»   » ತಮಿಳುನಾಡಿನಲ್ಲಿ 'ಬಾಹುಬಲಿ'ಗೆ ಬ್ರೇಕ್: ಮಾರ್ನಿಂಗ್ ಪ್ರದರ್ಶನ ರದ್ದು!

ತಮಿಳುನಾಡಿನಲ್ಲಿ 'ಬಾಹುಬಲಿ'ಗೆ ಬ್ರೇಕ್: ಮಾರ್ನಿಂಗ್ ಪ್ರದರ್ಶನ ರದ್ದು!

Posted By:
Subscribe to Filmibeat Kannada

ಬಹುನಿರೀಕ್ಷಿತ 'ಬಾಹುಬಲಿ-2' ಚಿತ್ರ ಶುಕ್ರವಾರ ವಿಶ್ವಾದ್ಯಂತ ಬಿಡುಗಡೆಯಾಗಿದ್ದರೂ, ತಮಿಳುನಾಡಿನಲ್ಲಿ ಬೆಳಗ್ಗಿನ ಪ್ರದರ್ಶನ ರದ್ದಾಗಿದೆ ಎಂದು ತಿಳಿದುಬಂದಿದೆ.

ಚಿತ್ರದ ನಿರ್ಮಾಪಕರು ಹಾಗೂ ತಮಿಳುನಾಡು ವಿತರಕರ ನಡುವಿನ ವಾಣಿಜ್ಯ ಬಿಕ್ಕಟ್ಟು ಪರಿಹಾರವಾಗದ ಹಿನ್ನಲೆಯಲ್ಲಿ ಚಿತ್ರ ನಿರ್ಮಾಪಕರು ತಮಿಳುನಾಡಿನಲ್ಲಿ ಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಿಲ್ಲ. ಹೀಗಾಗಿ ಚೆನ್ನೈ ಸೇರಿದಂತೆ ತಮಿಳುನಾಡಿನ ಯಾವುದೇ ಥಿಯೇಟರ್ ನಲ್ಲೂ ಚಿತ್ರದ ಪ್ರದರ್ಶನ ಆರಂಭವಾಗಿಲ್ಲ ಎಂದು ವರದಿಯಾಗಿದೆ.

ನಿರ್ಮಾಪಕರು ವರ್ಸಸ್ ವಿತರಕರು!

ತಮಿಳುನಾಡಿನ ವಿತರ ಕೆ ಪ್ರೊಡಕ್ಷನ್ ಮತ್ತು ಬಾಹುಬಲಿ ನಿರ್ಮಾಪಕರ ನಡುವಿನ ಆರ್ಥಿಕ ವ್ಯವಹಾರದಲ್ಲಿ ಬಿಕ್ಕಟ್ಟು ಏರ್ಪಟಿದ್ದು, ತಮಿಳುನಾಡಿನಲ್ಲಿ ಸಿನಿಮಾ ಬಿಡುಗಡೆ ಮಾಡದಂತೆ ನಿರ್ಮಾಪಕರು ಸೂಚನೆ ಕೊಟ್ಟಿದ್ದಾರಂತೆ.

ತಮಿಳುನಾಡಿನದ್ಯಾಂತ ಬೆಳ್ಳಂಬೆಳಿಗ್ಗೆ ಶೋ ರದ್ದು!

ನಿರ್ಮಾಪಕರಿಂದ ಎನ್.ಓ.ಸಿ ಸಿಗದ ಹಿನ್ನಲೆ ತಮಿಳುನಾಡಿಲ್ಲಿದ್ದ ಬೆಳ್ಳಗ್ಗಿನ ಶೋಗಳು ರದ್ದಾಗಿದೆ. ಬೆಳಿಗ್ಗೆ 3 ಗಂಟೆಗೆ ಹಲವು ಕಡೆ ಪ್ರದರ್ಶನವಿತ್ತು. ಇನ್ನು 9 ಗಂಟೆ ಹಾಗೂ 11 ಗಂಟೆ ಶೋಗಳು ಕೂಡ ತಮಿಳುನಾಡಿನಲ್ಲಿ ಶುರುವಾಗಿಲ್ಲವಂತೆ.

ಟಿಕೆಟ್ ಮಾರಾಟವಾಗಿಲ್ಲ!

ತಮಿಳುನಾಡಿನ ಹಲವು ಚಿತ್ರಮಂದಿರದಲ್ಲಿ ಬೆಳಗ್ಗೆ 3 ಗಂಟೆಯಿಂದಲೇ ನೂರಾರು ಮಂದಿ ಚಿತ್ರದ ಟಿಕೆಟ್ ಖರೀದಿಸಲು ಚಿತ್ರಮಂದಿರದ ಮುಂದೆ ನಿಂತಿದ್ದರೂ ಟಿಕೆಟ್ ಮಾರಾಟವಾಗಿಲ್ಲವಂತೆ.

ಚಿತ್ರಮಂದಿರಗಳು ಸ್ವಷ್ಟನೆ!

ಚಿತ್ರ ಪ್ರದರ್ಶನಕ್ಕೆ ನಿರ್ಮಾಪಕರು ಅನುಮತಿ ನೀಡದ ಹಿನ್ನಲೆಯಲ್ಲಿ ಚಿತ್ರ ಪ್ರದರ್ಶನ ಆರಂಭಿಸಿಲ್ಲ ಎಂದು ಚಿತ್ರ ಮಂದಿರದ ಸಿಬ್ಬಂದಿಗಳು ಹೇಳುತ್ತಿದ್ದಾರೆ ಎನ್ನಲಾಗಿದೆ.

ಮಧ್ಯಾಹ್ನ ಬಿಡುಗಡೆಯಾಗುವ ನಿರೀಕ್ಷೆಯಿದೆ!

ನಿರ್ಮಾಪಕರು ಹಾಗೂ ವಿತರಕ ಆರ್ಥಿಕ ಬಿಕ್ಕಟ್ಟಿಗೆ ಸಂಬಂಧಪಟ್ಟಂತೆ ಚರ್ಚೆಗಳು ನಡೆಯುತ್ತಿದ್ದು, ಮಧ್ಯಾಹ್ನದ ಪ್ರದರ್ಶನ ಶುರುವಾಗುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ.

English summary
Early morning shows of S.S Rajamouli's magnum opus "Baahubali 2: The Conclusion" were cancelled on Friday due to financial issues in Tamil Nadu, industry sources said

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X