For Quick Alerts
  ALLOW NOTIFICATIONS  
  For Daily Alerts

  ಫೇಸ್ ಬುಕ್ ಲೈವ್ ತಂದ ಅವಾಂತರ: 'ಬಾಹುಬಲಿ-2' ಸಿನಿಮಾ ಪುಕ್ಕಟೆ ಪ್ರಸಾರ.!

  By Harshitha
  |

  ಸಾಮಾಜಿಕ ಜಾಲತಾಣಗಳಲ್ಲಿ 'ಲೈವ್' ಅಪ್ಷನ್ ಬಂದಿದ್ದೇ ಬಂದಿದ್ದು... ಲೈವ್ ಎನ್ನುವ ಪದಕ್ಕೆ ಇದ್ದ ಬೆಲೆಯೇ ಇಲ್ಲದಂತಾಗಿದೆ. ಸಮರ್ಪಕವಾಗಿ ಬಳಸಿಕೊಂಡರೆ, ಸಾಮಾಜಿಕ ಜಾಲತಾಣಗಳಿಗಿಂತ ಪವರ್ ಫುಲ್ ಆಗಿರುವ ಮಾಧ್ಯಮ ಮತ್ತೊಂದಿಲ್ಲ. ಆದ್ರೆ, ಅದನ್ನ ದುರ್ಬಳಕೆ ಮಾಡುವವರೇ ಹೆಚ್ಚು. ಇದಕ್ಕೊಂದು ಉತ್ತಮ ನಿದರ್ಶನ ಕೊಡ್ತೀವಿ.. ಓದಿ....

  ಜಗತ್ತಿನಾದ್ಯಂತ ಭಾರಿ ನಿರೀಕ್ಷೆ ಹುಟ್ಟುಹಾಕಿದ್ದ 'ಬಾಹುಬಲಿ-2' ಸಿನಿಮಾ ತೆರೆಗೆ ಅಪ್ಪಳಿಸಿದ್ದಾಯ್ತು. ಬೆಂಗಳೂರಿನಲ್ಲಂತೂ ಸಾವಿರಾರು ರೂಪಾಯಿ ಕೊಟ್ಟು 'ಬಾಹುಬಲಿ-2' ಕಣ್ತುಂಬಿಕೊಳ್ಳಲು ಜನ ಥಿಯೇಟರ್ ಗಳ ಕಡೆ ಮುಖ ಮಾಡುತ್ತಿದ್ದಾರೆ.['ಬಾಹುಬಲಿ-2' ಮೊಟ್ಟ ಮೊದಲ ವಿಮರ್ಶೆ: ಭಾರತಕ್ಕಿಳಿದ ಹಾಲಿವುಡ್.!]

  ಆದ್ರೆ, ಕಿಡಿಗೇಡಿಯೊಬ್ಬ ಥಿಯೇಟರ್ ನಿಂದಲೇ ಫೇಸ್ ಬುಕ್ ಲೈವ್ ಮಾಡುವ ಮೂಲಕ ನೂರಾರು ಕೋಟಿ ರೂಪಾಯಿ ಬಜೆಟ್ ನ 'ಬಾಹುಬಲಿ-2' ಚಿತ್ರವನ್ನ ಪುಕ್ಕಟೆಯಾಗಿ ಪ್ರಸಾರ ಮಾಡಿದ್ದಾನೆ. ಸಾಮಾಜಿಕ ಜಾಲತಾಣಗಳಿಂದ ಆಗುವ ದೊಡ್ಡ ಅವಾಂತರ ಅಂದ್ರೆ ಇದೇ ನೋಡಿ.! ಮುಂದೆ ಓದಿ....

  ಕುವೈಟ್ ನಿಂದ ಫೇಸ್ ಬುಕ್ ಲೈವ್

  ಕುವೈಟ್ ನಿಂದ ಫೇಸ್ ಬುಕ್ ಲೈವ್

  ಅಂದ್ಹಾಗೆ, 'ಬಾಹುಬಲಿ-2' ಚಿತ್ರವನ್ನ ಫೇಸ್ ಬುಕ್ ಲೈವ್ ಮೂಲಕ ಪ್ರಸಾರ ಮಾಡಿರುವವನು ಭಾರತೀಯನಲ್ಲ ಬದಲಾಗಿ ಕುವೈತ್ ನವನು ಎಂದು ವರದಿ ಅಗಿದೆ.['ಬಾಹುಬಲಿ 2' ನೋಡಿ ಭಾರತೀಯ ಸಿನಿಮಾದ ಕಿಂಗ್ ಎಂದ ಪ್ರೇಕ್ಷಕರು]

  ಅರ್ಧಕರ್ಧ ಸಿನಿಮಾ ಫೇಸ್ ಬುಕ್ ನಲ್ಲಿ.!

  ಅರ್ಧಕರ್ಧ ಸಿನಿಮಾ ಫೇಸ್ ಬುಕ್ ನಲ್ಲಿ.!

  ಕುವೈತ್ ನಲ್ಲಿ 'ಬಾಹುಬಲಿ-2' ಚಿತ್ರ ವೀಕ್ಷಿಸುತ್ತಿದ್ದಾತ, ಸುಮಾರು 55 ನಿಮಿಷಗಳ ಕಾಲ ಫೇಸ್ ಬುಕ್ ನಲ್ಲಿ ಲೈವ್ ಮಾಡಿ, 'ಬಾಹುಬಲಿ-2' ಚಿತ್ರವನ್ನ ಬಿಟ್ಟಿಯಾಗಿ ಪ್ರಸಾರ ಮಾಡಿದ್ದಾನೆ.[ತಮಿಳುನಾಡಿನಲ್ಲಿ 'ಬಾಹುಬಲಿ'ಗೆ ಬ್ರೇಕ್: ಮಾರ್ನಿಂಗ್ ಪ್ರದರ್ಶನ ರದ್ದು!]

  ಸಾವಿರಾರು ಮಂದಿಯಿಂದ 'ಫ್ರೀ' ವೀಕ್ಷಣೆ

  ಸಾವಿರಾರು ಮಂದಿಯಿಂದ 'ಫ್ರೀ' ವೀಕ್ಷಣೆ

  ಫೇಸ್ ಬುಕ್ ಲೈವ್ ಮೂಲಕ 'ಬಾಹುಬಲಿ-2' ಚಿತ್ರವನ್ನ ಬರೋಬ್ಬರಿ ಇಪ್ಪತ್ತು ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಎರಡು ಸಾವಿರಕ್ಕೂ ಹೆಚ್ಚು ಜನ ಆ ಲೈವ್ ವಿಡಿಯೋನ ಶೇರ್ ಮಾಡಿದ್ದಾರೆ.

  ನಿನ್ನೆ ಬಿಡುಗಡೆ

  ನಿನ್ನೆ ಬಿಡುಗಡೆ

  ಕುವೈತ್ ಸೇರಿದಂತೆ ಅರಬ್ ರಾಷ್ಟ್ರಗಳಲ್ಲಿ 'ಬಾಹುಬಲಿ-2' ಚಿತ್ರ ನಿನ್ನೆ ತೆರೆಕಂಡಿದೆ.

  ಈಗಲೂ ಲೈವ್ ಬರುತ್ತಿದೆ.!

  ಈಗಲೂ ಲೈವ್ ಬರುತ್ತಿದೆ.!

  ಸಾಫ್ಟ್ ವೇರ್ ಎಂಜಿನಿಯರ್ ಒಬ್ಬ ಈಗಲೂ 'ಬಾಹುಬಲಿ-2' ಚಿತ್ರವನ್ನ ಫೇಸ್ ಬುಕ್ ನಲ್ಲಿ ಲೈವ್ ಮಾಡುತ್ತಿದ್ದಾನೆ. ಇಂಥವ್ರಿಗೆ ಕಡಿವಾಣ ಹಾಕುವವರು ಯಾರು.?

  ನಾವು ಯಾರ ಪರವೂ ಅಲ್ಲ.!

  ನಾವು ಯಾರ ಪರವೂ ಅಲ್ಲ.!

  ಯಾವುದೇ ಸಿನಿಮಾ ಆಗಲಿ, ಅದನ್ನ ಉತ್ತಮವಾಗಿ ತೆರೆಗೆ ತರಲು ಇಡೀ ಚಿತ್ರತಂಡ ಹಗಲು ರಾತ್ರಿ ಶ್ರಮ ಪಟ್ಟಿರುತ್ತಾರೆ. ನಿರ್ಮಾಪಕ ಕೋಟ್ಯಾಂತರ ರೂಪಾಯಿ ಬಂಡವಾಳ ಹಾಕಿರುತ್ತಾರೆ. ಇಷ್ಟೆಲ್ಲ ಇರುವಾಗ, ಸಾಮಾಜಿಕ ಜಾಲತಾಣಗಳನ್ನ ದುರ್ಬಳಕೆ ಮಾಡಿ ಪುಕ್ಕಟೆಯಾಗಿ ಹೀಗೆ ಸಿನಿಮಾ ಪ್ರಸಾರ ಮಾಡುವುದು ಸರಿಯೇ.? ಒಮ್ಮೆ ನೀವೇ ಯೋಚಿಸಿ...

  ನಾಳೆ ಕನ್ನಡ ಸಿನಿಮಾಗೂ ಆಗಬಹುದು.!

  ನಾಳೆ ಕನ್ನಡ ಸಿನಿಮಾಗೂ ಆಗಬಹುದು.!

  ಇಂದು 'ಬಾಹುಬಲಿ-2' ಚಿತ್ರಕ್ಕೆ ಹೀಗಾಗಿದೆ. ಮುಂದೆ ಕನ್ನಡ ಚಿತ್ರಕ್ಕೂ ಆಗಬಹುದು. ಸಾಮಾಜಿಕ ಜಾಲತಾಣಗಳನ್ನು ಬಳಸುವ ವಿದ್ಯಾವಂತರೇ... ಇಂತಹ ಕೆಲಸಕ್ಕೆ ದಯವಿಟ್ಟು ಕೈ ಹಾಕಬೇಡಿ. ನಿಮ್ಮ ವಿದ್ಯೆಯನ್ನ ಒಳ್ಳೆಯ ಕೆಲಸಕ್ಕೆ ಉಪಯೋಗಿಸಿ...

  ಪೈರಸಿ ಆಯ್ತು ಈಗ ಫೇಸ್ ಬುಕ್ ಲೈವ್

  ಪೈರಸಿ ಆಯ್ತು ಈಗ ಫೇಸ್ ಬುಕ್ ಲೈವ್

  ಪೈರಸಿ ಕಾಟದಿಂದ ಚಿತ್ರರಂಗ ಇನ್ನೂ ತಪ್ಪಿಸಿಕೊಂಡಿಲ್ಲ. ಹೀಗಿರುವಾಗಲೇ, 'ಫೇಸ್ ಬುಕ್ ಲೈವ್' ಎಂಬ ಹೊಸ ತಲೆ ನೋವು ಬೇರೆ.!

  English summary
  Most Expected Movie 'Baahubali-2' was streamed live on Facebook by Unknown person from Kuwait.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X