For Quick Alerts
  ALLOW NOTIFICATIONS  
  For Daily Alerts

  ಶಿವಣ್ಣನ 'ಲೀಡರ್' ಮತ್ತು 'ಟಗರು' ಚಿತ್ರಗಳಿಗೆ ನಟ ಬಾಲಯ್ಯ ಸಾಥ್

  By Naveen
  |

  ಇತ್ತೀಚಿಗಷ್ಟೆ ನಟ ಶಿವರಾಜ್ ಕುಮಾರ್ ಅವರ ನಿವಾಸಕ್ಕೆ ಟಾಲಿವುಡ್ ನಟ ಬಾಲಕೃಷ್ಣ ಆಗಮಿಸಿದ್ದರು. ಇದೀಗ ಶಿವಣ್ಣ ಅವರ ಒಂದು ಸಿನಿಮಾದ ಆಡಿಯೋ ಮತ್ತು ಇನ್ನೊಂದು ಸಿನಿಮಾದ ಟೀಸರ್ ನ ಬಾಲಕೃಷ್ಣ ರಿಲೀಸ್ ಮಾಡಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

  ಶಿವರಾಜ್ ಕುಮಾರ್ ಮನೆಗೆ ಭೇಟಿ ಕೊಟ್ಟ ತೆಲುಗು ನಟ ಬಾಲಕೃಷ್ಣ

  ಶಿವಣ್ಣ ಮತ್ತು ಬಾಲಕೃಷ್ಣ ಇಬ್ಬರು ಎರಡು ರಾಜ್ಯಗಳ ಸೂಪರ್ ಸ್ಟಾರ್ ನಟರು. ಬಹಳ ವರ್ಷದಿಂದ ಆಪ್ತ ಸ್ನೇಹಿತರಾಗಿರುವ ಇವರು ಒಬ್ಬರಿಗೊಬ್ಬರು ಸಾಥ್ ನೀಡುತ್ತಾ ಬಂದಿದ್ದಾರೆ. ಅದೇ ರೀತಿ ಈಗ ಇವರ ಸ್ನೇಹ ಸಂಬಂಧ ಮುಂದುವರೆದಿದೆ. ಮುಂದೆ ಓದಿ...

  ಆಡಿಯೋ ಲಾಂಚ್

  ಆಡಿಯೋ ಲಾಂಚ್

  ಶಿವಣ್ಣ ಅಭಿನಯದ 'ಲೀಡರ್' ಸಿನಿಮಾದ ಆಡಿಯೋವನ್ನು ನಟ ಬಾಲಕೃಷ್ಣ ಅವರ ಕೈ ನಲ್ಲಿ ಲಾಂಚ್ ಮಾಡಿಸುವ ತಯಾರಿ ನಡೆದಿದೆ. ಸೋಮವಾರ ಶಿವಣ್ಣ ನಿವಾಸಕ್ಕೆ ಬಂದಿದ್ದ ಬಾಲಕೃಷ್ಣ ಅವರಿಗೆ ಚಿತ್ರತಂಡ ಈ ಬಗ್ಗೆ ಕೇಳಿದೆಯಂತೆ.

  'ಟಗರು' ಟೀಸರ್

  'ಟಗರು' ಟೀಸರ್

  'ಲೀಡರ್ 'ಸಿನಿಮಾದ ಆಡಿಯೋ ವೇದಿಕೆಯಲ್ಲಿಯೇ 'ಟಗರು' ಸಿನಿಮಾದ ಟೀಸರ್ ರಿಲೀಸ್ ಮಾಡುವ ಯೋಚನೆ ಇದ್ದು, ಅದನ್ನೂ ಸಹ ಬಾಲಕೃಷ್ಣ ಅವರೇ ರಿಲೀಸ್ ಮಾಡುವ ಸಾಧ್ಯತೆ ಇದೆ.

  ಪುನೀತ್ 'ಅಂಜನೀಪುತ್ರ' ಶೂಟಿಂಗ್ ಸೆಟ್ ನಲ್ಲಿ ಕಾಣಿಸಿಕೊಂಡ ನಟ ಬಾಲಕೃಷ್ಣ

  'ಶಿವಲಿಂಗ' ಶತಕ ಸಂಭ್ರಮ

  'ಶಿವಲಿಂಗ' ಶತಕ ಸಂಭ್ರಮ

  ಈ ಹಿಂದೆ ಶಿವರಾಜ್ ಕುಮಾರ್ ಅವರ 'ಶಿವಲಿಂಗ' ಸಿನಿಮಾದ ನೂರರ ಸಂಭ್ರಮದ ಕಾರ್ಯಕ್ರಮಕ್ಕೂ ನಟ ಬಾಲಕೃಷ್ಣ ಅವರೇ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

  ಶಿವಣ್ಣ ಅತಿಥಿ ಪಾತ್ರ

  ಶಿವಣ್ಣ ಅತಿಥಿ ಪಾತ್ರ

  ಬಾಲಕೃಷ್ಣ ನಟನೆಯ 100ನೇ ಸಿನಿಮಾ 'ಗೌತಮಿಪುತ್ರ ಶಾತಕರಣಿ' ಸಿನಿಮಾದ ಒಂದು ಹಾಡಿನಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದರು. ವಿಶೇಷ ಅಂದರೆ ಅದೇ ಮೊದಲ ಬಾರಿಗೆ ಶಿವಣ್ಣ ಬೇರೆ ಭಾಷೆಯ ಸಿನಿಮಾದಲ್ಲಿ ನಟಿಸಿದ್ದು.

  ಶಿವರಾಜ್ ಕುಮಾರ್ ಅಭಿಮಾನಿ ಮಾಡಿದ 'ಟಗರು' ದೋಸೆ

  ಇಬ್ಬರ ಸ್ನೇಹ ದೊಡ್ಡದು

  ಇಬ್ಬರ ಸ್ನೇಹ ದೊಡ್ಡದು

  ಶಿವಣ್ಣ ಮತ್ತು ಬಾಲಕೃಷ್ಣ ಇಬ್ಬರು ಒಳ್ಳೆಯ ಸ್ನೇಹಿತರು. ಇಬ್ಬರು ತಮ್ಮ ತಮ್ಮ ಸಿನಿಮಾಗಳಿಗೆ ಸಹಕಾರ ನೀಡುತ್ತಾ ಬಂದಿದ್ದಾರೆ.

  English summary
  Tollywood Actor Balakrishna to launch Shivarajkumar’s 'Mass Leader' audio and 'Tagaru' teaser

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X