»   » ಮೈನವೀರೇಳಿಸುವ ಡೈಲಾಗ್ ನಲ್ಲಿ ಬಾಹುಬಲಿ ನ್ಯೂ ಟ್ರೈಲರ್

ಮೈನವೀರೇಳಿಸುವ ಡೈಲಾಗ್ ನಲ್ಲಿ ಬಾಹುಬಲಿ ನ್ಯೂ ಟ್ರೈಲರ್

Posted By:
Subscribe to Filmibeat Kannada

ಟಾಲಿವುಡ್ ನ ಬಹುನಿರೀಕ್ಷಿತ 'ಬಾಹುಬಲಿ' ಚಿತ್ರ ತೆರೆ ಮೇಲೆ ಯಾವಾಗ ಕಾಣಿಸುತ್ತೋ ಅಂತ ಕಾತರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಚಿತ್ರತಂಡ ಒಂದು ಗುಡ್ ನ್ಯೂಸ್ ತಂದಿದೆ.

ಚಿತ್ರದ ಸಾಂಗ್ ಟ್ರೈಲರ್ ನಲ್ಲಿ ಚಿತ್ರದ ಅದ್ದೂರಿ ಮೇಕಿಂಗ್, ಹಾಗೂ ಕಲಾತ್ಮಕತೆಯನ್ನು ನೋಡಿ ಬೆರಗಾಗಿದ್ದ ಪ್ರೇಕ್ಷಕರಿಗೆ ಚಿತ್ರತಂಡ ಇನ್ನೊಂದು ಹೊಸ ಟ್ರೈಲರನ್ನು ಬಿಡುಗಡೆ ಮಾಡಿದೆ.

Baahubali Dilogue Teaser: Rana Daggubati Hair raising Dilogue

ಹೌದು ರಾಜಮೌಳಿ ನೇತ್ರತ್ವದ 'ಬಾಹುಬಲಿ' ಚಿತ್ರತಂಡ ಹೊಚ್ಚ ಹೊಸ ಡೈಲಾಗ್ ಟ್ರೈಲರ್ ನ ಹೊರ ತಂದಿದೆ. ಈಗ ಹೊಸದಾಗಿ ಬಂದಿರುವ ಟ್ರೈಲರ್ ನಲ್ಲಿ ಇರುವ ಡೈಲಾಗ್ ನೋಡುತ್ತಾ ಇದ್ರೆ ಎಂಥವರ ಮೈ ನವೀರೇಳಿಸುವಂತಿದೆ. ಚಿತ್ರದ ಹೊಸ ಟ್ರೈಲರ್ ಯೂಟ್ಯೂಬ್ ನಲ್ಲಿ ನೀವೇ ನೋಡಿ.

ನಿರ್ದೇಶಕ ರಾಜಮೌಳಿ ಯಾವಾಗಲೂ ತಮ್ಮ ಚಿತ್ರದಲ್ಲಿ ಹೀರೋ ಪಾತ್ರಕ್ಕಿಂತ ವಿಲನ್ ರೋಲ್ ಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಅದು ಇಲ್ಲೂ ಕೂಡಾ ಎದ್ದು ಕಾಣುತ್ತಿದೆ. 'ರಾಣಾ ದಗ್ಗುಬಾಟಿಯ' ಖಡಕ್ ಧ್ವನಿ ಹಾಗೂ ಪ್ರಭಲ ದೇಹ ಟ್ರೈಲರ್ ನಲ್ಲಿ ಸಖತ್ ಹೈಲೈಟ್ ಆಗುತ್ತಿದೆ. ಅಲ್ಲದೇ ಒಬ್ಬ ನಿರ್ದಯ ರಾಜನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Baahubali Dilogue Teaser: Rana Daggubati Hair raising Dilogue

ಅನುಷ್ಕಾ ಡೈಲಾಗ್ ಗಳೂ ಕೂಡಾ ತುಂಬಾ ಇಂಟರೆಸ್ಟಿಂಗ್ ಆಗಿ ಮೂಡಿಬಂದಿದ್ದು, ಆಕೆಯ ಮಾತುಗಳಲ್ಲಿ ಬಾಹುಬಲಿ ಬಗ್ಗೆ ಇರುವ ನಂಬಿಕೆಯನ್ನು ಎತ್ತಿ ತೋರಿಸುತ್ತದೆ.

ನಿರ್ದೇಶಕರ ದೃಷ್ಟಿಯಲ್ಲಿ, ರಿಲೀಸ್ ಆಗಿರುವ ಟ್ರೈಲರ್ ಹಾಲಿವುಡ್ ಚಿತ್ರದ ಮಾದರಿಯಲ್ಲಿ ಮೂಡಿಬಂದಿದೆ ಎಂದಿದ್ದಾರೆ. ಈಗಾಗಲೇ ಹೊರಬಂದಿರುವ ಟ್ರೈಲರ್ ನೋಡಿ ಇಷ್ಟ ಆದ್ರೆ ಜುಲೈ 10 ಯಾವಾಗ ಬರುತ್ತೋ ಅಂತಾ ಕೌಂಟ್‌ಡೌನ್‌ ಮಾಡಲು ಶುರು ಹಚ್ಚಿಕೊಳ್ಳಿ.

English summary
Baahubali Dilogue Teaser: Rana Daggubati Hair raising Dilogue once again shows Rana as a ruthless king. The movie directed by S.S. Rajamouli.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada