»   » ದರ್ಶನ್ 51ನೇ ಚಿತ್ರದ ನಿರ್ಮಾಪಕರು ನಾವೇ, ಗೊಂದಲ ಬೇಡ ಎಂದ ಬಿ.ಸುರೇಶ್

ದರ್ಶನ್ 51ನೇ ಚಿತ್ರದ ನಿರ್ಮಾಪಕರು ನಾವೇ, ಗೊಂದಲ ಬೇಡ ಎಂದ ಬಿ.ಸುರೇಶ್

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 51ನೇ ಚಿತ್ರದ ನಿರ್ಮಾಪಕರು ಯಾರು ಎಂಬ ಗೊಂದಲ ಶುರುವಾಗಿದ್ದು ಪೋಸ್ಟರ್ ಗಳಿಂದ.! ಒಂದ್ಕಡೆ, ದರ್ಶನ್ ರವರ 51ನೇ ಚಿತ್ರಕ್ಕೆ 'ನಾನೇ ನಿರ್ಮಾಪಕ' ಎಂದು ಸಂದೇಶ್ ನಾಗರಾಜ್ ಪತ್ರಿಕೆಯೊಂದಕ್ಕೆ ಜಾಹೀರಾತು ನೀಡಿದ್ದರೆ, ಇನ್ನೊಂದೆಡೆ ದರ್ಶನ್ ರವರ 51ನೇ ಚಿತ್ರಕ್ಕೆ ಬಿ.ಸುರೇಶ್ ಬಂಡವಾಳ ಹಾಕಲಿದ್ದಾರೆ ಎಂಬ ಸುದ್ದಿ ಕೂಡ ಹೊರಬಿದ್ದಿತ್ತು.

ದರ್ಶನ್ 'ಬಾಸ್' ಹುಟ್ಟುಹಬ್ಬ ವಿಶೇಷ: 51ನೇ ಸಿನಿಮಾ ಅನೌನ್ಸ್

ಈಗ ಈ ಗೊಂದಲಕ್ಕೆ ಸ್ವತಃ ಬಿ.ಸುರೇಶ್ ಸ್ಪಷ್ಟನೆ ನೀಡಿದ್ದಾರೆ. ದರ್ಶನ್ ರವರ 51ನೇ ಚಿತ್ರಕ್ಕೆ 'ನಾನೇ ನಿರ್ಮಾಪಕ'. ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ಬಿ.ಸುರೇಶ್ ತಿಳಿಸಿದ್ದಾರೆ.

B Suresh to produce Darshan's 51st movie

'ಡಿ' ಬಾಸ್ 51ನೇ ಸಿನಿಮಾ ಯಾರಿಗೆ.? ಪೋಸ್ಟರ್ ತಂದಿಟ್ಟ ಅನುಮಾನ.!

ದರ್ಶನ್ ರವರ 51ನೇ ಸಿನಿಮಾ ಜನವರಿ, 2018 ರಲ್ಲಿ ಸೆಟ್ಟೇರಲಿದೆ. ಸದ್ಯ 'ತಾರಕ್' ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಾಗಿರುವ ದರ್ಶನ್, ಅದು ಮುಗಿದ ಬಳಿಕ 'ಕುರುಕ್ಷೇತ್ರ' ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಡಿಸೆಂಬರ್ ಹೊತ್ತಿಗೆ 'ಕುರುಕ್ಷೇತ್ರ' ಶೂಟಿಂಗ್ ಮುಗಿಯಲಿದ್ದು, 51ನೇ ಚಿತ್ರಕ್ಕೆ ಮುಂದಿನ ವರ್ಷ ಜನವರಿಯಲ್ಲಿ ದರ್ಶನ್ ಚಾಲನೆ ನೀಡಲಿದ್ದಾರಂತೆ.

ದರ್ಶನ್ 51ನೇ ಸಿನಿಮಾ: ಅನುಮಾನಗಳಿಗೆ ಹಾಲೆರೆದ ಈ ಫೋಟೋ.!

ದರ್ಶನ್ ರವರ 51ನೇ ಚಿತ್ರಕ್ಕೆ ಬಿ.ಸುರೇಶ್ ಹಾಗೂ ಶೈಲಜಾ ನಾಗ್ ನಿರ್ಮಾಪಕರು. ಇವರಿಬ್ಬರು ಒಟ್ಟೊಟ್ಟಿಗೆ ಮೂರು ಕಥೆಗಳನ್ನು, ಮೂವರು ಬೇರೆ ಬೇರೆ ನಿರ್ದೇಶಕರ ಕೈಯಲ್ಲಿ ರೆಡಿ ಮಾಡಿಸುತ್ತಿದ್ದಾರಂತೆ. ಯಾವ ಕಥೆ ಓಕೆ ಆಗುತ್ತದೋ, ಆ ನಿರ್ದೇಶಕರೇ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನುತ್ತಾರೆ ನಿರ್ಮಾಪಕ ಬಿ.ಸುರೇಶ್.

ಸದ್ಯಕ್ಕೆ ಪ್ರೀ-ಪ್ರೊಡಕ್ಷನ್ ವರ್ಕ್ ಗೆ ಚಾಲನೆ ನೀಡಲಾಗಿದೆ. ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಹೆಚ್ಚಿನ ಮಾಹಿತಿ ನೀಡುತ್ತಲಿರುತ್ತೇವೆ, 'ಫಿಲ್ಮಿಬೀಟ್ ಕನ್ನಡ' ಪುಟಕ್ಕೆ ಭೇಟಿ ನೀಡುತ್ತಿರಿ...

English summary
Producer B Suresh will be producing Kannada Actor Darshan's 51st Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada