದ್ದಾರೆ.

  ಸುಮಾರು ಇಪ್ಪತ್ತು ವರ್ಷದಿಂದ ಆಟೋಚಾಲಕರಾಗಿರುವ ಶಿವಕುಮಾರ್, 2010ರಿಂದ FM station ನಲ್ಲೂ ಜಾಕಿಯಾಗಿ ಕೂಡಾ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ತನ್ನ ಸಾಮಾಜಿಕ ಕಳಕಳಿಯ ಕೆಲಸಗಳಿಂದ ಹಲವು ದಿನಪತ್ರಿಕೆಗಳು ಇವರ ಬಗ್ಗೆ ಲೇಖನಗಳನ್ನು ಬರೆದಿದ್ದವು.

  ಕವಿ ಕೂಡಾ ಆಗಿರುವ ಶಿವಕುಮಾರ್ ತನ್ನ ಪ್ರಾಮಾಣಿಕ ಕೆಲಸಗಳಿಂದ ಸುಮಾರು ಐದು ಬಾರಿ ಪೋಲೀಸ್ ಇಲಾಖೆಯಿಂದ ಪ್ರಶಂಸನಾ ಪತ್ರ ಕೂಡಾ ಪಡೆದಿದ್ದರು.

  ತನ್ನ ಜೀವನದ ಬಗ್ಗೆ ಸ್ಕ್ರಿಪ್ಟ್ ಬರೆದಿದ್ದು ಸೂಕ್ತ ನಿರ್ಮಾಪಕರನ್ನು ಹುಡುಕುತ್ತಿದ್ದೆ. ನನ್ನ ಕೆಲವು ಗೆಳೆಯರಿಗೆ ಸ್ಕ್ರಿಪ್ಟ್ ಅನ್ನು ವಿವರಿಸಿದ್ದೆ. ಇವರಲ್ಲಿ ಯಾರೋ ಒಬ್ಬರು ಆಟೋರಾಜ ಚಿತ್ರದ ನಿರ್ದೇಶಕರಾದ ಉದಯ್ ಪ್ರಕಾಶ್ ಅವರಿಗೆ ಕಥೆಯನ್ನು ಬಹಿರಂಗ ಪಡಿಸಿದ್ದಾರೆ.

  ಹಾಗಾಗಿ ಬೇರೆ ವಿಧಿಯಿಲ್ಲದೆ ಚಲನಚಿತ್ರ ಮಂಡಳಿಗೆ ದೂರು ನೀಡಿದ್ದೇನೆ ಎಂದು ಶಿವಕುಮಾರ್ ತನ್ನ ಅಳಲು ವ್ಯಕ್ತ ಪಡಿಸಿದ್ದಾರೆ. ಚಲನಚಿತ್ರ ಮಂಡಳಿ ಈ ಸಂಬಂಧ ಆಟೋರಾಜ ಚಿತ್ರದ ನಿರ್ದೇಶಕ ಉದಯ್ ಪ್ರಕಾಶ್ ಅವರ ಬಳಿ ವಿವರಣೆ ಕೇಳುವ ಸಾಧ್ಯತೆಯಿದೆ.

  ಆಟೋರಾಜ ಚಿತ್ರವಿಮರ್ಶೆಆಟೋರಾಜ ಚಿತ್ರವಿಮರ್ಶೆ

  English summary
  Shivakumar, an auto-driver and part-time radio jockey has complained to the Karnataka Film Chamber of Commerce that recently released Ganesh starer Auto Raja film is a copy of my life story.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X