For Quick Alerts
  ALLOW NOTIFICATIONS  
  For Daily Alerts

  ಮಸ್ತ್ ಮಜಾ ನೀಡುವ 'ಬಡ್ಡಿ ಮಗನ್ ಲೈಫು' ಟ್ರೇಲರ್

  |

  ''ಕೈ ಕಾಲ್ ಮುರಿದು ದೇವಸ್ಥಾನದ ಮುಂದೆ ಕೂರಿಸ್ತಿನಿ.. ಬಿಕ್ಷೆ ಬೇಡದರೂ ಬಡ್ಡಿ ಕಟ್ಲಿ..'' ಇದು ಬಡ್ಡಿ ದುಡ್ಡು ನೀಡುವ ಬಡ್ಡಿ ಸೀನಪ್ಪ ಹೇಳುವ ಡೈಲಾಗ್.

  'ಬಡ್ಡಿ ಮಗನ್ ಲೈಫು' ಸಿನಿಮಾ ಟ್ರೇಲರ್ ಕಳೆದ ಶುಕ್ರವಾರ ಬಿಡುಗಡೆಯಾಗಿದೆ. ಟ್ರೇಲರ್ ಗೆ ಯೂಟ್ಯೂಬ್ ನಲ್ಲಿ ಮೆಚ್ಚುಗೆ ಮಾತುಗಳು ಸಿಗುತ್ತಿವೆ. ಚಿತ್ರರಂಗದ ಅನೇಕರು ಈ ಪ್ರತಿಭಾವಂತ ಹುಡುಗರ ಪ್ರಯತ್ನವನ್ನು ಪ್ರೊತ್ಸಾಹಿಸುತ್ತಿದ್ದಾರೆ.

  ವರ್ಷಾಂತ್ಯದಲ್ಲಿ ಮೂರು ದೊಡ್ಡ ಸಿನಿಮಾಗಳಿಂದ ಸಿಹಿ ಸುದ್ದಿವರ್ಷಾಂತ್ಯದಲ್ಲಿ ಮೂರು ದೊಡ್ಡ ಸಿನಿಮಾಗಳಿಂದ ಸಿಹಿ ಸುದ್ದಿ

  ಮೈಸೂರಿನ ಪ್ರತಿಭಾವಂತ ಹುಡುಗರು ಸೇರಿ ಈ ಸಿನಿಮಾ ಮಾಡಿದ್ದಾರೆ. ಸಿನಿಮಾದ ಟ್ರೇಲರ್ ಇಂಟ್ರೆಸ್ಟಿಂಗ್ ಆಗಿದೆ. ಪ್ರಮುಖವಾಗಿ ಲವಿತ್ ಅವರ ಕ್ಯಾಮರಾ ವರ್ಕ್ ತುಂಬ ಚೆನ್ನಾಗಿದೆ. ಟ್ರೇಲರ್, ಸಿನಿಮಾದ ಮೇಲೆ ಭರವಸೆ ಹುಟ್ಟಿಸಿದೆ. ಪವನ್ ಪ್ರಸಾದ್ ಸಿನಿಮಾದ ನಿರ್ದೇಶನ ಮಾಡಿದ್ದಾರೆ.

  ಹೊಸತನದಿಂದ ಟ್ರೇಲರ್ ಕೂಡಿದೆ. ಸಿನಿಮಾದ ಪಾತ್ರಗಳನ್ನು, ಸನ್ನಿವೇಶಗಳನ್ನು ಪರಿಚಯಿಸಿರುವ ರೀತಿ ಎಲ್ಲರ ಗಮನ ಸೆಳೆದಿದೆ. ಟ್ರೇಲರ್ ತುಂಬ ನೀಟ್ ಆಗಿದೆ. ಬಲ ರಾಜ್‌ವಾಡಿ, ಸಚಿನ್ ಶ್ರೀಧರ್, ಐಶ್ವರ್ಯ ರಾವ್, ರಜನಿಕಾಂತ್ ಸಿನಿಮಾದಲ್ಲಿ ನಟಿಸಿದ್ದಾರೆ.

  'ಎಲ್ಲಿಗೆ ಪಯಣ ಯಾವುದೋ ದಾರಿ' ಸಿನಿಮಾ ಶುಭಾರಂಭ'ಎಲ್ಲಿಗೆ ಪಯಣ ಯಾವುದೋ ದಾರಿ' ಸಿನಿಮಾ ಶುಭಾರಂಭ

  'ಲೂಸಿಯಾ' ಖ್ಯಾತಿಯ ಪೂರ್ಣಚಂದ್ರ ತೇಜಸ್ವಿ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಈಗಾಗಲೇ ನವೀನ್ ಸಜ್ಜು ಹಾಡಿರುವ 'ಏನ್ ಚಂದಾನೋ ತಕೋ..' ಹಾಡು ಸೂಪರ್ ಹಿಟ್ ಆಗಿದೆ.

  ಪವನ್ ಕುಮಾರ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಒಳ್ಳೆಯ ಸಿನಿಮಾ ಮಾಡಬೇಕು ಎನ್ನುವ ಪ್ರಾಮಾಣಿಕ ಪ್ರಯತ್ನದಲ್ಲಿ ಚಿತ್ರತಂಡ ಗೆದ್ದಿದೆ. ಡಿಸೆಂಬರ್ 27ಕ್ಕೆ ಸಿನಿಮಾ ರಾಜ್ಯಾದಂತ್ಯ ಬಿಡುಗಡೆಯಾಗುತ್ತಿದೆ. ಜನರ ಪ್ರತಿಕ್ರಿಯೆಗಾಗಿ ಚಿತ್ರತಂಡ ಕಾಯುತ್ತಿದೆ.

  English summary
  Baddi Magan Lifu kannada movie trailer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X