For Quick Alerts
  ALLOW NOTIFICATIONS  
  For Daily Alerts

  ಕಮ್ ಬ್ಯಾಕ್ ಮಾಡಿದ ರಾಘಣ್ಣನಿಗೆ ಅಮ್ಮನಾಗುತ್ತಿರುವವರು ಇವರೇ

  By Naveen
  |
  ಅಮ್ಮನ ಮನೆಯ ಅಮ್ಮ ಈ ದೊಡ್ಡ ಕಲಾವಿದೆ..! | Filmibeat Kannada

  ಸ್ವಸ್ತಿಕ್ ಸ್ಟಾರ್ ರಾಘವೇಂದ್ರ ರಾಜ್ ಕುಮಾರ್ ಮತ್ತೆ ಸಿನಿಮಾ ಯಾನ ಮುಂದುವರೆಸುತ್ತಿದ್ದಾರೆ. 14 ವರ್ಷಗಳ ಬಳಿಕ 'ಅಮ್ಮನ ಮನೆ' ಎಂಬ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ.

  'ಅಮ್ಮನ ಮನೆ' ಸಿನಿಮಾ ಕೆಲ ಫೋಟೋಗಳು ಕಳೆದ ಭಾನುವಾರ ಬಿಡುಗಡೆಯಾಗಿದ್ದು, ಎಲ್ಲರ ಗಮನ ಸೆಳೆದಿತ್ತು. ಇದೀಗ ಈ ಚಿತ್ರದ ಮತ್ತೊಂದು ಮುಖ್ಯ ವಿಚಾರ ಹೊರ ಬಂದಿದೆ.

  14 ವರ್ಷಗಳ ಬಳಿಕ ರಾಘಣ್ಣ ಒಪ್ಪಿಕೊಂಡ ಈ ಚಿತ್ರ ಯಾವುದು? 14 ವರ್ಷಗಳ ಬಳಿಕ ರಾಘಣ್ಣ ಒಪ್ಪಿಕೊಂಡ ಈ ಚಿತ್ರ ಯಾವುದು?

  ಈಗ ಈ ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ಅವರ ತಾಯಿಯ ಹಾಗೂ ಹೆಂಡತಿಯ ಪಾತ್ರಗಳಿಗೆ ಕಲಾವಿದರ ಆಯ್ಕೆ ಆಗಿದೆ. ಹಿರಿಯ ನಟಿ, ಗಾಯಕಿ ಹಾಗೂ ರಂಗಭೂಮಿ ಕಲಾವಿದೆ ಬಿ ಜಯಶ್ರೀ ಅವರು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. 'ಅಮ್ಮನ ಮನೆ' ಸಿನಿಮಾದಲ್ಲಿ ಅಮ್ಮನ ಪಾತ್ರವನ್ನು ಅವರು ನಿರ್ವಹಿಸಲಿದ್ದಾರೆ.

  ಉಳಿದಂತೆ, ರಾಘವೇಂದ್ರ ರಾಜ್ ಕುಮಾರ್ ಅವರ ಹೆಂಡತಿಯ ಪಾತ್ರಕ್ಕೆ ಮಾನಸಿ ಸುಧೀರ್ ಆಯ್ಕೆ ಆಗಿದ್ದಾರೆ. ಮೂಲತಃ ರಂಗಭೂಮಿ ಪ್ರತಿಭೆ ಆಗಿರುವ ಅವರಿಗೆ ಈಗ ದೊಡ್ಡ ಅವಕಾಶ ಸಿಕ್ಕಿದೆ. ಜೊತೆಗೆ ಚಿತ್ರದಲ್ಲಿ ರೋಹಿನಿ ನಾಗೇಶ್ ನಟಿಸುತ್ತಿದ್ದಾರೆ. ಇವರು ಕೂಡ ಈ ಹಿಂದೆ ಅನೇಕ ನಾಟಕಗಳನ್ನು ಮಾಡಿದ್ದಾರೆ.

  b jayashree planning raghavendra rajkumars mother role in Ammana Mane movie

  ಅಂದಹಾಗೆ, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ನಿಖಿಲ್ ಮಂಜು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಶ್ರೀ ಲಲಿತ 'ಅಮ್ಮನ ಮನೆ' ಚಿತ್ರದ ಕಥೆ ಬರೆದಿದ್ದಾರೆ. ಆತ್ಮ ಶ್ರೀ ಮುತ್ತು ಆರ್ ಎನ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದ ಮುಹೂರ್ತ ಆಗಸ್ಟ್ 15ಕ್ಕೆ ರಾಘವೇಂದ್ರ ರಾಜ್ ಕುಮಾರ ಅವರ ಹುಟ್ಟುಹಬ್ಬದ ವಿಶೇಷವಾಗಿ ನಡೆಯಲಿದೆ. ಸಪ್ಟೆಂಬರ್ 5 ರಿಂದ ಸಿನಿಮಾದ ಶೂಟಿಂಗ್ ಶುರು ಆಗಲಿದೆ.

  English summary
  Theatre actress, singer B.Jayashree planning Raghavendra Rajkumar's mother role in 'Ammana Mane' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X