»   » ಅಬ್ಬಾ! 'ಬಾಹುಬಲಿ' ಎರಡು ದಿನದ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?

ಅಬ್ಬಾ! 'ಬಾಹುಬಲಿ' ಎರಡು ದಿನದ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?

Posted By:
Subscribe to Filmibeat Kannada

ಎಸ್.ಎಸ್.ರಾಜಮೌಳಿ ನಿರ್ದೇಶನದಲ್ಲಿ ದೇಶಾದ್ಯಂತ ವಿವಿಧ ಭಾಷೆಗಳಲ್ಲಿ ತೆರೆ ಕಂಡ ಬಿಗ್ ಬಜೆಟ್ ಚಿತ್ರ 'ಬಾಹುಬಲಿ' ಬಾರತದಲ್ಲಿ ಬಾಕ್ಸಾಫೀಸ್ ಚಿಂದಿ ಉಡಾಯಿಸಿದೆ. ಚಿತ್ರ ಬಿಡುಗಡೆಯಾದ ಮೊದಲ ದಿನದಿಂದ ಪ್ರೇಕ್ಷರಿಂದ ಅತ್ಯುತ್ತಮ ರೆಸ್ಪಾನ್ಸ್ ಪಡೆದುಕೊಂಡು ಇದೀಗ ಎಲ್ಲೆಡೆ ಸುದ್ದಿಯಲ್ಲಿದೆ.

ಸುಮಾರು 250 ಕೋಟಿ ರೂಪಾಯಿ ಬಜೆಟ್ ನಲ್ಲಿ ತಯಾರಾದ 'ಬಾಹುಬಲಿ' ತೆಲುಗು ಚಿತ್ರ ಇದೀಗ ದೇಶಾದ್ಯಂತ ಕೇವಲ ಒಂದು ದಿನದಲ್ಲಿ 66 ಕೋಟಿ ಗಳಿಕೆ ಮಾಡುವ ಮೂಲಕ ರೆಕಾರ್ಡ್ ಸೃಷ್ಟಿಸಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ, ತೆಲುಗು ಭಾಗ 28 ಕೋಟಿ ರೂಪಾಯಿ ಗಳಿಕೆ ಮಾಡಿದೆ.[ಬಾಹುಬಲಿ ವಿಮರ್ಶೆ : ಓಕೆ, ಆದರೆ ಅಂಥ ನಿರೀಕ್ಷೆ ಬೇಡ ]

Baahubali

ಇನ್ನೂ ಎರಡನೇ ದಿನವಾದ ಇಂದು ತೆಲುಗು ರಾಜ್ಯಗಳಲ್ಲಿ ಸುಮಾರು 14 ರಿಂದ 15 ಕೋಟಿ ರೂಪಾಯಿ ಗಳಿಕೆ ಮಾಡುವ ಸಾಧ್ಯತೆ ಇದೆ ಅಂತ ಚಿತ್ರ ಮಾರುಕಟ್ಟೆ ವಿಶ್ಲೇಷಕರ ಅಭಿಪ್ರಾಯ.[ಕೆಜಿ ರಸ್ತೆಯಲ್ಲಿ ಹೊಸ ಇತಿಹಾಸ ಬರೆದ ತೆಲುಗಿನ ಬಾಹುಬಲಿ]

ತೆಲುಗು, ತಮಿಳು, ಹಿಂದಿ, ಮಲಯಾಳಂ, ಹೀಗೆ ನಾಲ್ಕು ಭಾಷೆಗಳಲ್ಲಿ ತೆರೆ ಕಂಡ 'ಬಾಹುಬಲಿ' ಯು.ಎಸ್.ಎ ಬಾಕ್ಸಾಫೀಸ್ ನಲ್ಲಿ 2 ಮಿಲಿಯನ್ ಡಾಲರ್ ದಾಟಿದೆ. ಇನ್ನೂ ಮುಂದಿನ ದಿನಗಳಲ್ಲಿ ಈ ಚಿತ್ರದ ಗಳಿಕೆ ಎಲ್ಲಿ ಹೋಗಿ ತಲುಪುತ್ತದೋ ಕಾದು ನೋಡಬೇಕಿದೆ.

English summary
Baahubali movie directed by SS Rajamouli has got an earth-shattering response at the Indian Box Office on the first day of release.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada