»   » ತೆಲುಗು ನಾಡಲ್ಲಿ ಶಿವಣ್ಣನಿಗೆ ಗೌರವ: ಅಲ್ಲಿಯೂ ಅಬ್ಬರಿಸಿದ 'ಟಗರು'

ತೆಲುಗು ನಾಡಲ್ಲಿ ಶಿವಣ್ಣನಿಗೆ ಗೌರವ: ಅಲ್ಲಿಯೂ ಅಬ್ಬರಿಸಿದ 'ಟಗರು'

Posted By:
Subscribe to Filmibeat Kannada
ಶಿವಣ್ಣನ ಈ ಪವರ್ ಫುಲ್ ಡಾನ್ಸ್ ನೀವ್ ನೋಡಿದ್ರೆ ವ್ಹಾ ಅಂತೀರಾ | Filmibeat Kannada

ಆಂಧ್ರ ಪ್ರದೇಶದ ಹಿಂದೂಪುರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನ ಸನ್ಮಾನಿಸಲಾಗಿದೆ. ಕಳೆದ ಎರಡ್ಮೂರು ದಿನದಿಂದ ಹಿಂದೂಪುರದಲ್ಲಿ ಲೇಪಾಕ್ಷಿ ಉತ್ಸವ ನಡೆಯುತ್ತಿದ್ದು ಈ ಕಾರ್ಯಕ್ರಮದಲ್ಲಿ ನಟ ಶಿವಣ್ಣ ವಿಶೇಷ ಆಹ್ವಾನಿತರಾಗಿ ಭಾಗಿಯಾಗಿದ್ದರು.

ಈ ವೇಳೆ ಶಿವರಾಜ್ ಕುಮಾರ್ ಅವರನ್ನ ತೆಲುಗು ನಟ ಹಾಗೂ ಶಾಸಕ ಬಾಲಕೃಷ್ಣ ಅವರು ವೇದಿಕೆಯಲ್ಲಿ ಗೌರವಿಸಿದ್ದಾರೆ. ತದ ನಂತರ ಮಾತನಾಡಿದ ಬಾಲಕೃಷ್ಣ, ಶಿವಣ್ಣ ಮತ್ತು ಡಾ ರಾಜ್ ಕುಟುಂಬದ ಜೊತೆ ತಮ್ಮ ಸಂಬಂಧದ ಬಗ್ಗೆ ಸಂತಸ ಹಂಚಿಕೊಂಡರು.

ತೆಲುಗಿನಲ್ಲಿ ಎನ್.ಟಿ.ಆರ್ ಎಂಬ ಹೆಸರು ಕೇಳಿದ್ರೆ ಹೇಗೆ ಅಭಿಮಾನಿಗಳು ಖುಷಿಯಾಗ್ತರೋ ಅದೇ ರೀತಿ ಕನ್ನಡದಲ್ಲಿ ಡಾ ರಾಜ್ ಕುಮಾರ್ ಅಂದ್ರೆ ಒಂದು ರೀತಿ ಶಕ್ತಿ ಅಭಿಮಾನಿಗಳಿಗೆ ಸಿಗುತ್ತೆ ಎಂದು ಅಣ್ಣಾವ್ರನ್ನ ನೆನಪಿಸಿಕೊಂಡರು.

ಶಿವಣ್ಣ-ಅಪ್ಪು-ಸುದೀಪ್-ದರ್ಶನ್ ಈ ಗುಣಗಳನ್ನ ಬದಲಿಸಿಕೊಳ್ಳಬೇಕಂತೆ.!

Balakrishna facilates Kannada actor Shiva rajkumar

ಈ ಮಧ್ಯೆ ಶಿವಣ್ಣ ಅಭಿನಯದ 'ಟಗರು' ಚಿತ್ರದ ಟೀಸರ್ ಹಾಗೂ ಹಾಡುಗಳ ಮೂಲಕ ಪ್ರೇಕ್ಷಕರನ್ನ ಶಿವಣ್ಣ ರಂಜಿಸಿದರು. 'ಟಗರು' ಚಿತ್ರದ ಟೈಟಲ್ ಹಾಡಿಗೆ ಸೆಂಚುರಿ ಸ್ಟಾರ್ ಜಬರ್ ದಸ್ತ್ ಸ್ಟೆಪ್ಸ್ ಹಾಕಿದ್ದು ಎಲ್ಲರ ಗಮನ ಸೆಳೆಯಿತು.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹ್ಯಾಟ್ರಿಕ್ ಹೀರೋ ಅವರ ಎನರ್ಜಿ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಶಿವಣ್ಣ ಅವರ ಡ್ಯಾನ್ಸ್ ನೋಡಿ ಆಂಧ್ರ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

Balakrishna facilates Kannada actor Shiva rajkumar

ಇದಕ್ಕೂ ಮುಂಚೆ 2016ರಲ್ಲಿ ಲೆಪಾಕ್ಷಿ ಉತ್ಸವ ನಡೆದಾಗ ಕನ್ನಡ ನಟ ಶಿವರಾಜ್ ಕುಮಾರ್ ಭಾಗಿಯಾಗಿದ್ದರು. ಈಗ ಮತ್ತೊಮ್ಮೆ ತೆಲುಗುನಾಡಿನಲ್ಲಿ ವೇದಿಕೆ ಹಂಚಿಕೊಳ್ಳಳುವುದರ ಮೂಲಕ ಈ ಕಾರ್ಯಕ್ರಮದಲ್ಲಿ ವಿಶೇಷ ಸ್ಥಾನಮಾನ ಹೊಂದಿದ್ದಾರೆ.

English summary
Telugu actor Balakrishna felicitates Kannada actor Shiva rajkumar in Lepakshi utsavalu 2018 at hindhupur.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X