»   » ಕಿಚ್ಚ ಅಭಿನಯದ ಬಚ್ಚನ್ ಬಾಕ್ಸಾಫೀಸ್ ರಿಪೋರ್ಟ್:Exclusive

ಕಿಚ್ಚ ಅಭಿನಯದ ಬಚ್ಚನ್ ಬಾಕ್ಸಾಫೀಸ್ ರಿಪೋರ್ಟ್:Exclusive

Posted By:
Subscribe to Filmibeat Kannada

ಯುಗಾದಿ ಹಬ್ಬದ ದಿನದಂದು ತೆರೆಗೆ ಬಂದ ಶಶಾಂಕ್ ನಿರ್ದೇಶನದ, ಕಿಚ್ಚ ಸುದೀಪ್ ಅಭಿನಯದ ಬಚ್ಚನ್ ಚಿತ್ರತಂಡ ವಿಜಯೋತ್ಸವ ಆಚರಿಸುತ್ತಿದೆ. ಕನ್ನಡ ಚಿತ್ರಗಳ ಇದುವರೆಗಿನ ಎಲ್ಲಾ ಸಾರ್ವಕಾಲಿಕ ದಾಖಲೆಗಳನ್ನು ಬಚ್ಚನ್ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಧೂಳೀಪಟಗೊಳಿಸಿ ಮುನ್ನುಗ್ಗುತ್ತಿದೆ.

ತೆಲುಗಿನ ಈಗ ಚಿತ್ರದ ಯಶಸ್ಸು, ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ತಂದು ಕೊಟ್ಟ ಜನಪ್ರಿಯತೆಯಿಂದ ಬಚ್ಚನ್ ಚಿತ್ರಕ್ಕೆ ಇನ್ನಿಲ್ಲದ ಹೈಪ್ ಸೃಷ್ಟಿಯಾಗಿತ್ತು. ಕ್ಲಾಸ್ ಮತ್ತು ಮಾಸ್ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಬಚ್ಚನ್ ಚಿತ್ರಕ್ಕೆ ರಾಜ್ಯದ ಎಲ್ಲಾ ಕಡೆಯಿಂದ ಪ್ರೇಕ್ಷಕರು ಬಹು ಪರಾಕ್ ಅನ್ನುತ್ತಿದ್ದಾರೆ.

ಆಲ್ ಇಂಡಿಯಾ ಮಟ್ಟದ ಬುಕ್ ಮೈ ಶೋನಲ್ಲಿ ಬಚ್ಚನ್ ಚಿತ್ರ ಮೊದಲ ಟ್ರೆಂಡಿಂಗ್ ನಲ್ಲಿ ಓಡುತ್ತಿದೆ. ಸಾಲು ಸಾಲು ರಜೆಗಳ ಜೊತೆಗೆ ಬೇಸಿಗೆ ರಜೆ ಆರಂಭವಾಗಿರುವುದರಿಂದ ಬಚ್ಚನ್ ಚಿತ್ರ ತುಂಬಿದ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ ಹೆಚ್ಚಿನ ಮಾಧ್ಯಮಗಳು ಫುಲ್ ಮಾರ್ಕ್ ನೀಡಿದ್ದವು. (ಬಚ್ಚನ್ ಚಿತ್ರವಿಮರ್ಶೆ)

ಒನ್ ಇಂಡಿಯಾ ಜೊತೆ ಮಾತನಾಡುತ್ತಿದ್ದ ಚಿತ್ರದ ನಿರ್ದೇಶಕ ಶಶಾಂಕ್, ಚಿತ್ರಕ್ಕೆ ಕರಾವಳಿ ಮತ್ತು ಹೈದರಾಬಾದ್ ಕರ್ನಾಟಕ ಭಾಗದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ನಾಲ್ಕು ದಿನಗಳಲ್ಲಿ ಮಲ್ಟಿಪ್ಲೆಕ್ಸ್ ಗಳಿಂದಲೇ ಸುಮಾರು 75 ಲಕ್ಷ ಬಂದಿದೆ.

ರಾಕ್ ಲೈನ್ ಮಾಲಿನಲ್ಲಿ ಚಿತ್ರ ದಿನವೊಂದಕ್ಕೆ ಐದರಿಂದ ಏಳು ಪ್ರದರ್ಶನ ಕಾಣುತ್ತಿದೆ. ಓರಿಯನ್ ಮಾಲ್, ಪಿವಿಆರ್, ಗೋಪಾಲನ್ ಸಿನಿಮಾಸ್, ಸಿನಿ ಪೋಲೀಸ್ ಮುಂತಾದ ಕಡೆ ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಚಿತ್ರದ ಕಲೆಕ್ಷನ್ ಬಗ್ಗೆ ಶಶಾಂಕ್ ಹೇಳಿದ್ದು ಹೀಗೆ..

ಬಚ್ಚನ್ ಭರ್ಜರಿ ಕಲೆಕ್ಷನ್

ಚಿತ್ರ ಒಟ್ಟು ರಾಜ್ಯಾದ್ಯಂತ 194 ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದೆ. ಕರಾವಳಿ ಮತ್ತು ಹೈದರಾಬಾದ್ ಪ್ರಾಂತ್ಯದ ಡಿಸ್ತ್ರಿಬ್ಯೂಷನ್ ರೈಟ್ಸನ್ನು ಮಾರಾಟ ಮಾಡಿದ್ದೇವೆ.

ಬಚ್ಚನ್ ಭರ್ಜರಿ ಕಲೆಕ್ಷನ್

ಬಿಡುಗಡೆಯ ದಿನ 1.5 ಕೋಟಿ ರೂಪಾಯಿ ಗಳಿಕೆಯಾಗಿತ್ತು. ಎರಡನೇ ದಿನ ಒಂದು ಕೋಟಿ ರೂಪಾಯಿ ಗಳಿಕೆಯಾಗಿತ್ತು. ಎರಡನೇ ದಿನ ವಾರದ ದಿನವಾಗಿದ್ದರೂ ಚಿತ್ರ ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಂಡಿತ್ತು.

ಬಚ್ಚನ್ ಭರ್ಜರಿ ಕಲೆಕ್ಷನ್

ಮೂರನೇ ದಿನ ಶನಿವಾರ ಒಂದು ಕೋಟಿ ರೂಪಾಯಿ ಮತ್ತು ಭಾನುವಾರ 1.5 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಒಟ್ಟಾರೆ ಚಿತ್ರಕ್ಕೆ ಇದುವರೆಗಿನ ನಾಲ್ಕು ದಿನಗಳಲ್ಲಿ ಐದು ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಇದು ಇದುವರೆಗಿನ ಯಾವುದೇ ಕನ್ನಡ ಚಿತ್ರಕ್ಕೆ ನಾಲ್ಕು ದಿನಗಳಲ್ಲಿ ಇಷ್ಟು ಕಲೆಕ್ಷನ್ ಆಗಿರಲಿಲ್ಲ.

ಬಚ್ಚನ್ ಭರ್ಜರಿ ಕಲೆಕ್ಷನ್

ಮೊದಲ ವಾರದ ಗಳಿಕೆಯಲ್ಲಿ ಚಿತ್ರ ಹೊಸ ದಾಖಲೆ ಬರೆಯುಲಿದೆ. ರಾಜ್ಯದ ಎಲ್ಲಾ ಕಡೆಯಿಂದ ಪಾಸಿಟಿವ್ ರಿಪೋರ್ಟ್ ಬರುತ್ತಿದೆ. ಕೆಲವೊಂದು ಸೆಂಟರ್ ಗಳಲ್ಲಿನ ಕಲೆಕ್ಷನ್ ಇದುವರೆಗಿನ ದಾಖಲೆ ಆದಾಯ.

ಬಚ್ಚನ್ ಭರ್ಜರಿ ಕಲೆಕ್ಷನ್

ಚಿತ್ರವನ್ನು ಗೆಲ್ಲಿಸಿದ ಎಲ್ಲರಿಗೂ ಧನ್ಯವಾದ ಹೇಳಿರುವ ಶಶಾಂಕ್ ಮುಂದಿನ ದಿನಗಳಲ್ಲಿ ಇನ್ನಷ್ಟು ವಿಭಿನ್ನ ರೀತಿಯ ಸಿನಿಮಾಗಳನ್ನು ನೀಡುವುದಾಗಿ ಹೇಳಿದ್ದಾರೆ.

English summary
Sudeep starrer, Shashank directed Bachchan box office report - Exclusive. 
Please Wait while comments are loading...