For Quick Alerts
  ALLOW NOTIFICATIONS  
  For Daily Alerts

  'ಬಾಹುಬಲಿ-3' ಬಗ್ಗೆ ರಾಜಮೌಳಿ ಚಿಂತನೆ: ಕಥೆ ಏನಿರಬಹುದು?

  By Bharath Kumar
  |

  'ಬಾಹುಬಲಿ' ಮತ್ತು 'ಬಾಹುಬಲಿ -2' ಯಶಸ್ಸಿನ ಬಳಿಕ ಮತ್ತೊಂದು ಭಾಗವನ್ನು ನಿರ್ದೇಶಿಸುವ ಕುರಿತಾಗಿ ರಾಜಮೌಳಿ ಸುಳಿವು ನೀಡಿದ್ದಾರೆ. ಸದ್ಯ, 'ಬಾಹುಬಲಿ -2' ಬಾಕ್ಸ್ ಆಫೀಸ್ ದಾಖಲೆಗಳನ್ನೆಲ್ಲಾ ಧೂಳಿಪಟ ಮಾಡಿ ಸುಮಾರು 790 ಕೋಟಿ ರೂ. ಗಳಿಸಿ ಮುನ್ನುಗ್ಗುತ್ತಿದೆ. ಹೀಗಿರುವಾಗ ಬಾಹುಬಲಿಯ ಮತ್ತೊಂದು ಭಾಗ ಬರುತ್ತಾ ಎಂಬ ಚರ್ಚೆಗಳು ಸಿನಿದುನಿಯಾದಲ್ಲಿ ನಡೆಯುತ್ತಿದೆ.[ಭಾರತ ಚಿತ್ರ ಜಗತ್ತಿಗೆ 'ಬಾಹುಬಲಿ ನಂ ೧', ಎಲ್ಲ ಹಳೆ ದಾಖಲೆ ಪುಡಿ.. ಪುಡಿ! ]

  'ಕಟ್ಟಪ್ಪ ಬಾಹುಬಲಿಯನ್ನ ಕೊಂದಿದ್ದು ಯಾಕೆ? ಎಂಬ ಪ್ರಶ್ನೆಯನ್ನಿಟ್ಟು ಭಾಗ-2 ಮುಂದುವರೆಸಿದ್ದ ರಾಜಮೌಳಿ ಯಶಸ್ವಿಯಾಗಿ ಸಿನಿಮಾ ಮಾಡಿ ಮುಗಿಸಿದ್ದಾರೆ. ಚಿತ್ರದ ಕೊನೆಯಲ್ಲಿ ಎಲ್ಲದಕ್ಕೂ ಉತ್ತರ ಕೊಟ್ಟು ಪ್ರೇಕ್ಷಕರನ್ನ ಸಮಾಧಾನ ಪಡಿಸಿದ್ದಾರೆ. ಈಗ ಮೂರನೇ ಭಾಗ ಮಾಡಲು ಯೋಚನೆ ಮಾಡುತ್ತಿದ್ದಾರೆ ಅಂದ್ರೆ, ಮತ್ತಷ್ಟು ಕುತೂಹಲ ಹೆಚ್ಚಾಗುತ್ತಿದೆ.['ಬಾಹುಬಲಿ' ಅಬ್ಬರಕ್ಕೆ ಭಾರತೀಯ ಬಾಕ್ಸ್ ಆಫೀಸ್ ಖಲ್ಲಾಸ್!]

  ಹೌದು, ಇತ್ತೀಚೆಗಷ್ಟೇ ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದಾಗ ''ತಂದೆಯವರು ಶಕ್ತಿಯುತವಾದ ಕತೆಯೊಂದಿಗೆ ಬಂದರೇ 'ಬಾಹುಬಲಿ -3' ಸಿನಿಮಾ ಮಾಡಲು ನಾವು ಸಿದ್ಧವಿದ್ದೇವೆ'' ಎಂದು ಹೇಳುವ ಮೂಲಕ ಚಿತ್ರಪ್ರೇಮಿಗಳಲ್ಲಿ ನಿರೀಕ್ಷೆ ಹುಟ್ಟಿಹಾಕಿದ್ದಾರೆ.['ಬಾಹುಬಲಿ 2' ನೋಡಿ ರಾಜಮೌಳಿ ಬೆನ್ನುತಟ್ಟಿದ ಸೂಪರ್ ಸ್ಟಾರ್ ರಜನಿ]

  ಹೇಳಬೇಕಾಗಿರುವುದು ಎಲ್ಲವನ್ನ ಮೊದಲೆರೆಡು ಭಾಗಗಳಲ್ಲಿಯೇ ಹೇಳಿ ಮುಗಿಸಿರುವ ರಾಜಮೌಳಿ, ಮೂರನೇ ಭಾಗದಲ್ಲಿ ಏನು ತೋರಿಸಲಿದ್ದಾರೆ ಎಂಬುದು ಸದ್ಯ ಕಾಡುತ್ತಿರುವ ಪ್ರಶ್ನೆ. ಅದೇನೆ ಇರಲಿ, ರಾಜಮೌಳಿ ಅವರ ತಂದೆ ವಿಜೇಂದ್ರ ಪ್ರಸಾದ್ ಒಬ್ಬ ಅದ್ಭುತ ಕಥೆಗಾರ. ಹೀಗಾಗಿ, ಮೂರನೇ ಭಾಗಕ್ಕೆ ಕಥೆ ಬರೆದರು ಅಚ್ಚರಿಯಿಲ್ಲ. ದಿಟ್ಟ ಮನಸ್ಸಿನಿಂದ ವಿಜೇಂದ್ರ ಪ್ರಸಾದ್ ಕಥೆ ಬರೆಯುತ್ತಾರಾ? ರಾಜಮೌಳಿ ಸಿನಿಮಾ ಮಾಡ್ತಾರಾ? ಎಂಬುದನ್ನ ಕಾದು ನೋಡಣ....

  English summary
  Basking in the glorious success of Baahubali The Conclusion, SS Rajamouli revealed his plans about Baahubali 3

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X