Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಈ ವಿಚಾರದಲ್ಲಿ ರಿಲೀಸ್‌ಗೂ ಮೊದ್ಲೆ 'KGF- 2' ದಾಖಲೆ ಮುರಿದ 'ಅವತಾರ್- 2'
ಸಿನಿಜಗತ್ತಿನಲ್ಲಿ 'ಅವತಾರ್- 2' ಫೀವರ್ ಶುರುವಾಗಿದೆ. ಹಾಲಿವುಡ್ ಮಾತ್ರವಲ್ಲ ಭಾರತದಲ್ಲೂ ಸಿನಿಮಾ ಕ್ರೇಜ್ ಮುಗಿಲುಮುಟ್ಟಿದೆ. ಸಿನಿರಸಿಕರು ಜೇಮ್ಸ್ ಕ್ಯಾಮರೂನ್ ಹೊಸ ದೃಶ್ಯಕಾವ್ಯ ನೋಡಲು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ಕೆಲವೇ ಗಂಟೆಗಳಲ್ಲಿ 'ಅವತಾರ್: ದಿ ವೇ ಆಫ್ ವಾಟರ್' ಸಿನಿಮಾ ತೆರೆಗಪ್ಪಳಿಸುತ್ತಿದೆ. ಈಗಾಗಲೇ ಚಿತ್ರದ ಟ್ರೈಲರ್‌ಗಳು ರಿಲೀಸ್ ಆಗಿ ಕುತೂಹಲ ಕೆರಳಿಸಿದೆ. ಈ ಬಾರಿ ನೀರಿನ ಆಳದಲ್ಲಿ ಹೊಸ ಪ್ರಪಂಚ ಅನಾವರಣ ಆಗಲಿದೆ. ಭಾರತದಲ್ಲೂ ಸಿನಿಮಾ ಬಹಳ ದೊಡ್ಡಮಟ್ಟದಲ್ಲಿ ರಿಲೀಸ್ ಆಗ್ತಿದೆ. ದೇಶಾದ್ಯಂತ 4 ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳ ಮೇಲೆ ಸಿನಿಮಾ ಅಪ್ಪಳಿಸಲಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಕೂಡ ಜೋರಾಗಿದ್ದು, 'KGF- 2' ದಾಖಲೆಯೊಂದು ಅಳಿಸಿ ಹೋಗಿದೆ.
ರಿಲೀಸ್‌ಗೂ
ಮೊದ್ಲೆ
ದೇಶದಲ್ಲಿ
'ಅವತಾರ್'-
2
ಕಲೆಕ್ಷನ್
12
ಕೋಟಿ:
ಎಷ್ಟು
ಸ್ಕ್ರೀನ್ಸ್,
ಕಾಲಾವಧಿ
ಎಷ್ಟು?
ಭಾರತೀಯ ಚಿತ್ರರಂಗದಲ್ಲಿ ಕನ್ನಡ 'KGF- 2' ಸಿನಿಮಾ ಸಾಕಷ್ಟು ಹೊಸ ದಾಖಲೆಗಳನ್ನು ಸೃಷ್ಟಿ ಮಾಡಿತ್ತು. 1250 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಅಡ್ವಾನ್ಸ್ ಬುಕ್ಕಿಂಗ್ ವಿಚಾರದಲ್ಲಿ ಈಗ 'KGF- 2' ಮೀರಿಸಿ 'ಅವತಾರ್: ದಿ ವೇ ಆಫ್ ವಾಟರ್' ಸಿನಿಮಾ ಮೊದಲ ಸ್ಥಾನಕ್ಕೇರಿದೆ.

ರಿಲೀಸ್‌ಗೂ ಮೊದ್ಲೆ 12 ಕೋಟಿ ಗಳಿಕೆ
'ಅವತಾರ್: ದಿ ವೇ ಆಫ್ ವಾಟರ್' ಚಿತ್ರದಲ್ಲಿ ಭರ್ಜರಿ ಓಪನಿಂಗ್ ಸಿಗುವ ನಿರೀಕ್ಷೆ ಮೂಡಿದೆ. ಈಗಾಗಲೇ ಫಸ್ಟ್ ವೀಕೆಂಡ್ ಅಡ್ವಾನ್ಸ್ ಬುಕ್ಕಿಂಗ್‌ನಲ್ಲೇ ಸಿನಿಮಾ 12 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. 2009ರಲ್ಲಿ ಸೂಪರ್ ಹಿಟ್ ಆಗಿದ್ದ 'ಅವತಾರ್' ಸೀಕ್ವೆಲ್ ನೋಡೋಕೆ ಸಿನಿರಸಿಕರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿರುವುದು ಗೊತ್ತಾಗುತ್ತಿದೆ. ಇನ್ನು ವರ್ಷಾಂತ್ಯಕ್ಕೆ ಸಿನಿಮಾ ಬರುತ್ತಿರುವುದರಿಂದ ಭಾರೀ ಕಲೆಕ್ಷನ್ ನಿರೀಕ್ಷಿಸಲಾಗುತ್ತಿದೆ.

'KGF - 2' ದಾಖಲೆ ಉಡೀಸ್
ಫಸ್ಟ್ ವೀಕೆಂಡ್‌ನಲ್ಲಿ 'ಅವತಾರ್- 2' ಸಿನಿಮಾ ನೋಡೋಕೆ ಈಗಾಗಲೇ 4,41,960 ಜನ ಟಿಕೆಟ್ ಬುಕ್ ಮಾಡಿಕೊಂಡಿದ್ದಾರೆ. ಈ ಹಿಂದೆ ಈ ದಾಖಲೆ ಯಶ್ ನಟನೆಯ 'KGF - 2' ಹೆಸರಿನಲ್ಲಿತ್ತು. 'KGF' ಸೀಕ್ವೆಲ್ ನೋಡೊಕೆ 4,11,000 ಜನ ಟಿಕೆಟ್ ಬುಕ್ ಮಾಡಿಕೊಂಡಿದ್ದು ದಾಖಲೆಯಾಗಿತ್ತು. ಆ ಮೂಲಕ ಮಲ್ಟಿಫ್ಲೆಕ್ಸ್‌ಗಳಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ವಿಚಾರದಲ್ಲಿ 'ಅವತಾರ್- 2' ಬ್ಲಾಕ್‌ಬಸ್ಟರ್ 'KGF - 2'ನ ಹಿಂದಿಕ್ಕಿದೆ. ಹಾಲಿವುಡ್ ಚಿತ್ರವೊಂದಕ್ಕೆ ಭಾರತದಲ್ಲಿ ಈಮಟ್ಟಿಗೆ ಕ್ರೇಜ್ ಇರುವುದು ವಿಶೇಷ. 2D, 3D, ಐಮ್ಯಾಕ್ಸ್ ಫಾರ್ಮೆಟ್‌ಗಳಲ್ಲಿ ಸಿನಿಮಾ ತೆರೆಗಪ್ಪಳಿಸುತ್ತಿದೆ.

ಜೇಮ್ಸ್ ಕ್ಯಾಮರೂನ್ ಕೈಚಳಕ
'ಅವತಾರ್' ಪ್ರೀಕ್ವೆಲ್‌ನಲ್ಲಿ ವಿಭಿನ್ನ ಪ್ರಪಂಚವನ್ನು ವಿಚಿತ್ರ ಜೀವಿಗಳನ್ನು ತೋರಿಸಿದ್ದ ಜೇಮ್ಸ್ ಕ್ಯಾಮರೂನ್, ಅದಕ್ಕಿಂತ ಭಿನ್ನವಾದ ಜೀವಿಗಳನ್ನು ಇಲ್ಲಿ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಡೈನೋಸಾರ್ ಮಾದರಿಯ ಜೀವಿಗಳು ಇಲ್ಲಿವೆ. ಈ ಬಾರಿ ಸಮುದ್ರದ ಆಳದಲ್ಲಿ ಬಹುತೇಕ ಸನ್ನಿವೇಶಗಳನ್ನು ಕಟ್ಟಿಕೊಟ್ಟಿದ್ದಾರೆ. ಕಥೆಯಲ್ಲಿ ಜೇಕ್ ಹಾಗೂ ನೈತಿರಿಗೆ ಮಕ್ಕಳಾಗಿದೆ. ಎಲ್ಲವೂ ಚೆನ್ನಾಗಿದೆ ಎನ್ನುಕೊಳ್ಳುವ ಸಮಯದಲ್ಲಿ ಮತ್ತೆ ಸಂಕಷ್ಟ ಎದುರಾಗಿದೆ. ಮುಂದೇನಾಗುತ್ತೆ ಎನ್ನುವುದನ್ನು ತೆರೆಮೇಲೆ ನೋಡಬೇಕು.

'ಅವತಾರ್- 3' ರಿಲೀಸ್ ಡೇಟ್ ಫಿಕ್ಸ್
ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಬಹಳ ಹಿಂದೆಯೇ 'ಅವತಾರ್' ಸರಣಿಯ 2, 3, 4, 5 ಸಿನಿಮಾಗಳನ್ನು ಮಾಡುವುದಾಗಿ ಹೇಳಿದ್ದರು. ಪಾರ್ಟ್ -2 ಸಕ್ಸಸ್ ಕಂಡರೆ ಮಾತ್ರ 4 ಮತ್ತು 5ನೇ ಸಿನಿಮಾ ಇರುತ್ತೆ ಎಂದು ಇತ್ತೀಚೆಗೆ ಹೇಳಿ ಶಾಕ್ ಕೊಟ್ಟಿದ್ದರು. ಇದೀಗ 'ಅವತಾರ್: ದಿ ವೇ ಆಫ್ ವಾಟರ್' ರಿಲೀಸ್‌ಗೆ ಕ್ಷಣಗಣನೆ ಶುರುವಾಗಿದೆ. ಸರಣಿಯ 3ನೇ ಸಿನಿಮಾ ಮುಂದಿನ ವರ್ಷ ಡಿಸೆಂಬರ್ 20ಕ್ಕೆ ರಿಲೀಸ್ ಆಗುತ್ತೆ ಎಂದು ಹೇಳಿದ್ದಾರೆ. ಆದರೆ 4 ಮತ್ತು5ನೇ ಸಿನಿಮಾ ಬರುತ್ತಾ ಇಲ್ವಾ ಎನ್ನುವುದನ್ನು ಕಾದು ನೋಡಬೇಕು.