»   » 'ಬಾಹುಬಲಿ-2' ಟ್ರೈಲರ್ ಗೂ ಮುಂಚೆನೇ ಬಂತು ಪ್ರಭಾಸ್ ಟೀಸರ್!

'ಬಾಹುಬಲಿ-2' ಟ್ರೈಲರ್ ಗೂ ಮುಂಚೆನೇ ಬಂತು ಪ್ರಭಾಸ್ ಟೀಸರ್!

By: BK
Subscribe to Filmibeat Kannada

ಎಸ್.ಎಸ್.ರಾಜಮೌಳಿ ನಿರ್ದೇಶನದ 'ಬಾಹುಬಲಿ-2' ಚಿತ್ರದ ಟ್ರೈಲರ್ ಇದೇ ತಿಂಗಳು 16 ರಂದು ಬಿಡುಗಡೆಯಾಗುತ್ತಿದೆ. ಆದ್ರೆ, ಅದಕ್ಕೂ ಮುಂಚೆಯೇ ಈಗ ಚಿತ್ರದ ಟೀಸರ್ ರಿಲೀಸ್ ಮಾಡಿದ್ದು, ಟ್ರೈಲರ್ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.

ಟೀಸರ್ ನಲ್ಲಿ ಪ್ರಭಾಸ್ ಅವರ ಲುಕ್ ರಿವಿಲ್ ಮಾಡಿದ್ದು, ಹಿನ್ನಲೆ ಸಂಗೀತ ಮೋಡಿ ಮಾಡುತ್ತಿದೆ. ಇಷ್ಟು ದಿನ ಪೋಸ್ಟರ್ ಗಳ ಮೂಲಕ ಸಿನಿ ದುನಿಯಾದಲ್ಲಿ ಸೌಂಡ್ ಮಾಡುತ್ತಿದ್ದ 'ಬಾಹುಬಲಿ' ಈಗ ಆಕ್ಷನ್ ಟೀಸರ್ ನಿಂದ ಎಲ್ಲರ ಗಮನೆ ಸೆಳೆಯುತ್ತಿದೆ.

Baahubali 2 Taeser Released

ಅಂದ್ಹಾಗೆ, 2015 ರಲ್ಲಿ ತೆರೆಕಂಡಿದ್ದ 'ಬಾಹುಬಲಿ' ಚಿತ್ರದ ಮುಂದುವರೆದ ಭಾಗ 'ಬಾಹುಬಲಿ-2'. ಪ್ರಭಾಸ್, ರಾಣ, ಅನುಷ್ಕ ಶೆಟ್ಟಿ, ತಮನ್ನ, ರಮ್ಯಕೃಷ್ಣ, ನಾಸೀರ್, ಸತ್ಯರಾಜ್ ಸೇರಿದಂತೆ ಹಲವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸದ್ಯ, ಟೀಸರ್ ಬಿಡುಗಡೆ ಮಾಡಿ ಚಿತ್ರ ಪ್ರೇಮಿಗಳಲ್ಲಿ ಕುತೂಹಲ ಕೆರಳಿಸಿರುವ 'ಬಾಹುಬಲಿ' ಏಪ್ರಿಲ್ ತಿಂಗಳಲ್ಲಿ ತೆರೆಕಾಣಲಿದ್ದು, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಮೂಡಿ ಬರಲಿದೆ.

English summary
S S Rajamouli Directed and Prabhas, Rana Daggubati starrer Baahubali 2 Teaser Released. Trailer will be Relesing on March 16th.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada