For Quick Alerts
  ALLOW NOTIFICATIONS  
  For Daily Alerts

  ಚಾಲೆಂಜಿಂಗ್ ಸ್ಟಾರ್ 'ಮೆಜೆಸ್ಟಿಕ್' ಪುನರ್ ನಿರ್ಮಾಣ

  By Rajendra
  |

  ಮಾಸ್ ನಿರ್ದೇಶಕ ಎನ್ ಓಂ ಪ್ರಕಾಶ್ ರಾವ್ ಅವರು ಹುಚ್ಚ ಚಿತ್ರವನ್ನು ಪುನರ್ ನಿರ್ಮಿಸುತ್ತಿರುವುಗು ಗೊತ್ತೇ ಇದೆ. ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಮೆಜೆಸ್ಟಿಕ್' ಚಿತ್ರದ ಸರದಿ. ಈ ಚಿತ್ರವನ್ನು ಮೂಲ ಚಿತ್ರದ ನಿರ್ಮಾಪಕ ಭಾ.ಮಾ.ಹರೀಶ್ ಪುನರ್ ನಿರ್ಮಿಸುತ್ತಿದ್ದಾರೆ.

  ಮೂಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಪಿ.ಎನ್. ಸತ್ಯ ಅವರೇ ಈ ಚಿತ್ರಕ್ಕೂ ನಿರ್ದೇಶಕರು. ಫೆಬ್ರವರಿ 8, 2002ರಲ್ಲಿ ತೆರೆಕಂಡಿದ್ದ ಈ ಚಿತ್ರ ಶತದಿನೋತ್ಸವ ಆಚರಿಕೊಂಡಿದ್ದು. ದರ್ಶನ್ ಪೂರ್ನ ಪ್ರಮಾಣದ ನಾಯಕ ನಟನಾಗಿ ಅಭಿನಯಿಸಿದ ಈ ಚಿತ್ರ ಅವರ ವೃತ್ತಿ ಬದುಕಿಗೆ ಮಹತ್ತರ ತಿರುವು ನೀಡಿತು.

  'ದಾಸ' ನಾಗಿ ದರ್ಶನ್ ಈ ಚಿತ್ರದಲ್ಲಿ ಅಭಿನಯಿಸಿದ್ದರು. ರೇಖಾ, ವನಿತಾ ವಾಸು, ಸಾಧು ಕೋಕಿಲ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. 2002ರಲ್ಲಿ ಈ ಚಿತ್ರವನ್ನು ಸುಮಾರು ರು.60 ಲಕ್ಷದಲ್ಲಿ ನಿರ್ಮಿಸಲಾಗಿತ್ತು. ಈಗ ಇದಕ್ಕಿಂತಲೂ ನಾಲ್ಕೈದು ಪಟ್ಟು ಜಾಸ್ತಿ ಬಜೆಟ್ ನಲ್ಲಿ ಚಿತ್ರವನ್ನು ಪುನರ್ ನಿರ್ಮಿಸಲು ಹರೀಶ್ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

  'ಮೆಜೆಸ್ಟಿಕ್' ಹೊಸ ಚಿತ್ರದಲ್ಲಿ ಬಹುತೇಕ ಹಳೆ ಕಲಾವಿದರೇ ಇರುತ್ತಾರೆ. ಆದರೆ ದರ್ಶನ್ ಹಾಗೂ ರೇಖಾ ಮಾತ್ರ ಇರುವುದಿಲ್ಲ. ನಾಯಕ ನಾಯಕಿ ಹೊಸಬರು ಎನ್ನುತ್ತಾರೆ ಹರೀಶ್. ಕಲಾವಿದರ ಆಯ್ಕೆ ಬಳಿಕ ಚಿತ್ರೀಕರಣ ಶುರುವಾಗಲಿದೆ.

  ಹಳೆಯ ಮೆಜೆಸ್ಟಿಕ್ ಕಥೆಯನ್ನೇ ರಿಚ್ ಆಗಿ ತೋರಿಸಲು ಮುಂದಾಗಿದ್ದಾರೆ ಹರೀಶ್. ಈಗಿನ ಮೆಜೆಸ್ಟಿಕ್ ಬಹಳಷ್ಟು ಬದಲಾಗಿದೆ. ಕಥೆಯಲ್ಲೂ ಅಲ್ಪ ಸ್ವಲ್ಪ ಬದಲಾವಣೆಯಗಳನ್ನು ನಿರೀಕ್ಷಿಸಬಹುದು. ದರ್ಶನ್ ಇಲ್ಲದ ಮೆಜೆಸ್ಟಿಕ್ ಚಿತ್ರವನ್ನು ಪ್ರೇಕ್ಷಕರು ಎಷ್ಟರ ಮಟ್ಟಿಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದುನೋಡಬೇಕು. (ಏಜೆನ್ಸೀಸ್)

  English summary
  Kannada films producer Ba.Ma.Harish to reproduce his old film 'Majestic' in the same title. The film released in 8th February, 2001 which leads Challenging Star Darshan and Rekha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X