For Quick Alerts
  ALLOW NOTIFICATIONS  
  For Daily Alerts

  ಭಕ್ತಪ್ರಹ್ಲಾದ ಚಿತ್ರದ ಮೂಲಕ ಆಟ ಮುಗಿಸಿದ ’ಪಲ್ಲವಿ’

  |

  ಈ ಹಿಂದೆ ಘೋಷಿಸಿದ ದಿನಾಂಕವಾದ ಡಿಸೆಂಬರ್ 26ರಂದು ನಗರದ ಹೃದಯ ಭಾಗದಲ್ಲಿರುವ 'ಪಲ್ಲವಿ' ಚಿತ್ರಮಂದಿರ ತನ್ನ ಸಿನಿ ಆಟ ಮುಗಿಸಿದೆ.

  ಡಾ. ರಾಜಕುಮಾರ್ ಅವರ ಮೇರು ಚಿತ್ರಗಳ ಪಟ್ಟಿಯಲ್ಲಿ ಮಂಚೂಣಿಯಲ್ಲಿರುವ 'ಪ್ರೇಮದಕಾಣಿಕೆ' ಚಿತ್ರದ ಮೂಲಕ ಆರಂಭವಾದ ಪಲ್ಲವಿ ಚಿತ್ರಮಂದಿರದ ಸಿನಿಪಯಣ ಅಣ್ಣಾವ್ರ ಮತ್ತೊಂದು ಎವರ್ ಗ್ರೀನ್ 'ಭಕ್ತ ಪ್ರಹ್ಲಾದ' ಚಿತ್ರ ಪ್ರದರ್ಶಿಸುವ ಮೂಲಕ ತನ್ನ ಸಿನಿಪರದೆಗೆ ತೆರೆ ಎಳೆದಿದೆ.

  ಕಾಕತಾಳೀಯ ಎನ್ನುವಂತೆ ಮಾರ್ಚ್ 6, 1976 ರಂದು ಡಾ. ರಾಜ್ ಮತ್ತು ಸಿದ್ದಗಂಗಾ ಶ್ರೀಗಳು ಪಲ್ಲವಿ ಚಿತ್ರಮಂದಿರವನ್ನು ಉದ್ಘಾಟಿಸಿದ್ದರು, ಕೊನೆಯ ಪ್ರದರ್ಶನಕ್ಕೆ ಎರಡು ದಿನ ಮುನ್ನ ಸೂರಿ ನಿರ್ದೇಶನದ, ಶಿವರಾಜ್ ಕುಮಾರ್ ಅಭಿನಯದ 'ಕಡ್ಡಿಪುಡಿ' ಚಿತ್ರದ ಶೂಟಿಂಗ್ ಪಲ್ಲವಿ ಚಿತ್ರಮಂದಿರದಲ್ಲಿ ನಡೆದಿದ್ದು ವಿಶೇಷ.

  ಬುಧವಾರದಂದು (ಡಿಸೆಂಬರ್ 26) ದಿನದ ಎಲ್ಲಾ ನಾಲ್ಕು ಪ್ರದರ್ಶನ ಡಾ.ರಾಜ್, ತೂಗುದೀಪ ಶ್ರೀನಿವಾಸ್, ಅನಂತ್ ನಾಗ್, ಸರಿತಾ, ಪುನೀತ್ ಮುಖ್ಯ ಭೂಮಿಕೆಯಲ್ಲಿರುವ ಭಕ್ತ ಪ್ರಹ್ಲಾದ ಚಿತ್ರ ಪ್ರದರ್ಶಿಸುವ ಮೂಲಕ ಅತ್ಯಂತ ಗುಣಮಟ್ಟದ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸುವ ಅವಕಾಶ ಸಿನಿರಸಿಕರಿಗೆ ಇನ್ನು ಮುಂದೆ ಇಲ್ಲದಂತಾಗಿದೆ.

  ಕಾರ್ಪೋರೇಷನ್ ವೃತ್ತದ ಬಳಿ 33 ಸಾವಿರ ಚದರಡಿ ವಿಸ್ತೀರ್ಣದಲ್ಲಿರುವ ಪಲ್ಲವಿ ಚಿತ್ರಮಂದಿರ ಮುಂದಿನ ದಿನಗಳಲ್ಲಿ ಆಸ್ಪತ್ರೆಯಾಗಿ ಬದಲಾಗಲಿದೆ.

  ಕನ್ನಡೇತರ ಚಿತ್ರಗಳಿಗೆ ಮೀಸಲಾಗಿದ್ದ ಪಲ್ಲವಿ ಚಿತ್ರಮಂದಿರ ತನ್ನ ಕೊನೆಯ ದಿನದ ಆಟದಲ್ಲಿ ಕನ್ನಡ ಚಿತ್ರ ಪ್ರದರ್ಶಿಸುವ ಮೂಲಕ ಕನ್ನಡ ಚಿತ್ರಗಳಿಗೆ ತನ್ನ ಕೊನೆಯ ಗೌರವ ನೀಡಿದೆ.

  English summary
  36 year old cinema hall Pallavi near Hudson Circle Bangalore is closed on December 26th. Last show shown was Dr. Rajkumar's 'Bhakta Prahlada'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X