»   » ಏಪ್ರಿಲ್ 28ರಿಂದ ಆಂಧ್ರ, ತೆಲಂಗಾಣ ಆಗಿ ಬದಲಾಗಲಿದೆ ಕನ್ನಡದ ಗಾಂಧಿನಗರ.!

ಏಪ್ರಿಲ್ 28ರಿಂದ ಆಂಧ್ರ, ತೆಲಂಗಾಣ ಆಗಿ ಬದಲಾಗಲಿದೆ ಕನ್ನಡದ ಗಾಂಧಿನಗರ.!

Posted By: Naveen
Subscribe to Filmibeat Kannada

'ಬಾಹುಬಲಿ-2' ಚಿತ್ರದ ಬಿಡುಗಡೆಗೆ ದಿನಗಣನೆ ಶುರುವಾಗಿದ್ದು, ವರ್ಲ್ಡ್ ವೈಡ್ ಸ್ವಾಗತಕ್ಕೆ ಸಜ್ಜಾಗಿದೆ. ಇತ್ತ ಕರ್ನಾಟಕದಲ್ಲೂ ಸುಮಾರು 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಬಾಹುಬಲಿ-2' ಅಬ್ಬರಿಸಲಿದ್ದು, ಬೆಂಗಳೂರಿನಲ್ಲಿ ತೆಲುಗು ಚಿತ್ರದ ಆರ್ಭಟ ಸಿಕ್ಕಾಪಟ್ಟೆ ಜೋರಾಗಿರಲಿದೆ.['ಕನ್ನಡದಲ್ಲಿ ಬಾಹುಬಲಿ'ಗಾಗಿ ಮತ್ತೆ ಜೋರಾಗಿದೆ ಕೂಗು]

'ಬಾಹುಬಲಿ-2' ಚಿತ್ರಕ್ಕೆ ಸಿಲಿಕಾನ್ ಸಿಟಿಯಲ್ಲಿರುವ ಕ್ರೇಜ್ ನೋಡಿದ ವಿತರಕರು ಗಾಂಧಿನಗರವನ್ನೇ ಅಕ್ಷರಶಃ ತೆಲುಗುಮಯವಾಗಿ ಮಾಡುವುದಕ್ಕೆ ಮುಂದಾಗಿದ್ದಾರೆ. ಹೌದು, ಈ ಶುಕ್ರವಾರದಿಂದ ಆಂಧ್ರ, ತೆಲಂಗಾಣ ಆಗಿ ಬದಲಾಗಲಿದೆ ಕನ್ನಡದ ಗಾಂಧಿನಗರ. ಅದು ಹೇಗೆ ಎನ್ನುವ ಕುತೂಹಲ ನಿಮ್ಮ ಕಾಡುತ್ತಿದ್ದರೇ ಈ ಪೂರ್ತಿ ಸುದ್ದಿಯನ್ನ ಓದಿ...

'ಮೆಜೆಸ್ಟಿಕ್'ನ 3 ಮುಖ್ಯ ಚಿತ್ರಮಂದಿರಗಳಲ್ಲಿ 'ಬಾಹುಬಲಿ-2'

ಕೆ.ಜಿ.ರಸ್ತೆಯ ಪ್ರಮುಖ ಚಿತ್ರಮಂದಿರಗಳಾದ ತ್ರಿವೇಣಿ, ಭೂಮಿಕಾ, ಅಭಿನಯದಲ್ಲಿ ಈ ಶುಕ್ರವಾರದಿಂದ 'ಬಾಹುಬಲಿ-2' ಸಿನಿಮಾ ಬಿಡುಗಡೆಯಾಗಲಿದೆ. ಭೂಮಿಕಾ ಚಿತ್ರಮಂದಿರದಲ್ಲಿ ಒಂದೇ ದಿನಕ್ಕೆ 6 ಪ್ರದರ್ಶನವನ್ನ ನಡೆಸುತ್ತಿದ್ದಾರೆ. ಈಗಾಗಲೇ ಮೂರು ಚಿತ್ರಮಂದಿರಗಳ ಮೊದಲ ದಿನದ ಟಿಕೆಟ್ ಸೋಲ್ಡ್ ಔಟ್ ಆಗಿದೆ.[ಬೆಂಗಳೂರಿನಲ್ಲಿ 'ಬಾಹುಬಲಿ 2' ಡಿಮ್ಯಾಂಡ್ ಎಷ್ಟಿದೆ ಗೊತ್ತಾ..?]

ಗಾಂಧಿನಗರ ಈಗ ತೆಲುಗುಮಯ..!

'ಬಾಹುಬಲಿ-2' ಚಿತ್ರಕ್ಕೂ ಮುನ್ನ ಗಾಂಧಿನಗರದಲ್ಲಿ ಚಿರಂಜೀವಿ ಅಭಿನಯದ 'ಖೈದಿ ನಂ 150' ಎರಡು ಪ್ರಮುಖ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಸಂತೋಷ್ ಚಿತ್ರಮಂದಿರದಲ್ಲಿ ನಟ ಬಾಲಕೃಷ್ಣ ಅವರ 'ಗೌತಮಿ ಪುತ್ರ ಶಾತಕರಣಿ' ಬಿಡುಗಡೆಯಾಗಿತ್ತು. [ಇಂದು(ಫೆ.16) 'ಬಾಹುಬಲಿ 2 ಕನ್ನಡಕ್ಕೆ ಡಬ್ ಆಗಲಿ' ಟ್ವಿಟರ್ ಅಭಿಯಾನ]

ಕನ್ನಡ ಚಿತ್ರಗಳಿಗೆ ಥಿಯೇಟರ್ ಸಮಸ್ಯೆ!

ಕೆ.ಜಿ ರಸ್ತೆಯಲ್ಲಿ ಮುಖ್ಯ ಚಿತ್ರಮಂದಿರಗಳಲ್ಲಿ ಪರಭಾಷಾ ಸಿನಿಮಾಗಳು ಬಿಡುಗಡೆಯಾಗುವುದು ಕಮ್ಮಿ. ಆದ್ರೆ, ಈಗ ಕನ್ನಡ ಚಿತ್ರಗಳಿಗೆ ಮೀಸಲಾಗಿರುವ ಚಿತ್ರಮಂದಿರಗಳಲ್ಲೂ ಕೂಡ ಪರಭಾಷೆ ಚಿತ್ರಗಳು ಬಿಡುಗಡೆಯಾಗುತ್ತಿದೆ. ಇದರಿಂದ್ದ ಕನ್ನಡ ಚಿತ್ರಗಳಿಗೆ ಹೆಚ್ಚಿನ ತೊಂದರೆಯಾಗುತ್ತಿದೆ.['ಬಾಹುಬಲಿ 2' ಕನ್ನಡದ ಡಬ್ಬಿಂಗ್ ಬೇಡಿಕೆಗೆ ಜನರ ಪ್ರತಿಕ್ರಿಯೆ..!]

300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್

ಇಡೀ ಕರ್ನಾಟಕದಲ್ಲಿ 'ಬಾಹುಬಲಿ-2' ಅಬ್ಬರ ಜೋರಾಗಿದೆ. ಇದೇ ಏಪ್ರಿಲ್ 28ಕ್ಕೆ 'ಬಾಹುಬಲಿ-2' ಕರ್ನಾಟಕದ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.[ಕನ್ನಡಿಗರ ಹೋರಾಟಕ್ಕೆ ಸಂದ ಜಯ: ಕಡೆಗೂ ತಲೆಬಾಗಿದ ಕಟ್ಟಪ್ಪ.!]

ಹೀಗಾದ್ರೆ ಮುಂದೆ ಕನ್ನಡ ಚಿತ್ರಗಳ ಗತಿಯೇನು?

ಇದೇ ರೀತಿ ಕರ್ನಾಟಕದಾದ್ಯಂತ ಪರಭಾಷ ಸಿನಿಮಾಗಳು ರಿಲೀಸ್ ಆದ್ರೆ ಮುಂದೆ ಕನ್ನಡ ಚಿತ್ರಗಳ ಗತಿ ಏನು ಅನ್ನೋದು ಕನ್ನಡ ಸಿನಿಪ್ರಿಯರ ಪ್ರಶ್ನೆ.

English summary
The three main theaters of Gandhinagar are reserved for Baahubali 2. The movie is going to release on April 28TH.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada