»   » ಅಭಿಮಾನಿಗೆ ಹೊಡೆದು ಉಗ್ರ ಪ್ರತಾಪ ತೋರಿದ ನಟ ಬಾಲಕೃಷ್ಣ

ಅಭಿಮಾನಿಗೆ ಹೊಡೆದು ಉಗ್ರ ಪ್ರತಾಪ ತೋರಿದ ನಟ ಬಾಲಕೃಷ್ಣ

Posted By:
Subscribe to Filmibeat Kannada

ತೆಲುಗು ನಟ ಹಾಗೂ ರಾಜಕಾರಣಿ ನಂದಮೂರಿ ಬಾಲಕೃಷ್ಣ, ಅಭಿಮಾನಿಗಳ ಮೇಲೆ ಉಗ್ರ ಪ್ರತಾಪ ತೋರುವುದು ಸಾಮಾನ್ಯವಾಗಿಬಿಟ್ಟಿದೆ. ಬಾಲಕೃಷ್ಣ ಹೋದಲ್ಲಿ, ಬಂದಲ್ಲಿ ಎಲ್ಲ ಅಭಿಮಾನಿಗಳಿಗೆ ಕಪಾಳಮೋಕ್ಷ ಮಾಡಿ ಸುದ್ದಿಯಾಗುತ್ತಿದ್ದಾರೆ.

ಈ ಹಿಂದೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಗೆ ಕಪಾಳ ಮೋಕ್ಷ ಮಾಡಿ ಸುದ್ದಿಯಾಗಿದ್ದ ಬಾಲಕೃಷ್ಣ ಈಗ ತಮ್ಮ ಪಾರ್ಟಿ ಕಾರ್ಯಕರ್ತನಿಗೆ ಹೊಡೆದು ಸುದ್ದಿಯಾಗಿದ್ದಾರೆ.

ಅಭಿಮಾನಿಗೆ ಕಪಾಳಮೋಕ್ಷ ಮಾಡಿದ ತೆಲುಗು ನಟ ಬಾಲಕೃಷ್ಣ

Balakrishna slaps a fan for agian

ಅನಂತಪುರದ ಜಿಲ್ಲೆಯ ಹಿಂದೂಪುರ ನಗರದಲ್ಲಿ ತೆಲುಗುದೇಶಂ ಪಕ್ಷದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಹೆಚ್ಚು ಜನ ನೂಕುನುಗ್ಗಲು ಉಂಟಾಗಿ ಬಾಲಕೃಷ್ಣರನ್ನು ತಳ್ಳಿದ್ದಾನೆ. ಆಗ ತಾಳ್ಮೆ ಕಳೆದುಕೊಂಡ ನಟ ಅಭಿಮಾನಿಗೆ ಬಾರಿಸಿದ್ದಾರೆ.

ಇದು ಟೆರೇಸ್ ಮೇಲೆ ಇದ್ದ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

English summary
Film star and Hindupur MLA Nandamuri Balakrishna slapped a fan during the Intintiki Telugu Desam Yatra programme at Hindupur town in Anantapur district on Tuesday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada