»   » ಬಾಹುಬಲಿ-2: ಭರ್ಜರಿಯಾಗಿದೆ 'ಬಲ್ಲಾಳದೇವ'ನ ಫಸ್ಟ್ ಲುಕ್.!

ಬಾಹುಬಲಿ-2: ಭರ್ಜರಿಯಾಗಿದೆ 'ಬಲ್ಲಾಳದೇವ'ನ ಫಸ್ಟ್ ಲುಕ್.!

Posted By:
Subscribe to Filmibeat Kannada

ದಕ್ಷಿಣ ಭಾರತದ ಅತ್ಯಂತ ನಿರೀಕ್ಷೆಯ ಚಿತ್ರ 'ಬಾಹುಬಲಿ-2'. ಈ ಚಿತ್ರದ ಬಿಡುಗಡೆಗೆ ಇಡೀ ಚಿತ್ರಜಗತ್ತೇ ಕಾಯುತ್ತಿದೆ. ಯಾಕಂದ್ರೆ, 'ಬಾಹುಬಲಿ' ಚಿತ್ರದ ಮೊದಲ ಭಾಗ 'ಬಾಹುಬಲಿ ದಿ ಕನ್ ಕ್ಲ್ಯೂಷನ್' 2015ರಲ್ಲಿ ಬಿಡುಗಡೆಯಾಗಿ ವಿಶ್ವಮಟ್ಟದಲ್ಲಿ ಸುದ್ದಿ ಮಾಡಿತ್ತು. ಹೀಗಾಗಿ ಮುಂದುವರೆದ ಭಾಗದ ಮೇಲೂ ಆ ನಿರೀಕ್ಷೆ ಬೆಟ್ಟದಷ್ಟು ಹುಟ್ಟಿಕೊಂಡಿದೆ.

ಮೊದಲೇ ಬಿಡುಗಡೆ ದಿನಾಂಕವನ್ನ ಅನೌನ್ಸ್ ಮಾಡಿ, ಭರ್ಜರಿಯಾಗಿ ಮೇಕಿಂಗ್ ಆಗುತ್ತಿರುವ 'ಬಾಹುಬಲಿ-2', ಈಗ ಮತ್ತೊಂದು ಪೋಸ್ಟರ್ ರಿಲೀಸ್ ಮಾಡಿದೆ. ಕಳೆದ ತಿಂಗಳಲ್ಲಿ ಪ್ರಭಾಸ್ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದ ಚಿತ್ರತಂಡ, ಈಗ ರಾಣಾ ದಗ್ಗುಬಾಟಿಯ 'ಬಲ್ಲಾಳದೇವ'ನ ಫಸ್ಟ್ ಪೋಸ್ಟರ್ ರಿವಿಲ್ ಮಾಡಿದೆ.

ರಾಣಾ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್.!

ಡಿಸೆಂಬರ್ 14 ತೆಲುಗು ನಟ ರಾಣಾ ದಗ್ಗುಬಾಟಿಯ 32ನೇ ಹುಟ್ಟುಹಬ್ಬ. ಹೀಗಾಗಿ ರಾಣಾ ಬರ್ತ್ ಡೇ ವಿಶೇಷವಾಗಿ 'ಬಾಹುಬಲಿ-2' ಚಿತ್ರತಂಡದಿಂದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ.

ಭರ್ಜರಿಯಾಗಿದೆ 'ಬಲ್ಲಾಳದೇವ'ನ ಫಸ್ಟ್ ಲುಕ್.!

'ಬಾಹುಬಲಿ ದಿ ಬಿಗಿನಿಂಗ್' ಚಿತ್ರದಲ್ಲಿ ಅಬ್ಬರಿಸಿದ್ದ ಬಲ್ಲಾಳದೇವ 'ಬಾಹುಬಲಿ ದಿ ಕನ್ ಕ್ಲ್ಯೂಷನ್' ಚಿತ್ರದಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಚಿತ್ರಪ್ರೇಮಿಗಳನ್ನ ಕಾಡುತ್ತಿತ್ತು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. 'ಬಲ್ಲಾಳದೇವ'ನ ಮೊದಲ ನೋಟ ಬಿಡುಗಡೆಯಾಗಿದ್ದು, ರಾಣಾ ಗೆಟಪ್ ಭರ್ಜರಿಯಾಗಿದೆ.

ದೈತ್ಯರಾಜ 'ಬಲ್ಲಾಳದೇವ' !

'ಬಾಹುಬಲಿ-2' ಚಿತ್ರದಲ್ಲಿ ರಾಣಾ, ಎರಡು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಾಗಿದೆ. ಯುವಕನ ವಯಸ್ಸಿನ ಬಲ್ಲಾಳದೇವ ಹಾಗೂ ಮಧ್ಯಯುವಕನ ಬಲ್ಲಾಳದೇವನಾಗಿ ಮಿಂಚಲಿದ್ದಾರೆ. ಹೀಗಾಗಿ, ತಮ್ಮ ತೂಕವನ್ನ ಕಡಿಮೆ ಮಾಡಿಕೊಂಡಿರುವ ರಾಣಾ, 110 ಕೆ.ಜಿಯಿಂದ 92 ಕೆ.ಜಿಗೆ ತಮ್ಮ ದೇಹವನ್ನ ಇಳಿಸಿದ್ದಾರೆ. ಇದಕ್ಕಾಗಿ ಕಳೆದ 5 ತಿಂಗಳಿಂದ ಪ್ರತಿದಿನ 2 ಗಂಟೆ ಜಿಮ್ ನಲ್ಲಿ ದೇಹವನ್ನ ದಂಡಿಸಿದ್ದಾರೆ. ಇದರ ಪರಿಣಾಮ ರಾಣಾ ಸಿಕ್ಸ್ ಪ್ಯಾಕ್ ನಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ.

ಪ್ರಭಾಸ್ ಫಸ್ಟ್ ಲುಕ್ ಗೆ ಫ್ಯಾನ್ಸ್ ಫಿದಾ !

ಕಳೆದ ತಿಂಗಳಲ್ಲಿ ಪ್ರಭಾಸ್ ಅವರ ಫಸ್ಟ್ ಲುಕ್ ರಿಲೀಸ್ ಮಾಡಲಾಗಿತ್ತು. ಆಗಲೇ ಚಿತ್ರದ ಬಗ್ಗೆ ಡಬಲ್ ನಿರೀಕ್ಷೆ ಹುಟ್ಟಿಕೊಂಡಿತ್ತು. ಈಗ ರಾಣಾ ದಗ್ಗುಬಾಟಿಯ ಗೆಟಪ್ ಕೂಡ ರಿವಿಲ್ ಆಗಿದೆ. ಹೀಗಾಗಿ 'ಬಾಹುಬಲಿ-2' ಮತ್ತಷ್ಟು ಶಕ್ತಿಯುತವಾಗಿರಲಿದೆ ಎಂಬುದು ಸಾಭೀತಾಗಿದೆ.

ಮದಗಜಗಳ ಕಾದಾಟ.!

ಪ್ರಭಾಸ್ ಹಾಗೂ ರಾಣಾ ಅವರ ಫಸ್ಟ್ ಲುಕ್ ನೋಡಿದ ಮೇಲೆ 'ಬಾಹುಬಲಿ-2 'ಚಿತ್ರದಲ್ಲಿ ಮದಗಜಗಳ ಕಾದಾಟ ಹೇಗಿರಲಿದೆ ಎಂಬುದನ್ನ ಊಹಿಸಬಹುದು. ಅದನ್ನ ಕಣ್ಣಾರೆ ನೋಡುವುದಕ್ಕೆ ಮತ್ತಷ್ಟು ದಿನ ಕಾಯಬೇಕಿದೆ.

ಮೆಗಾಮೂವಿಗೆ 'ಮೆಗಾಸ್ಟಾರ್'ಗಳು ಸಾಥ್!

ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ-2 'ಚಿತ್ರದಲ್ಲಿ ಪ್ರಭಾಸ್ ಹಾಗೂ ರಾಣಾ ಅವರ ಜೊತೆ ಅನುಷ್ಕ ಶೆಟ್ಟಿ ಮುಖ್ಯ ಪಾತ್ರವನ್ನ ನಿರ್ವಹಿಸಿದ್ದಾರಂತೆ. ಉಳಿದಂತೆ ತಮನ್ನ, ನಾಸೀರ್, ರಮ್ಯಾಕೃಷ್ಣ, ಸುದೀಪ್ ಹಾಗೂ ಸತ್ಯರಾಜ್ ಕೂಡ ಕಾಣಿಸಿಕೊಳ್ಳಲಿದ್ದಾರೆ.

ಏಪ್ರಿಲ್ 28ಕ್ಕೆ ಮುಹೂರ್ತ ಫಿಕ್ಸ್.!

'ಬಾಹುಬಲಿ-2' ಏಕಕಾಲದಲ್ಲಿ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಮೂಡಿಬರುತ್ತಿದೆ. ಸದ್ಯ, ಪೋಸ್ಟ್ ಪ್ರೊಡಕ್ಷನ್ ನಲ್ಲಿ ತೊಡಗಿಕೊಂಡಿರುವ ಚಿತ್ರತಂಡ, ಅತ್ಯಾಧುನಿಕ ತಂತ್ರಜ್ಞಾನವನ್ನ ಬಳಿಸಿ ಗ್ರಾಫಿಕ್ಸ್ ಮಾಡುತ್ತಿದೆ. ಹೀಗಾಗಿ, ಏಪ್ರಿಲ್ 28ಕ್ಕೆ ಹೇಳಿದಂತೆ ತೆರೆಮೇಲೆ ಬರಲಿದೆಯಂತೆ ಟಾಲಿವುಡ್ ಐತಿಹಾಸಿಕ ಚಿತ್ರ.

English summary
Baahubali: The Conclusion revealed the first look of Baahubali's arch nemesis, King Bhallala.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada