For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್' ಚಿತ್ರದಲ್ಲಿ ಬಿ ಸುರೇಶ್ ಅತ್ಯಂತ ಕಾಸ್ಟ್ಲಿ ನಟ.!

  |
  KGF Kannada Movie : ರಾಕಿಂಗ್ ಸ್ಟಾರ್ ಯಶ್ ನಂತರ ಹೆಚ್ಚು ಸಂಭಾವನೆ ಪಡೆದ ನಟ ಇವರೇ | FILMIBEAT KANNADA

  'ಕೆಜಿಎಫ್' ಸಿನಿಮಾ ಕನ್ನಡ ಬಹುದೊಡ್ಡ ಚಿತ್ರವಾಗಿ ಹೊರಹೊಮ್ಮುತ್ತಿದೆ. ಐದು ಭಾಷೆಯಲ್ಲಿ ರಿಲೀಸ್ ಮಾಡುತ್ತಿರುವ ಕಾರಣ ಇದು ಕನ್ನಡ ಸಿನಿಮಾ ಮಾತ್ರವಲ್ಲ, ಭಾರತದ ಚಿತ್ರವಾಗಿದೆ.

  ಬಜೆಟ್ ವಿಷ್ಯದಲ್ಲಿ ಕೆಜಿಎಫ್ ಸಿನಿಮಾ ಅತಿ ದೊಡ್ಡ ಚಿತ್ರ ಎಂದು ಹೇಳಲಾಗಿದೆ. ಆದ್ರೆ, ನಿರ್ಮಾಪಕರು ಕೆಜಿಎಫ್ ಚಿತ್ರದ ಬಜೆಟ್ ಎಷ್ಟು ಎಂದು ನಿಖರವಾಗಿ ಬಹಿರಂಗಪಡಿಸಿಲ್ಲ. ಬಟ್, ಮೂಲಗಳ ಪ್ರಕಾರ ಕೆಜಿಎಫ್ ಬಜೆಟ್ ಎಷ್ಟು ಎಂದು ಚರ್ಚೆಯಾಗುತ್ತಿದೆ.

  'ಕೆಜಿಎಫ್' ಬೆನ್ನಿಗೆ ವಿಶಾಲ್ ನಿಲ್ಲಲು ಕಾರಣ ಯಶ್ ಮಾಡಿದ್ದ 'ಆ' ದೊಡ್ಡ ಸಹಾಯ.!

  ಇದೀಗ, ಮತ್ತೊಂದು ಕುತೂಹಲಕಾರಿ ವಿಷ್ಯ ಹೊರಬಿದ್ದಿದೆ. ಹೌದು, ಕನ್ನಡದ ಹೆಸರಾಂತ ನಟ ಬಿ ಸುರೇಶ್ ಕೆಜಿಎಫ್ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ. ಕೆಜಿಎಫ್ ಚಿತ್ರದಲ್ಲಿ ಬಹುಮುಖ್ಯ ನಿರ್ವಹಿಸಿರುವ ಬಿ ಸುರೇಶ್ ಅವರು, ''ಯಶ್ ಬಿಟ್ಟರೇ ನಾನೇ ಹೆಚ್ಚು ಸಂಭಾವನೆ ಪಡೆದಿರುವ ನಟ'' ಎಂದು ಸಂತಸ ಹಂಚಿಕೊಂಡಿದ್ದಾರೆ. ಹಾಗಿದ್ರೆ, ಬಿ ಸುರೇಶ್ ಸಂಭಾವನೆ ಎಷ್ಟು? ಯಶ್ ಸಂಭಾವನೆ ಎಷ್ಟು? ಮುಂದೆ ಓದಿ....

  ಯಶ್ ನಂತರ ಬಿ ಸುರೇಶ್ ಕಾಸ್ಟ್ಲಿ ನಟ.!

  ಯಶ್ ನಂತರ ಬಿ ಸುರೇಶ್ ಕಾಸ್ಟ್ಲಿ ನಟ.!

  ಕೆಜಿಎಫ್ ಚಿತ್ರದಲ್ಲಿ ಬಹುತೇಕರು ಹೊಸ ಕಲಾವಿದರೇ. ಯಶ್ ಬಿಟ್ಟರೇ, ನಟಿ ಶ್ರೀನಿಧಿ ಶೆಟ್ಟಿಗೆ ಇದು ಮೊದಲ ಸಿನಿಮಾ. ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಸಿಷ್ಠ ಸಿಂಹ, ಅಯ್ಯಪ್ಪ ಅವರು ಕೂಡ ಸಿನಿಮಾದಲ್ಲಿದ್ದಾರೆ. ಅನಂತ್ ನಾಗ್, ಅಚ್ಯುತ್ ಕುಮಾರ್ ಕೂಡ ಇದ್ದಾರೆ. ಬಟ್, ಇವರ ಜೊತೆ ಹಿರಿಯ ನಟ ಹಾಗೂ ಅನುಭವಿ ನಟ ಬಿ ಸುರೇಶ್ ಕೂಡ ಪ್ರಮುಖರು. ಇವರುಗಳಲ್ಲಿ ಬಿ ಸುರೇಶ್ ಕಾಸ್ಟ್ಲಿ ನಟ ಆಗಿದ್ದಾರಂತೆ.

  ಕನ್ನಡ ನಟರಿಗೆ ಈ 'ಸ್ಟಾರ್'ಗಳು ಹೇಗೆ ಬರುತ್ತೆ: ಹಿಂದಿ ಮೀಡಿಯಾ ಪ್ರಶ್ನೆ.?

  ಬಿ ಸುರೇಶ್ ಸಂಭಾವನೆ ಎಷ್ಟು?

  ಬಿ ಸುರೇಶ್ ಸಂಭಾವನೆ ಎಷ್ಟು?

  ಕೆಜಿಎಫ್ ಚಿತ್ರದಲ್ಲಿ ಬಿ ಸುರೇಶ್ ಅವರದ್ದು ಪ್ರಮುಖ ಪಾತ್ರ. ಹಾಗಾಗಿ, ಸಿನಿಮಾ ಪೂರ್ತಿ ಇವರಿಂದ ಒಂದೊಳ್ಳೆ ನಟನೆಯನ್ನ ಕಾಣಬಹುದು. ನಿರ್ಮಾಪಕರು ಕೂಡ ಬಿ ಸುರೇಶ್ ಅವರನ್ನ ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರಂತೆ. ಅದಕ್ಕಾಗಿಯೇ ಸುರೇಶ್ ಅವರು 'ಬಹುಶಃ ಯಶ್ ಬಿಟ್ಟರೇ ನಾನೇ ಅತ್ಯಂತ ಕಾಸ್ಟ್ಲೀ ನಟ'' ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಆದ್ರೆ ನಿಖರವಾರ ಸಂಭಾವನೆಯನ್ನ ಹೇಳಿಲ್ಲ.

  ಡಿಸೆಂಬರ್ 21ಕ್ಕೆ 'ಕೆಜಿಎಫ್' ಜೊತೆ 7 ದೊಡ್ಡ ಸಿನಿಮಾಗಳು ರಿಲೀಸ್

  ಹಾಗಿದ್ರೆ, ಯಶ್ ಸಂಭಾವನೆ ಎಷ್ಟಿರಬಹುದು?

  ಹಾಗಿದ್ರೆ, ಯಶ್ ಸಂಭಾವನೆ ಎಷ್ಟಿರಬಹುದು?

  ಹಾಗ್ನೋಡಿದ್ರೆ, ರಾಕಿಂಗ್ ಸ್ಟಾರ್ ಯಶ್ ಮೂರು ವರ್ಷದಿಂದ ಈ ಸಿನಿಮಾ ಮಾಡ್ತಿದ್ದಾರೆ. ವರ್ಷಕ್ಕೊಂದು ಸಿನಿಮಾ ಅಂದ್ರೂ, ಮೂರು ವರ್ಷಕ್ಕೆ ಮೂರು ಅಥವಾ ನಾಲ್ಕು ಸಿನಿಮಾ ಮಾಡ್ತಿದ್ರು ಯಶ್. ಬಟ್. ಕೆಜಿಎಫ್ ಚಿತ್ರದ ಮೇಲಿನ ನಂಬಿಕೆಯಿಂದ ಅದೊಂದಕ್ಕೆ ಸೀಮಿತವಾಗಿದ್ದರು. ಹಾಗಿದ್ರೆ, ಮೂರು ವರ್ಷದ ಕೆಜಿಎಫ್ ಚಿತ್ರಕ್ಕಾಗಿ ಯಶ್ ಅವರಿಗೆ ಎಷ್ಟು ಸಂಭಾವನೆ ಸಿಕ್ಕಿರಬಹುದು ಎಂಬ ಕುತೂಹಲ ಕಾಡ್ತಿದೆ. ಆದ್ರೆ, ಈ ಬಗ್ಗೆ ಸ್ಪಷ್ಟ ಮಾಹಿತಿ ಎಲ್ಲಿಯೂ ಸಿಕ್ಕಿಲ್ಲ.

  ಪ್ರಶಾಂತ್ ನೀಲ್ ಹೇಳಿದ 'ಆ ಒಂದು' ಮಾತು ಈಗ ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ.!

  ಕೆಜಿಎಫ್ ಬಜೆಟ್ ಎಷ್ಟು?

  ಕೆಜಿಎಫ್ ಬಜೆಟ್ ಎಷ್ಟು?

  ಅಂದ್ಹಾಗೆ, ಕೆಜಿಎಫ್ ಸಿನಿಮಾ ಕನ್ನಡದ ಅತಿ ದೊಡ್ಡ ಸಿನಿಮಾ ಎನ್ನಲಾಗಿದೆ. ಬಟ್, ನಿಖರವಾದ ಬಂಡವಾಳವನ್ನ ಚಿತ್ರತಂಡ ಹೇಳಿಲ್ಲ. ಆದ್ರೆ, 70 ರಿಂದ 80 ಕೋಟಿಯವರೆಗೂ ಬಜೆಟ್ ಆಗಿರಬಹುದು ಎಂಬ ಮಾತಿದೆ. ಇದೇ ಮಾತನ್ನ ಬಿ ಸುರೇಶ್ ಅವರು ಕೂಡ ಹೇಳಿದ್ದಾರೆ.

  ಈ 'ಒಬ್ಬ ವ್ಯಕ್ತಿ' ಸಹಾಯದಿಂದಲೇ ತೆಲುಗು, ಹಿಂದಿಯಲ್ಲಿ 'ಕೆಜಿಎಫ್' ಘರ್ಜಿಸುತ್ತಿದೆ.!

  ನೂರು ಕೋಟಿ ಗಳಿಕೆ ಸಾಧ್ಯ.!

  ನೂರು ಕೋಟಿ ಗಳಿಕೆ ಸಾಧ್ಯ.!

  ದೊಡ್ಡ ಬಜೆಟ್, ದೊಡ್ಡ ಬಿಡುಗಡೆ ನೋಡಿದ್ರೆ, ಕೆಜಿಎಫ್ ಸಿನಿಮಾ ನೂರು ಕೋಟಿ ಗಳಿಸೋದು ಪಕ್ಕಾ ಎನ್ನಲಾಗಿದೆ. ಸುಮಾರು 1800-2000 ಸ್ಕ್ರೀನ್ ನಲ್ಲಿ ಕೆಜಿಎಫ್ ಬರ್ತಿದೆಯಂತೆ. ಡಿಸೆಂಬರ್ 21ಕ್ಕೆ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಕೆಜಿಎಫ್ ತೆರೆಕಾಣ್ತಿದೆ.

  ಅಂದು ಯಶ್ ಹೇಳಿದ್ದ ಒಂದೊಂದು ಮಾತು ಇಂದು ನಿಜ ಆಗ್ತಿದೆ.!

  English summary
  Kannada senior actor b suresh spoke about his kgf remuneration. he was the costly actor in kgf movie after yash.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X