'ಬಾಹುಬಲಿ' ಚಿತ್ರತಂಡದಿಂದ ಬ್ಯಾಡ್ ನ್ಯೂಸ್!
'ಬಾಹುಬಲಿ-2' ಚಿತ್ರಕ್ಕಾಗಿ ಇಡೀ ಚಿತ್ರ ಜಗತ್ತೇ ತುದಿಗಾಲಲ್ಲಿ ನಿಂತು ಕಾಯುತ್ತಿದೆ. ಯಾಕಂದ್ರೆ, 'ಬಾಹುಬಲಿ-2' ಚಿತ್ರದ ಬಿಡುಗಡೆಗೆ ಕೇವಲ 4 ತಿಂಗಳು ಮಾತ್ರ ಬಾಕಿಯಿರುವುದು. ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ? ಎಂಬ ಸಹಸ್ರಾರು ಅಭಿಮಾನಿಗಳನ್ನು ಕಾಡುತ್ತಿರುವ ಈ ಪ್ರಶ್ನೆಗೆ ಈ ವರ್ಷ ಉತ್ತರ ಸಿಗಲಿದೆ ಎಂಬ ನಿರೀಕ್ಷೆ.
ಆದ್ರೆ, ಅಭಿಮಾನಿಗಳ ಈ ನಿರೀಕ್ಷೆ ಹುಸಿಯಾಗುವ ಸಾಧ್ಯತೆಯಿದೆ. ಈ ಮೊದಲೇ ಹೇಳಿದ ದಿನಕ್ಕೆ 'ಬಾಹುಬಲಿ-2' ಚಿತ್ರ ಬರುವುದು ಅನುಮಾನವಂತೆ.[ಬಾಹುಬಲಿ-2: ಭರ್ಜರಿಯಾಗಿದೆ 'ಬಲ್ಲಾಳದೇವ'ನ ಫಸ್ಟ್ ಲುಕ್.!]

ಎಲ್ಲ ಅಂದುಕೊಂಡಂತೆ ಆಗಿದ್ದರೇ, 'ಬಾಹುಬಲಿ-2' ಇದೇ ವರ್ಷ ಏಪ್ರಿಲ್ 28 ರಂದು ಬಿಡುಗಡೆಯಾಗಬೇಕಿತ್ತು. ಆದ್ರೆ, ಏಪ್ರಿಲ್ ನಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಕಷ್ಟವಾಗಲಿದೆಯಂತೆ. ಹೌದು, ಇಷ್ಟೋತ್ತಿಗಾಗಲೇ 'ಬಾಹುಬಲಿ-2' ಚಿತ್ರದ ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಹೋಗಬೇಕಿತ್ತು. ಆದ್ರೆ, ಇನ್ನೂ ಕೆಲ ದೃಶ್ಯಗಳ ಶೂಟಿಂಗ್ ಬಾಕಿಯಿದ್ದು, ನಿಗಧಿ ಮಾಡಿದ ದಿನಾಂಕದೊಳಗೆ ಕಂಪ್ಲೀಟ್ ಮಾಡಲು ಕಷ್ಟವಾಗಲಿದೆಯಂತೆ.['ಬಾಹುಬಲಿ'ನ ಕಟ್ಟಪ್ಪ ಕೊಂದಿದ್ದು ಯಾಕೆ? ರವಿಶಂಕರ್ ಬಾಯ್ಬಿಟ್ಟ ಸತ್ಯ?]

ಮತ್ತೊಂದು ಮೂಲಗಳ ಪ್ರಕಾರ, ಚಿತ್ರತಂಡ ಹೇಳಿದಾಗೇ ಅದೇ ದಿನ ಸಿನಿಮಾ ಬಿಡುಗಡೆ ಮಾಡಲಾಗವುದು ಎನ್ನಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನ ಕೈತ್ತಿಕೊಳ್ಳಲಾಗಿದೆಯಂತೆ. ಮತ್ತೊಂದೆಡೆ ನಟ ಪ್ರಭಾಸ್, ತಮ್ಮ ಮುಂದಿನ ಚಿತ್ರದಲ್ಲಿ ತೊಡಗಿಸಿಕೊಳ್ಳಬೇಕಾಗಿದೆಯಂತೆ. ಆದ್ರೆ, 'ಬಾಹುಬಲಿ' ಚಿತ್ರೀಕರಣ ವಿಳಂಬವಾಗುತ್ತಿದ್ದು, ಆ ಚಿತ್ರಕ್ಕೂ ಸಮಸ್ಯೆಯಾಗುತ್ತಿದೆ ಎನ್ನಲಾಗುತ್ತಿದೆ.
ಅದೇನೆ ಇರಲಿ, ದಿನೇ ದಿನೇ 'ಬಾಹುಬಲಿ-2' ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದ್ದು, ಆದಷ್ಟೂ ಬೇಗ ತೆರೆಗೆ ಬರಲಿ ಎನ್ನುವುದು ಮಾತ್ರ ಅಭಿಮಾನಿಗಳ ಆಶಯ.


Click it and Unblock the Notifications











