Just In
Don't Miss!
- Sports
ಗಬ್ಬಾ ಸ್ಟೇಡಿಯಂನಲ್ಲಿ ಭಾರತೀಯರ ಮನ ಗೆದ್ದ ಬಡ ಕ್ರಿಕೆಟಿಗರ ಕತೆ
- News
ಮುಡಾ ನಿವೇಶನಗಳ ಅಭಿವೃದ್ಧಿಗೆ ಒನ್ ಟೈಂ ಸೆಟ್ಲಮೆಂಟ್
- Automobiles
ಬಿಡುಗಡೆಗೆ ಸಜ್ಜಾಗುತ್ತಿದೆ 2021ರ ಮಾರುತಿ ಎಕ್ಸ್ಎಲ್5 ಕಾರು
- Lifestyle
ಚೀನಾದ ಐಸ್ ಕ್ರೀಮ್ ನಲ್ಲಿ ಕೊರೊನಾ ವೈರಸ್ ಪತ್ತೆ!!!
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಬಾಹುಬಲಿ' ದಾಖಲೆ ಧೂಳಿಪಟ ಮಾಡಿದ ಅವೆಂಜರ್ಸ್
ಅವೆಂಜರ್ಸ್ ಎಂಡ್ ಗೇಮ್ ಸಿನಿಮಾಗೆ ಭಾರತದಲ್ಲಿ ಭಾರಿ ಮೆಚ್ಚುಗೆ ಸಿಕ್ಕಿದ್ದು, ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಕಳೆದ ಒಂದು ವಾರದಿಂದ ಎಲ್ಲ ಭಾರತೀಯ ಚಿತ್ರಗಳನ್ನ ಹಿಂದಿಕ್ಕಿ ಮುನ್ನುಗ್ಗುತ್ತಿರುವ ಹಾಲಿವುಡ್ ಸಿನಿಮಾ ಬಾಹುಬಲಿಯ ದಾಖಲೆ ಬ್ರೇಕ್ ಮಾಡಿದೆ.
ಮೊದಲ ದಿನ 53 ಕೋಟಿ ಗಳಿಸಿದ್ದ ಅವೆಂಜರ್ಸ್ ಮೊದಲ ವಾರಾಂತ್ಯಕ್ಕೆ ದಾಖಲೆಯ ಮೊತ್ತ ಗಳಿಕೆ ಕಂಡಿದೆ. ಈ ಹಿಂದೆ ಭಾರತೀಯ ಬಾಕ್ಸ್ ಆಫೀಸ್ ನಲ್ಲಿ ಇತಿಹಾಸ ನಿರ್ಮಿಸಿದ್ದ ಬಾಹುಬಲಿ ಚಿತ್ರದ ರೆಕಾರ್ಡ್ ಬ್ರೇಕ್ ಮಾಡಿ ಮುನ್ನುಗ್ಗುತ್ತಿದೆ.
ಹೌದು, ಮೊದಲ ವಾರಾಂತ್ಯಕ್ಕೆ ಅವೆಂಜರ್ಸ್ ಸಿನಿಮಾ 260 ಕೋಟಿ ಗಳಿಸಿದೆ. ಈ ಮೂಲಕ ಬಾಲಿವುಡ್ ಹಾಗೂ ಬಾಹುಬಲಿ ಚಿತ್ರದ ಹಳೆಯ ಎಲ್ಲ ದಾಖಲೆಗಳನ್ನ ಉಡೀಸ್ ಮಾಡಿದೆ. ಹಾಗಿದ್ರೆ, ಒಂದು ವಾರದ ಗಳಿಕೆಯಲ್ಲಿ ಯಾವ ಸಿನಿಮಾ ಎಷ್ಟು ಗಳಿಸಿತ್ತು?

ಬಾಹುಬಲಿ ಗಳಿಸಿದ್ದು ಎಷ್ಟು?
ಎಸ್ ಎಸ್ ರಾಜಮೌಳಿ ನಿರ್ದೇಶನ ಮೆಗಾ ಸಿನಿಮಾ ಬಾಹುಬಲಿ ಮೊದಲ ವಾರದಲ್ಲಿ 247 ಕೋಟಿ ಗಳಿಸುವ ಮೂಲಕ ಆಲ್ ಟೈಂ ದಾಖಲೆ ಸೃಷ್ಟಿಸಿತ್ತು. ಇದೀಗ, ಅವೆಂಜರ್ಸ್ ಎಂಡ್ ಗೇಮ್ ಸಿನಿಮಾ 260 ಕೋಟಿ ಗಳಿಸುವ ಮೂಲಕ ಒಂದು ಗಳಿಕೆಯಲ್ಲಿ ಹೊಸ ಇತಿಹಾಸ ನಿರ್ಮಿಸಿದೆ.

ಸಲ್ಮಾನ್ ಖಾನ್ ಚಿತ್ರಗಳು ಹಿಂದಕ್ಕೆ
ಬಾಹುಬಲಿ ನಂತರದ ಸ್ಥಾನದಲ್ಲಿ ಎರಡು ಸಲ್ಮಾನ್ ಖಾನ್ ಸಿನಿಮಾ ಇದೆ. 229 ಕೋಟಿ ಗಳಿಸಿದ್ದ ಸುಲ್ತಾನ್ ಮತ್ತು 206 ಕೋಟಿ ಗಳಿಸಿ ಟೈಗರ್ ಜಿಂದಾ ಹೈ ಚಿತ್ರಗಳು ಸ್ಥಾನ ಪಡೆದುಕೊಂಡಿದೆ.

ಸದ್ದು ಮಾಡಿತ್ತು ಸಂಜು
ಕಳೆದ ವರ್ಷ ತೆರೆಕಂಡಿದ್ದ ಸಂಜು ಸಿನಿಮಾನೂ ಒಂದು ವಾರದ ಗಳಿಕೆಯಲ್ಲಿ ಸದ್ದು ಮಾಡಿತ್ತು. 202 ಕೋಟಿ ಕಲೆಕ್ಷನ್ ಮಾಡಿದ್ದ ಸಂಜು ಮತ್ತು 197 ಕೋಟಿ ಗಳಿಸಿದ್ದ ದಂಗಾಲ್ ಕೂಡ ರೇಸ್ ನಲ್ಲಿದೆ.

ಅವೆಂಜರ್ಸ್ ಒಟ್ಟು ಗಳಿಕೆ
ಭಾರತದಲ್ಲಿ ಧೂಳೆಬ್ಬಿಸುತ್ತಿರುವ ಅವೆಂಜರ್ಸ್ ಒಟ್ಟು 350 ಕೋಟಿ ಗಳಿಸಿ ಮುನ್ನುಗ್ಗುತ್ತಿದೆ. ಇದು ಕೇವಲ ಭಾರತದಲ್ಲಿ ಆದ ಗಳಿಕೆ ಮಾತ್ರ. ಒಟ್ಟಾರೆ ವರ್ಲ್ಡ್ ವೈಡ್ ಗಳಿಕೆ 8300 ಕೋಟಿಗೂ ಅಧಿಕವಾಗಿದೆ ಎಂದು ಹೇಳಲಾಗ್ತಿದೆ.